More

    ಟೀಮ್​ ಇಂಡಿಯಾದ 11 ಆಟಗಾರರೂ ಸಹ ಈ ‘ಕಳ್ಳತನ’ದಲ್ಲಿ ಭಾಗಿ! ದೆಹಲಿ ಪೊಲೀಸ್​ ಟ್ವೀಟ್ ವೈರಲ್

    ನವದೆಹಲಿ: ನಿನ್ನೆ (ಜೂನ್​ 24) ನಡೆದ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 8​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 24 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಸಿಸ್ ಪಡೆಗೆ ಮಣ್ಣು ಮುಕ್ಕಿಸಿದ ಭಾರತಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಸ್ಪೋಟಕ ಇನ್ನಿಂಗ್ಸ್​ ಆಸೆರೆಯಾಯಿತು. ಸದ್ಯ ಸೆಮಿಫೈನಲ್​ ಮೂಡ್​ನಲ್ಲಿರುವ ಭಾರತದ ಆಟಗಾರರಿಗೆ ದೆಹಲಿ ಪೊಲೀಸರು ಮಾಡಿದ ಟ್ವೀಟ್​ವೊಂದು ಸದ್ಯ ಭಾರೀ ಅಚ್ಚರಿ ಮೂಡಿಸಿದೆ.

    ಇದನ್ನೂ ಓದಿ: ಭಾರೀ ಮಳೆಗೆ ಅಯೋಧ್ಯೆ ರಾಮ ಮಂದಿರದ ಛಾವಣಿ ಸೋರಿಕೆ; ನಿರ್ಮಾಣ ಸಮಿತಿ ಸ್ಪಷ್ಟನೆ

    92 ರನ್​ಗಳ ಕೊಡುಗೆ ನೀಡುವ ಮೂಲಕ ಕ್ಯಾಪ್ಟನ್​ ಇನ್ನಿಂಗ್ಸ್​ ಆಡಿ, ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮ, ತಂಡವನ್ನು ಗೆಲುವಿನ ಹಾದಿಗೆ ಮುನ್ನಡೆಸಿದರು. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಜಯಭೇರಿಯಾಗುತ್ತಿದ್ದಂತೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಈ ಮಧ್ಯೆ ವಿಚಿತ್ರ ಹಾಗೂ ವಿಭಿನ್ನ ಟ್ವೀಟ್​ಗಳು ಆಗಾಗ್ಗೆ ಭಾರೀ ಚರ್ಚೆಗೆ ಗ್ರಾಸವಾಗುವುದು ನಮಗೆಲ್ಲಾ ತಿಳಿದೇ ಇದೆ. ಆದರೆ, ದೆಹಲಿ ಪೊಲೀಸರು ಪಂದ್ಯ ವೀಕ್ಷಿಸಿದ ಬಳಿಕ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ (ಈ ಹಿಂದಿನ ಟ್ವೀಟ್​) ಮಾಡಿದ ಪೋಸ್ಟ್​ವೊಂದು ಇದೀಗ ನೆಟ್ಟಿಗರ ಗಮನಸೆಳೆದಿದ್ದು, ಪೊಲೀಸರು ಹೀಗೂ ಟ್ವೀಟ್ ಮಾಡುತ್ತಾರಾ ಎಂದು ಹೇಳುವಂತಿದೆ.

    ಸೋಮವಾರ (ಜೂ.24) ಸೇಂಟ್ ಲೂಸಿಯಾದ ಡ್ಯಾರೆನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾವನ್ನು ಸೋಲಿಸಿದ ರೀತಿಗೆ ಫಿದಾ ಆದ ದೆಹಲಿ ಪೊಲೀಸರು, “ದಿಸ್ ಜಸ್ಟ್ ಇನ್: ಕೆರಿಬಿಯನ್‌ನಲ್ಲಿ ನಡೆದ ‘ಹಿಟ್-ಅಂಡ್-ರನ್’ ಘಟನೆಯಲ್ಲಿ, ಟೀಂ ಇಂಡಿಯಾದ 11 ಪುರುಷ ಆಟಗಾರರು ಒಂದು ಶತಕೋಟಿ ಹೃದಯಗಳನ್ನು ‘ಕಳ್ಳತನ’ ಮಾಡಿದ್ದಾರೆ. ಆರಂಭಿಕ ತನಿಖೆಯು 19/11ರ ಪ್ರತೀಕಾರದ ಉದ್ದೇಶವನ್ನು ತೋರಿಸುತ್ತದೆ” ಎಂದು ಹಾಸ್ಯಸ್ಪದವಾಗಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಬಿರಿಯಾನಿಯಲ್ಲಿ ಲೆಗ್​ ಪೀಸ್​ ಸಿಕ್ಕಿಲ್ಲ ಎಂದು ಕಿರಿಕ್; ಕ್ಷಣಾರ್ಧದಲ್ಲೇ ರಣರಂಗವಾದ ಮದುವೆ ಮನೆ

    ಸದ್ಯ ದೆಹಲಿ ಪೊಲೀಸರು ಮಾಡಿದ ಟ್ವೀಟ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಗಳ ಕ್ರಿಕೆಟ್ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ,(ಏಜೆನ್ಸೀಸ್).

    ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

    ಸೈನ್ಸ್​-ಫಿಕ್ಷನ್​ ಚಿತ್ರಕ್ಕೆ ಹೆಚ್ಚಾಯ್ತು ಬೇಡಿಕೆ! ಈ ರಾಜ್ಯಗಳಲ್ಲಿ ಟಿಕೆಟ್ ದರ ಎಷ್ಟು ದುಬಾರಿ? ಹೀಗಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts