More

    ಹಂಪಿಯಲ್ಲಿ ‘ದ ಇಂಡಿಯ ಹೌಸ್’; ಮತ್ತೆ ಮುನ್ನಲೆಗೆ ಬಂದ ಕರ್ನಾಟಕದ ವಿಶ್ವ ಪಾರಂಪರಿಕ ತಾಣ

    ಬೆಂಗಳೂರು: ತೆಲುಗಿನ ‘ಭೈರವ ಗೀತ’, ‘ಜೋಹರ್’ ಹಾಗೂ ‘ಯಕ್ಷಣಿ’ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ರಾಮ್‌ವಂಶಿ ಕೃಷ್ಣ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಹೆಸರು ‘ದ ಇಂಡಿಯ ಹೌಸ್’. ಭಾರತದ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಈ ಕಥೆ ರಚಿಸಲಾಗಿದ್ದು, ಇತ್ತೀಚೆಗೆಷ್ಟೇ ಐತಿಹಾಸಿಕ ಹಂಪಿಯಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಬಹುತಾರಾಗಣದಲ್ಲಿ ನಿರ್ಮಾಣವಾಗುತ್ತಿದೆ. ಕೆಲ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ ಬಳಿಕ ‘ಹ್ಯಾಪಿ ಡೇಸ್’ನಲ್ಲಿ ನಾಯಕನಾದ ನಿಖಿಲ್ ಸಿದ್ಧಾರ್ಥ್, ‘ಕಾರ್ತಿಕೇಯ 2’ ಮತ್ತು ‘ಸ್ಪೈ’ ಚಿತ್ರಗಳ ಬಳಿಕ ‘ದ ಇಂಡಿಯ ಹೌಸ್’ ಮೂಲಕ ಮತ್ತೆ ಪ್ಯಾನ್ ಇಂಡಿಯಾ ಹೊರಟಿದ್ದಾರೆ. ಇದರ ಜತೆಗೆ ‘ಸ್ವಯಂಭೂ’ ಹಾಗೂ ಹೆಸರಿಡದ ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ‘ದ ಇಂಡಿಯ ಹೌಸ್’ನಲ್ಲಿ ನಿಖಿಲ್‌ಗೆ ‘ದಬಾಂಗ್ 3’ ಖ್ಯಾತಿಯ ಸಾಯಿ ಮಂಜ್ರೇಕರ್ ಅವರಿಗೆ ನಾಯಕಿಯಾಗಿದ್ದಾರೆ. ಜತೆಗೆ ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜು. 1ರಂದು ಹಂಪಿಯಲ್ಲಿ ಮುಹೂರ್ತ ಆಚರಿಸಿರುವ ಚಿತ್ರತಂಡ, ಅದರ ಜತೆಗೆ ಚಿತ್ರೀಕರಣ ಪ್ರಾರಂಭಿಸಿದೆ.

    ಹಂಪಿಯಲ್ಲಿ ‘ದ ಇಂಡಿಯ ಹೌಸ್’; ಮತ್ತೆ ಮುನ್ನಲೆಗೆ ಬಂದ ಕರ್ನಾಟಕದ ವಿಶ್ವ ಪಾರಂಪರಿಕ ತಾಣ

    ಹಂಪಿಗೆ ಸಿಕ್ಕ ಮನ್ನಣೆ:
    ‘ದ ಇಂಡಿಯ ಹೌಸ್’ ಚಿತ್ರದ ಮುಹೂರ್ತ ಹಂಪಿಯಲ್ಲಿ ನೆರವೇರಿದ ಕಾರಣ ಮತ್ತೊಮ್ಮೆ ಈ ವಿಶ್ವ ಪಾರಂಪರಿಕ ಸ್ಥಳ ಮುನ್ನೆಲೆಗೆ ಬಂದಿದೆ. ಐತಿಹಾಸಿಕ ಹಂಪಿ ಚರಿತ್ರೆಯ ಜತೆ ಜತೆಗೆ ಸುಂದರ ನಿಸರ್ಗ ಹೊಂದಿದೆ. ಕಣ್ಣಿಗೆ ಕಟ್ಟುವ ಹಾಗೆ ಇಲ್ಲಿನ ಪ್ರತಿಯೊಂದು ಗುಡಿ, ಗೋಪುರ, ಬೆಟ್ಟ-ಗುಡ್ಡ ಹಾಗೂ ಐತಿಹಾಸಿಕ ಸ್ಥಳಗಳಿವೆ. ಹಂಪಿ ಪ್ರವಾಸಿಗರಿಗೆ ಸುಂದರ ತಾಣದ ಜತೆಗೆ ಚಿತ್ರಗಳ ಶೂಟಿಂಗ್ ಮಾಡಲು ಹೇಳಿ ಮಾಡಿಸಿದ ಜಾಗ. ಇಲ್ಲಿ ಸೆಟ್‌ಗಳನ್ನು ಹಾಕುವುದೇ ಬೇಡ. ಹೀಗಾಗಿ ಬಹುತೇಕ ಸಿನಿಮಾದವರು ಹಂಪಿಯನ್ನೇ ಶೂಟಿಂಗ್‌ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕರೊನಾ ಲಾಕ್‌ಡೌನ್ ಸಮಯದಲ್ಲಿ ಶೂಟಿಂಗ್‌ಗೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಶೂಟಿಂಗ್ ಅವಕಾಶ ನೀಡಲಾಗುತ್ತಿದೆ. 2022ರಲ್ಲಿ ವಿವಿಧ ಭಾಷೆಯ 35 ಸಿನಿಮಾಗಳು ಹಂಪಿಯಲ್ಲಿ ಶೂಟಿಂಗ್ ಮಾಡಲು ಅರ್ಜಿ ಸಲ್ಲಿಸಿದ್ದು, ವರ್ಷದಿಂದ ವರ್ಷಕ್ಕೆ ಆ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ.

    See also  ಈ ಚಿತ್ರಕ್ಕಾಗಿ ಹೆಚ್ಚಿನ ಸಂಭಾವನೆ ಕೇಳಿದ 'ಸೀತಾ ರಾಮಂ' ಖ್ಯಾತಿಯ ನಟಿ ಮೃಣಾಲ್​ ಠಾಕೂರ್?

    ಹಾಲಿವುಡ್ ಸಿನಿಮಾ ಶೂಟಿಂಗ್:
    ಹಂಪಿಯಲ್ಲಿ ಕೇವಲ ಕನ್ನಡ ಮಾತ್ರವಲ್ಲ ಹಾಲಿವುಡ್, ಬಾಲಿವುಡ್, ಟಾಲಿವುಡ್, ಮರಾಠಿ ಸೇರಿ ಇನ್ನು ಹಲವು ಭಾಷೆಯ ಚಿತ್ರಗಳ ಶೂಟಿಂಗ್ ಮಾಡಲಾಗಿದೆ. ನಟ ಜಾಕಿ ಚಾನ್ ಹಾಗೂ ನಟಿ ಮಲೈಕಾ ಶೇರಾವತ್ ಅಭಿನಯದ ಹಾಲಿವುಡ್ ಸಿನಿಮಾ ‘ದ ಮಿಥ್’ ಶೂಟಿಂಗ್ ಹಂಪಿಯಲ್ಲಿ ಮಾಡಲಾಗಿತ್ತು. ಇನ್ನು ಬಾಲಿವುಡ್ ನ ‘ರೌಡಿ ರಾಥೋಡ್’, ‘ಭೂಲ್ ಭುಲಯ್ಯ’ ‘ಅನಾಹತ್’ ಹಾಗೂ ಟಾಲಿವುಡ್‌ನ ‘ಮಗಧೀರ’, ‘ಶಕ್ತಿ’, ‘ಪೌರ್ಣಮಿ’ ಹಾಗೂ ‘ತಡ್ಖಾ’ ಹಾಗೂ ಮರಾಠಿಯ ‘ಹಂಪಿ’ ಹಾಗೂ ‘ಜಿಪ್ಸಿ’ ಸೇರಿ ಹಲವು ಸಿನಿಮಾಗಳ ಶೂಟಿಂಗ್ ಮಾಡಲಾಗಿದೆ. ಕನ್ನಡದ ‘ಬೆಳ್ಳಿ ಕಾಲುಂಗುರ’ ಹಾಗೂ ಪುನೀತ್ ರಾಜಕುಮಾರ್ ಅಭಿಯನದ ‘ರಣವಿಕ್ರಮ’, ‘ಜೇಮ್ಸ್’ ಸೇರಿ ಇನ್ನು ಹಲವು ಸಿನಿಮಾಗಳ ಶೂಟಿಂಗ್ ಹಂಪಿಯಲ್ಲಿ ಮಾಡಲಾಗಿದೆ.

    ಹಂಪಿಯಲ್ಲಿ ‘ದ ಇಂಡಿಯ ಹೌಸ್’; ಮತ್ತೆ ಮುನ್ನಲೆಗೆ ಬಂದ ಕರ್ನಾಟಕದ ವಿಶ್ವ ಪಾರಂಪರಿಕ ತಾಣ

    ಹಂಪಿಯಲ್ಲೇಕೆ ಚಿತ್ರೀಕರಣ:
    800 ವರ್ಷಗಳ ಇತಿಹಾಸ ಇರುವ ಹಂಪಿಯಲ್ಲಿ ಹಲವಾರು ಸುಂದರ, ಐತಿಹಾಸಿಕ, ನೈಸರ್ಗಿಕ ತಾಣಗಳಿವೆ. ವಿರುಪಾಕ್ಷ ದೇವಾಲಯ, ಕಲ್ಲಿನ ರಥ, ಹೇಮಕೂಟ, ಹಂಪೆ ಬಜಾರ್, ಆನೆಗೊಂದಿ, ಕಿಷ್ಕಿಂದೆ, ತುಂಗಭದ್ರಾ ನದಿ, ಉಗ್ರ ನರಸಿಂಹ ಮೂರ್ತಿ ಸೇರಿ ಹಲವು ಶೂಟಿಂಗ್‌ಗೆ ಅನುಕೂಲವಾಗುವ ಪ್ರದೇಶಗಳಿವೆ. ಹಾಗಾಗಿ ಐತಿಹಾಸಿಕ, ಪೌರಾಣಿಕ ಚಿತ್ರಗಳು ಮಾತ್ರವಲ್ಲ ಹಾಡುಗಳು, ಸಾಹಸ ಸನ್ನಿವೇಶಗಳ ಚಿತ್ರೀಕರಣಕ್ಕೆ ಸಾಮಾನ್ಯವಾಗಿ ಚಿತ್ರತಂಡದವರು ಹಂಪಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts