More

    ಟಿಕೆಟ್ ದರದಲ್ಲಿ ಹೆಚ್ಚಳ ಬೇಕಿದ್ದಲ್ಲಿ ಹೀಗೆ ಮಾಡಿ! ನಿರ್ಮಾಪಕರಿಗೆ ತೆಲಂಗಾಣ ಸಿಎಂ ಕೊಟ್ಟ ಹೊಸ ಮಾರ್ಗಸೂಚಿ ಇದು

    ತೆಲಂಗಾಣ: ಪ್ರಸ್ತುತ ಟಾಲಿವುಡ್​ನ ಸ್ಟಾರ್​ ನಟರ​ ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆಯಿಡಲು ಸಾಲುಗಟ್ಟಿ ನಿಂತಿದ್ದು, ದಿನಾಂಕಗಳ ವ್ಯತ್ಯಾಸಗಳು ಮಾತ್ರ ಸದ್ಯದ ಸಮಸ್ಯೆಯಾಗಿದೆ. ಆದರೆ, ಈ ಮಧ್ಯೆ ಚಿತ್ರ ನಿರ್ಮಾಪಕರು ತಮ್ಮ ಬಿಗ್ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿ ಎಂಬ ಮನವಿ ಮುಂದಿಟ್ಟ ಬೆನ್ನಲ್ಲೇ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಶರಣ ತತ್ವಗಳ ಅಧ್ಯಯನದಿಂದ ಜೀವನ ಸಾರ್ಥಕ

    ಟಿಕೆಟ್ ದರದಲ್ಲಿ ಏರಿಕೆ ಬೇಕು ಎಂದಾದಲ್ಲಿ ಆಯಾ ಸಿನಿಮಾ ನಿರ್ಮಾಪಕರು ಈಗ ನಿರ್ದಿಷ್ಟ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕಿದೆ. ಮನರಂಜನಾ ಉದ್ಯಮದ ಮೂಲಕ ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಹೊಸ ನಿಯಮಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಒಂದು ಚಲನಚಿತ್ರವು ಟಿಕೆಟ್ ದರವನ್ನು ಹೆಚ್ಚಿಸಲು ಬಯಸಿದರೆ, ಆ ಸಿನಿಮಾದ ನಾಯಕ ನಟ ಎರಡು ಸಾರ್ವಜನಿಕ ಜಾಗೃತಿ ವಿಡಿಯೋಗಳಲ್ಲಿ ಅಭಿನಯಿಸಬೇಕು. ಒಂದು ಸೈಬರ್ ಕ್ರೈಂ ಮತ್ತೊಂದು ಮಾದಕ ದ್ರವ್ಯ ವಿರೋಧಿ. ಈ ದೃಶ್ಯಗಳನ್ನು ದರ ಏರಿಕೆಯ ವಿನಂತಿಯೊಂದಿಗೆ ಸಲ್ಲಿಸಬೇಕು ಮತ್ತು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ ಮೊದಲು ಪ್ರಸಾರ ಮಾಡಬೇಕು ಎಂಬುದು ನಿಯಮ.

    ಇದನ್ನೂ ಓದಿ: ವಿನ್ನಿಂಗ್​ ಅಮೌಂಟ್​ ನನ್ನ ತಾಯಿಯ ಅಕೌಂಟ್​ಗೆ ಹಾಕಿ; ಬಿಸಿಸಿಐಗೆ ಹಾರ್ದಿಕ್​ ಮನವಿ ಮಾಡಲು ಕಾರಣವೇನು?

    ಇದನ್ನು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರವೇ ಸರ್ಕಾರ ಟಿಕೆಟ್ ದರ ಏರಿಕೆಗೆ ಅನುಮೋದಿಸಲಿದೆ ಎಂದು ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದಾರೆ. ಈ ವಿನೂತನ ಪ್ರಯತ್ನಕ್ಕೆ ಮುಂದಾದ ಮುಖ್ಯಮಂತ್ರಿಗಳಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಟಾಲಿವುಡ್ ಸ್ಟಾರ್ ಮೆಗಾಸ್ಟಾರ್ ಚಿರಂಜೀವಿ ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ,(ಏಜೆನ್ಸೀಸ್)

    ಕಳಪೆ ಫಾರ್ಮ್​​ ದಿನಗಳನ್ನು ನೆನೆದು ದ್ರಾವಿಡ್​ ಮುಂದೆ ವಿರಾಟ್​​​ ಭಾವುಕ! ಹೇಳಿಕೊಂಡ ಮಾತುಗಳಿವು

    See also  ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಹೆಸರು ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts