More

    ಟೀಮ್​ ಇಂಡಿಯಾ ಜೆರ್ಸಿ ಮೇಲೆ ಮೂಡಲಿದೆ 4ನೇ ಸ್ಟಾರ್​! ಹೀಗಿದೆ ಕಾರಣ…

    ನವದೆಹಲಿ: ಟೀಮ್​ ಇಂಡಿಯಾದ ನೀಲಿ ಜೆರ್ಸಿಯ ಮೇಲೆ ಇದುವರೆಗೆ 3 ಸ್ಟಾರ್​ಗಳು ಇರುತ್ತಿದ್ದವು. ಇದೀಗ ಭಾರತ ತಂಡದ ಟಿ20 ವಿಶ್ವಕಪ್​ ಗೆಲುವಿನೊಂದಿಗೆ ಈ ಸ್ಟಾರ್​ಗಳ ಸಂಖ್ಯೆ 4ಕ್ಕೆ ಏರಿಕೆಯಾಗಲಿದೆ. ಇದಕ್ಕೆ ಕಾರಣವೇನು ಗೊತ್ತೇ?

    ಇದುವರೆಗೆ ಭಾರತದ 3 ವಿಶ್ವಕಪ್​ ಗೆಲುವಿನ ಪ್ರತಿಕವಾಗಿ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಹೃದಯದ ಭಾಗದಲ್ಲಿ ಬಿಸಿಸಿಐ ಲಾಂಛನದ ಮೇಲೆ 3 ಸ್ಟಾರ್​ಗಳು ಇದ್ದವು. ಟಿ20-ಏಕದಿನ ಕ್ರಿಕೆಟ್​ಗೆ ಭಾರತ ಪ್ರತ್ಯೇಕ ಜೆರ್ಸಿಗಳನ್ನು ಧರಿಸಿ ಆಡಿದಾಗ ಟಿ20 ಜೆರ್ಸಿಯಲ್ಲಿ ಒಂದು ಮತ್ತು ಏಕದಿನ ಜೆರ್ಸಿಯಲ್ಲಿ ಎರಡು ಸ್ಟಾರ್​ಗಳು ಇರುತ್ತಿದ್ದವು. ಆದರೆ ಈಗ ಟಿ20ಯಲ್ಲೂ 2 ವಿಶ್ವಕಪ್​ ಗೆದ್ದಿರುವುದರಿಂದ ಇನ್ನು ಏಕದಿನ ಮತ್ತು ಟಿ20 ತಂಡಗಳ ಪ್ರತ್ಯೇಕ ನೀಲಿ ಜೆರ್ಸಿಗಳಲ್ಲಿ ತಲಾ 2 ಸ್ಟಾರ್​ಗಳು ಇರಲಿವೆ.

    ಟೀಮ್​ ಇಂಡಿಯಾ ತನ್ನ ಜೆರ್ಸಿಯ ಮೇಲೆ 4ನೇ ಸ್ಟಾರ್​ ಪಡೆದುಕೊಂಡ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡುಲ್ಕರ್​​, “ಟೀಮ್​ ಇಂಡಿಯಾ ಜೆರ್ಸಿಗೆ ಸೇರ್ಪಡೆಯಾಗುವ ಪ್ರತಿ ಸ್ಟಾರ್​ ಕೂಡ ಇಡೀ ದೇಶಕ್ಕೆ ಸ್ಫೂರ್ತಿ ತುಂಬುತ್ತದೆ’ ಎಂದು ಎಕ್ಸ್​ನಲ್ಲಿ ಬರೆದಿದ್ದಾರೆ.

    2007ರ ಚೊಚ್ಚಲ ಟಿ20 ವಿಶ್ವಕಪ್​ ವಿಜೇತ ನಾಯಕ ಎಂಎಸ್​ ಧೋನಿ ಗೆಲುವಿನ ಬೆನ್ನಲ್ಲೇ ಅಪರೂಪಕ್ಕೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದು, “2024ರ ವಿಶ್ವ ಚಾಂಪಿಯನ್ನರೇ ನನ್ನ ಹೃದಯಬಡಿತವನ್ನು ಏರಿಸಿದಿರಿ. ಶಾಂತಚಿತ್ತ, ಆತ್ಮನಂಬಿಕೆಯಿಂದ ಆಡಿದಕ್ಕಾಗಿ ಅಭಿನಂದನೆಗಳು. ವಿಶ್ವಕಪ್​ ಟ್ರೋಫಿಯನ್ನು ಮತ್ತೆ ಮನೆಗೆ ತರುತ್ತಿರುವುದಕ್ಕಾಗಿ ನಿಮಗೆ ಎಲ್ಲ ಭಾರತೀಯರ ಪರವಾಗಿ ಧನ್ಯವಾದಗಳು. ನನ್ನ ಜನ್ಮದಿನಕ್ಕೆ (ಜುಲೈ 7) ಇದು ಅಮೂಲ್ಯ ಉಡುಗೊರೆಯಾಗಿದೆ’ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಟಿ20 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ಬಂಪರ್​ ಬಹುಮಾನ ಘೋಷಿಸಿದ ಬಿಸಿಸಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts