More

    ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

    ಮುಂಬೈ: ಗುರುವಾರದ ವಹಿವಾಟಿನಲ್ಲಿ ಫಾರ್ಮಾಸ್ಯೂಟಿಕಲ್​ ಕಂಪನಿಯಾದ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್‌ ಷೇರುಗಳ ಬೆಲೆ 7.13% ರಷ್ಟು ಕುಸಿತ ಕಂಡು 59.49 ರೂಪಾಯಿ ಮುಟ್ಟಿವೆ. ಈ ಕುಸಿತಕ್ಕೆ ಪ್ರಮುಖ ಕಾರಣವೂ ಇದೆ. ಈ ಕಂಪನಿಯು ಹೂಡಿಕೆದಾರರ ಒಂದು ಷೇರು ಮೂರು ಬೋನಸ್​ ಷೇರುಗಳನ್ನು ಉಚಿತವಾಗಿ ನೀಡುತ್ತಿದೆ. ಹೀಗಾಗಿ, ಒಟ್ಟು ಷೇರುಗಳ ಸಂಖ್ಯೆ 3 ಪಟ್ಟು ಹೆಚ್ಚಾಗುವುದರಿಂದ ಷೇರುಗಳ ಬೆಲೆಯಲ್ಲಿ ಒಂದಿಷ್ಟು ಕುಸಿತವಾಗಿದೆ.

    ಕಂಪನಿಯ 35 ನೇ ಸರ್ವ ಸಾಧಾರಣ ಸಭೆ (ಎಜಿಎಂ) ಬುಧವಾರ ಜೂನ್ 26 ರಂದು ನಡೆಯಿತು ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.

    ಈ ಸಭೆಯಲ್ಲಿ ಕಳೆದ ಹಣಕಾಸು ವರ್ಷದ ತ್ರೈಮಾಸಿಕ ಫಲಿತಾಂಶವನ್ನು ಅನುಮೋದಿಸಲಾಗಿದೆ. ಇದರೊಂದಿಗೆ ಕಂಪನಿಯ ಆಡಳಿತ ಮಂಡಳಿಯಾಗಿ ಹೊಸ ಸದಸ್ಯರ ನೇಮಕಕ್ಕೂ ಒಪ್ಪಿಗೆ ನೀಡಲಾಗಿದೆ. 35ನೇ ಎಜಿಎಂನಲ್ಲಿ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್‌ನ ಹೂಡಿಕೆದಾರರಿಗೆ 3:1 ಅನುಪಾತದಲ್ಲಿ ಮೂರು ಬೋನಸ್ ಷೇರುಗಳನ್ನು ನೀಡುವುದನ್ನು ಅನುಮೋದಿಸಲಾಗಿದೆ. ಒಂದು ಷೇರನ್ನು ಹೊಂದಿರುವ ಹೂಡಿಕೆದಾರರರಿಗೆ ಮೂರು ಷೇರುಗಳನ್ನು ಬೋನಸ್ ಆಗಿ ಉಚಿತವಾಗಿ ನೀಡಲಾಗುತ್ತಿದೆ.

    ಮೇ 25, 2018 ರಲ್ಲಿ ಈ ಷೇರಿನ ಬೆಲೆ 45 ಪೈಸೆ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಷೇರು ಶೇ. 14136 ರಷ್ಟು ಏರಿಕೆಯನ್ನು ಕಂಡಿದೆ. ಅಂದಾಜು 646 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಮೈಕ್ರೋ ಕ್ಯಾಪ್ ಫಾರ್ಮಾ ಕಂಪನಿಯಾದ ರೆಮಿಡಿಯಂ ಲೈಫ್ ಕೇರ್ ಲಿಮಿಟೆಡ್‌ನ ಷೇರುಗಳು 52 ವಾರಗಳ ಗರಿಷ್ಠ ಬೆಲೆ 180 ರೂ. ಹಾಗೂ ಕನಿಷ್ಠ ಬೆಲೆ 63.80 ರೂ. ಇದೆ.

    ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್ ಸ್ಟಾಕ್ ಕಳೆದ 5 ವರ್ಷಗಳಲ್ಲಿ 74 ಪೈಸೆ ಮಟ್ಟದಿಂದ ಶೇ. 8557 ರಷ್ಟು ಏರಿಕೆಯನ್ನು ಕಂಡಿವೆ. ಕಳೆದ ಒಂದು ವರ್ಷದಿಂದ ಈ ಷೇರು ಬೆಲೆ ಕುಸಿತವಾಗಿದೆ. ಇದೇ ವರ್ಷ ಜೂನ್ 27 ರಂದು ಈ ಷೇರಿನ ಬೆಲೆ ರೂ 142.72 ಇತ್ತು. ಅಲ್ಲಿಂದ ಇಲ್ಲಿಯವರೆಗೆ ಇದರ ಬೆಲೆ ಶೇ. 55 ರಷ್ಟು ಕುಸಿದಿದೆ.

    ಇತ್ತೀಚೆಗೆ, ಕಂಪನಿಯು ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ರೂ 53.72 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಮಾರ್ಚ್ 2023 ಕ್ಕೆ ಕೊನೆಗೊಂಡ ಹಿಂದಿನ ತ್ರೈಮಾಸಿಕದಲ್ಲಿ ರೂ 4.78 ಕೋಟಿ ನಿವ್ವಳ ನಷ್ಟಕ್ಕೆ ಹೋಲಿಸಿದರೆ, ಹಣಕಾಸು ವರ್ಷ 2022-23ರ ನಾಲ್ಕನೇ ತ್ರೈಮಾಸಿಕದಲ್ಲಿನ ರೂ. 75.58 ಕೋಟಿಗಳಿಂದ 2023-24ರ ನಾಲ್ಕನೇ ತ್ರೈಮಾಸಿಕದಲ್ಲಿನ ಮಾರಾಟವು ರೂ. 1408.49 ಕೋಟಿಗಳಿಗೆ ಏರಿಕೆಯಾಗಿದೆ.

    ಷೇರುಪೇಟೆಯಲ್ಲಿ ಐತಿಹಾಸಿಕ ದಾಖಲೆ: 79,000 ಗಡಿ ದಾಟಿದ ಬಿಎಸ್​ಇ ಸೆನ್ಸೆಕ್ಸ್​; 24,000 ಮೀರಿದ ನಿಫ್ಟಿ

    ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡದ ಆರೋಪ: ಐಫೋನ್ ತಯಾರಕ ಫಾಕ್ಸ್‌ಕಾನ್ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts