More

    ಪೂರ್ವಜರ ನೈತಿಕ ಮೌಲ್ಯಗಳೇ ಸದ್ಯದ ಕಾನೂನುಗಳು

    ಎನ್.ಆರ್.ಪುರ: ಸಮಾಜ ಸರಿಯಾದ ಮಾರ್ಗದಲ್ಲಿ ನಡೆದುಹೋಗಲು ನಮ್ಮ ಪೂರ್ವಿಕರು ಅನುಸರಿಸಿಕೊಂಡುಬಂದ ಸಂಪ್ರದಾಯ, ವಚನಗಳು, ಕಾವ್ಯಗಳ ರೂಪದಲ್ಲಿ ಪ್ರಸ್ತಾಪಿತ ನೈತಿಕ ಮೌಲ್ಯಗಳೇ ಕಾನೂನುಗಳು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಜಾತಿ, ಧರ್ಮ, ಲಿಂಗ ತಾರತಮ್ಯ ಮಾಡದೆ ಎಲ್ಲ ವಯಸ್ಕರಿಗೂ ಸಮಾನ ಮತದಾನದ ಹಕ್ಕು ನೀಡಿದೆ. ಆದರೆ ಚುನಾವಣೆಯಲ್ಲಿ ಬಹುತೇಕರು ಜಾತಿ, ಧರ್ಮ, ಹಣ, ಮದ್ಯಗಳ ಆಧಾರದಲ್ಲೇ ಆಯ್ಕೆಯಾಗುತ್ತಿರುವುದು ವಿಪರ್ಯಾಸ ಎಂದರು.
    ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಸ್ವಾಸ್ಥೃ ಸಮಾಜ ನಿರ್ಮಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
    ವಕೀಲ ಪೌಲ್ ಚೆರಿಯನ್, ಮಾಹಿತಿ ಹಕ್ಕು ಕಾಯ್ದೆ, ಜೀವನಾಂಶ ಕಾಯ್ದೆ, ಕನಿಷ್ಠ ಕೂಲಿ ಕಾಯ್ದೆ, ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
    ಪ್ರಾಚಾರ್ಯ ಧನಂಜಯ ಮಾತನಾಡಿ, ವಿದ್ಯಾರ್ಥಿಗಳು ಭಾರತ ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಮಾನವೀಯತೆ ಬೆಳೆಸಿಕೊಂಡು ಸಹಬಾಳ್ವೆಯಿಂದ ಬದುಕಬೇಕು ಎಂದರು.
    ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್, ವಕೀಲರ ಸಂಘದ ಕಾರ್ಯದರ್ಶಿ ದೇವೇಂದ್ರ, ಹಿರಿಯ ಉಪನ್ಯಾಸಕ ನಾಗೇಶ್ ಗೌಡ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ್ ನಾಯಕ್, ಕನ್ನಡ ವಿಭಾಗದ ಮುಖ್ಯಸ್ಥೆ ಬಿ.ಟಿ.ರೂಪಾ ಇತರರಿದ್ದರು.

    See also  ಮಗಳ ಶಾಲಾ ದಾಖಲಾತಿ ಅರ್ಜಿಯಲ್ಲಿ ಜಾತಿ, ಧರ್ಮ ಕಾಲಂಗಳನ್ನು ಖಾಲಿ ಬಿಟ್ಟ ದಂಪತಿ! ನಂತರ ನಡೆದಿದ್ದಿಷ್ಟು...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts