More

    ವಯಸ್ಸು 41 ಆದರೂ ಇನ್ನು ಮದುವೆ ಆಗಿಲ್ಲ ಏಕೆ? ನಟಿ ಚಾಂದಿನಿ ಕೊಟ್ಟ ಉತ್ತರ ವೈರಲ್​

    ಬೆಂಗಳೂರು: ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶಿಸಿ, ನಟಿಸಿದ ಎ ಸಿನಿಮಾ 1998 ರಲ್ಲಿ ಬಿಡುಗಡೆಯಾಯಿತು ಮತ್ತು ಬ್ಲಾಕ್​ಬಸ್ಟರ್ ಹಿಟ್ ಕೂಡ ಆಯಿತು. ಈ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಚಾಂದಿನಿ ನಟಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರ ಬಿಡುಗಡೆಯಾಗಿ 25 ವರ್ಷಗಳು ಕಳೆದಿದ್ದು, ಇತ್ತೀಚೆಗಷ್ಟೇ ಈ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು ಮತ್ತು ಉತ್ತಮ ಪ್ರತಿಕ್ರಿಯೆ ಸಹ ಪಡೆದುಕೊಂಡಿತು.

    ಇದೇ ಸಂದರ್ಭದಲ್ಲಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಚಾಂದಿನಿ ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದರು. ಉಪೇಂದ್ರ ಅವರ ಎ ಸಿನಿಮಾ ನನ್ನ ಬದುಕನ್ನೇ ಬದಲಿಸಿದ ಸಿನಿಮಾ ಎಂದರು. ನಾನು ಓದುತ್ತಿರುವ ದಿನಗಳಲ್ಲಿ ಈ ಸಿನಿಮಾಗೆ ಅವಕಾಶ ಸಿಕ್ಕಿತು. ಈ ಪಾತ್ರಕ್ಕಾಗಿ ಸಾಕಷ್ಟು ಮಂದಿ ಪೈಪೋಟಿ ನಡೆಸಿದ್ದಾರೆ. ಆದರೆ, ನನಗೆ ಗೊತ್ತಿರುವವರಿಂದಲೇ ನನ್ನ ಫೋಟೋಗಳು ಸಿನಿಮಾ ನಿರ್ಮಾಪಕರ ಕೈ ಸೇರಿದ್ದವು. ಆ ವೇಳೆ ನನ್ನನ್ನು ನೋಡಿದ ನಿರ್ಮಾಪಕರು ಆಯ್ಕೆ ಮಾಡಿದರು ಎಂದು ಚಾಂದಿನಿ ಹೇಳಿದರು.

    ಇದೇ ಸಂದರ್ಭದಲ್ಲಿ ಚಾಂದಿನಿ ತಮ್ಮ ಮದುವೆ ಬಗ್ಗೆ ಮಾತನಾಡಿದರು. ವಯಸ್ಸು 41 ಆದರು ಇನ್ನೂ ಮದುವೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿದರು. ನನಗೆ ಮದುವೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಎಲ್ಲೆ ಹೋದರು ನನ್ನ ಮದುವೆಯ ಬಗ್ಗೆ ಅನೇಕರು ಸದಾ ಪ್ರಶ್ನೆ ಕೇಳುತ್ತಾರೆ. ಆದರೆ, ಮದುವೆ ಎಂಬುದು ನಮ್ಮ ಕೈಯಲ್ಲಿಲ್ಲ. ಅದನ್ನು ದೇವರೇ ನಿರ್ಧರಿಸಬೇಕು. ನನ್ನ ಪ್ರಕಾರ ಮದುವೆ ಎಂಬುದು ಒಂದು ಪವಾಡ ಎಂದು ಹೇಳಿದರು. ಅಲ್ಲದೆ, ಲವ್ ವಿತ್ ಅರೇಂಜ್ಡ್ ಮ್ಯಾರೇಜ್ ಒಳ್ಳೆಯದು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಎ ಚಿತ್ರದ ಮುಂದುವರೆದ ಭಾಗ ಮಾಡುವುದಾಗಿ ಚಿತ್ರದ ನಾಯಕಿ ಚಾಂದಿನಿ ಘೋಷಿಸಿದ್ದು, ಅಂದು ಇಡೀ ದೇಶದಲ್ಲಿ ‘ಎ’ ಸಿನಿಮಾ ಬಿಡುಗಡೆಗೊಂಡು ಸಂಚಲನ ಮೂಡಿಸಿತ್ತು. ಶಾರುಖ್‍ ಖಾನ್​​ ಅವರಿಗೂ ‘ಎ’ ಚಿತ್ರವನ್ನು ರೀಮೇಕ್‍ ಮಾಡಬೇಕು ಎಂಬ ಆಸೆ ಇತ್ತು. ‘ಓಂ ಶಾಂತಿ ಓಂ’ ಚಿತ್ರದಲ್ಲಿ ಎ ಸಿನಿಮಾದ ಛಾಯೆ ಇದೆ. ಹಾಗಾಗಿ ಚಿತ್ರವನ್ನು ಮುಂದುವರೆಸುವುದು ನನ್ನ ಆಸೆ” ಎಂದು ಚಾಂದಿನಿ ಹೇಳಿಕೊಂಡಿದ್ದಾರೆ.

    ಕಥೆ ಮತ್ತು ಚಿತ್ರಕಥೆ ನಾನೇ ಬರೆದಿದ್ದೇನೆ ಎಂದ ಚಾಂದಿನಿ, “ಚಿತ್ರದ ನಿರ್ಮಾಪಕ ಮಂಜು, ಸಂಗೀತ ನಿದೇರ್ಶಕ ಗುರುಕಿರಣ್‍ ಮುಂತಾದವರು ಸಿನಿಮಾಗೆ ಕೈಜೋಡಿಸಲಿದ್ದಾರೆ. ಉಪೇಂದ್ರ ಬಳಿ ಹೋಗಿ ಮುಂದುವರೆದ ‘ಎ’ ಚಿತ್ರವನ್ನು ನಿರ್ದೇಶಿಸಿ, ನಟಿಸಲು ಮನವಿ ಮಾಡುತ್ತೇನೆ. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ನಾವು ತೀರ್ಮಾನ ಮಾಡಿದ್ದೇವೆ” ಎಂದು ಚಾಂದಿನಿ ತಿಳಿಸಿದ್ದಾರೆ.

    ಪಂದ್ಯವನ್ನು ಗೆಲ್ಲಲು ಅರ್ಧಶತಕ, ಶತಕಗಳ ಅವಶ್ಯಕತೆ ಇಲ್ಲ! ರೋಹಿತ್​ ಶರ್ಮ ಅಚ್ಚರಿಯ ಹೇಳಿಕೆ…

    ವ್ಯಕ್ತಿಯೊಬ್ಬನ ಶವ ಅಂದುಕೊಂಡು ಕೆರೆಯ ಬಳಿ ಹೋದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts