More

    ಗಮನ ಸೆಳೆದ ಮಿಸ್ಟರ್, ಮಿಸ್ ಜಿಎಫ್‌ಜಿಸಿ ಸ್ಪರ್ಧೆ

    ಕುಶಾಲನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸಭಾಂಗಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಫ್ಯಾಷನ್ ಶೋ ಮತ್ತು 2023-24ನೇ ಸಾಲಿನ ಮಿಸ್ಟರ್ ಜಿಎಫ್‌ಜಿಸಿ ಮತ್ತು ಮಿಸ್ ಜಿಎಫ್‌ಜಿಸಿ ಸ್ಪರ್ಧೆ ಆಯೋಜಿಸಲಾಗಿತ್ತು.

    ಸ್ಪರ್ಧೆಯಲ್ಲಿ 12 ಯುವಕರು ಮತ್ತು 10 ಯುವತಿಯರು ಭಾಗವಹಿಸಿದ್ದರು. ವಿವಿಧ ರೀತಿಯ ಬಣ್ಣ-ಬಣ್ಣದ ವಸ್ತ್ರ ವಿನ್ಯಾಸದೊಂದಿಗೆ ಕಂಗೊಳಿಸಿದ ವಿದ್ಯಾರ್ಥಿಗಳು, ತಮ್ಮ ಸಹಪಾಠಿಗಳ ಚಪ್ಪಾಳೆಯ ಪ್ರೋತ್ಸಾಹದೊಂದಿಗೆ ಭಾಗವಹಿಸಿ ಎಲ್ಲರ ಗಮನ ಸೆಳೆದರು.

    ಮಿಸ್ಟರ್ ಜಿಎಫ್‌ಜಿಸಿ ಸ್ಪರ್ಧೆಯಲ್ಲಿ ತೃತೀಯ ಬಿಎ ವಿದ್ಯಾರ್ಥಿ ಎಚ್.ಎನ್.ಆಕಾಶ್ ಪ್ರಥಮ ಬಹುಮಾನ ಪಡೆದರೆ, ಯುವತಿಯರ ವಿಭಾಗದಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿನಿ ಅಮಿತಾ ಹ್ಯಾಂಡ್ರಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಈ ವರ್ಷದ ಮಿಸ್ ಜಿಎಫ್‌ಜಿಸಿ ಗೌರವಕ್ಕೆ ಪಾತ್ರರಾದರು. ದ್ವಿತೀಯ ಬಹುಮಾನವನ್ನು ತೃತೀಯ ಬಿಕಾಂ ವಿದ್ಯಾರ್ಥಿ ಉಜ್ವಲ್ ಹಾಗೂ ಬಿಕಾಂ ವಿದ್ಯಾರ್ಥಿ ಅದ್ನಾನ್ ತೃತೀಯ ಸ್ಥಾನ ಪಡೆದರು. ಯುವತಿಯರ ವಿಭಾಗದಲ್ಲಿ ತೃತೀಯ ಬಿಕಾಂನ ಕೆ.ಜೆ.ದೀಪ್ತಿ ಮತ್ತು ನವೀನಾ ದ್ವಿತೀಯ ಮತ್ತು ತೃತೀಯ ಸ್ಥಾನ ಹಂಚಿಕೊಂಡರು.

    ತೀರ್ಪುಗಾರರಾಗಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಸುನೀಲ್ಕುಮಾರ್, ಕುಸುಮಾ, ಪಿ.ಪಿ.ಜಯಂತಿ, ಸಿದ್ದಪ್ಪಾಜಿ, ಹರ್ಷಿತಾ, ಶಾಲಿನಿ ಕಾರ್ಯ ನಿರ್ವಹಿಸಿದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಡಿ.ಹರ್ಷ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕುಸುಮಾ ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಸುಧಾಕರ್, ಉಪನ್ಯಾಸಕರಾದ ಮನೋಜ್ ಕುಮಾರ್, ರಾಜೇಶ್, ಸಿದ್ದರಾಮೇಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts