More

    ಬರ್ತ್​ಡೇ ಗಿಫ್ಟ್​ಗಾಗಿ ಥ್ಯಾಂಕ್ಸ್​; ಟಿ20 ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾಗೆ ವಿಭಿನ್ನವಾಗಿ ಶುಭಕೋರಿದ ಧೋನಿ

    ನವದೆಹಲಿ: 09ನೇ ಆವೃತ್ತೊಉ ಚುಟುಕು ವಿಶ್ವ ಸಮರದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸುವ ಮೂಲಕ ಟೀಮ್​ ಇಂಡಿಯಾ ಚಾಂಪಿಯನ್​​ ಆಗಿ ಹೊರಹೊಮ್ಮಿದ್ದು, ಸುದೀರ್ಘ ಕಾಯುವಿಕೆಯನ್ನು ರೋಹಿತ್​ ಶರ್ಮಾ ಪಡೆ ಅಂತ್ಯಗೊಳಿಸಿದೆ. 2007 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಆ ಬಳಿಕ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    ಟೀಮ್​ ಇಂಡಿಯಾದ ಐತಿಹಾಸಿಕ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದು, ಇದೀಗ ಟೀಮ್​ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ರೋಹಿತ್​ ಪಡೆಗೆ ಶುಭಾಶಯ ಕೋರಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಇದು ಸೂಕ್ತ ಸಮಯ; ವಿರಾಟ್​ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಘೋಷಿಸಿದ ರೋಹಿತ್​ ಶರ್ಮಾ

    ನನ್ನ ಎದೆ ಬಡಿತ ಹೆಚ್ಚಾಗಿತ್ತು. ಆದರೆ ದೃಢ ನಂಬಿಕೆಯೊಂದಿಗೆ ನೀವೆಲ್ಲರೂ ಉತ್ತಮವಾಗಿ ಆಡಿದ್ದೀರಿ. ತವರಿನ ಮತ್ತು ಪ್ರಪಂಚದ ಎಲ್ಲೆಡೆ ಇರುವ ಭಾರತೀಯರಿಂದ, ವಿಶ್ವಕಪ್​​ಅನ್ನು ಮರಳಿ ಮನೆಗೆ ತಂದಿದ್ದಕ್ಕಾಗಿ ದೊಡ್ಡ ಧನ್ಯವಾದಗಳು. ಅಭಿನಂದನೆಗಳು. ಅಮೂಲ್ಯ ಹುಟ್ಟುಹಬ್ಬದ ಉಡುಗೊರೆಗೆ ಧನ್ಯವಾದಗಳು ಎಂದು ಮಹೇಂದ್ರ ಸಿಂಗ್​ ಧೋನಿ ಬರೆದುಕೊಂಡಿದ್ದಾರೆ.

    ಇಲ್ಲಿ ಮಹೇಂದ್ರ ಸಿಂಗ್​ ಧೋನಿ ಮುಖ್ಯವಾಗಿ ಧನ್ಯವಾದ ತಿಳಿಸಲು ಕಾರಣವೇನೆಂದರೆ ಜುಲೈ 07ರಂದು ಕ್ಯಾಪ್ಟನ್​ ಕೂಲ್​ 43ನೇ ವಸಂತಕ್ಕೆ ಕಾಲಿಡುತ್ತಿದ್ದು, ಇದಕ್ಕೂ ಮುನ್ನ ಧೋನಿಗೆ ಬರ್ತ್​ಡೇ ಗಿಫ್ಟ್​ ಆಗಿ ಟಿ20 ವಿಶ್ವಕಪ್​ ಗೆಲುವನ್ನು ಸಮರ್ಪಿಸುವುದಾಗಿ ಆಟಗಾರರು ಹೇಳಿರುವ ಸಾಧ್ಯತೆಯಿದೆ. ಹೀಗಾಗಿ ಟೀಮ್​ ಇಂಡಿಯಾ ವಿಶ್ವ ಕಪ್​ ಗೆಲ್ಲುತ್ತಿದ್ದಂತೆ ಧೋನಿ ಅಭಿನಂದನೆಯ ಜೊತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts