More

    ವಿರಾಟ್​ ಕೊಹ್ಲಿ ಹತ್ತಿರ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಾಕಿದ ರೋಹಿತ್​ ಶರ್ಮ! ವಿಡಿಯೋ ವೈರಲ್​

    ನವದೆಹಲಿ: ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಸೆ ಇಂದು ಈಡೇರಿದೆ. 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಟೀಮ್​ ಇಂಡಿಯಾವನ್ನು ಇಂಗ್ಲೆಂಡ್​ ತಂಡ ಹೀನಾಯವಾಗಿ ಸೋಲಿಸಿತ್ತು. 10 ವರ್ಷಗಳ ಬಳಿಕ ಟೀಮ್​ ಇಂಡಿಯಾ ಸೇಡು ತೀರಿಸಿಕೊಂಡಿದೆ.

    ನಿನ್ನೆ (ಜೂನ್​ 27) ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ರೋಹಿತ್ ಶರ್ಮ ಪಡೆ 67 ರನ್​ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ನಾಯಕನಾಗಿ ರೋಹಿತ್​ (57) ಉತ್ತಮ ಇನ್ನಿಂಗ್ಸ್‌ ಆಡುವ ಮೂಲಕ ಟೀಮ್​ ಇಂಡಿಯಾವನ್ನು ಮುನ್ನಡೆಸಿದರು. ಸೂರ್ಯಕುಮಾರ್ ಯಾದವ್ (47) ರೋಹಿತ್​ಗೆ ಸಾಥ್​ ನೀಡಿದರು. ಬಳಿಕ ಸ್ಪಿನ್ನರ್‌ಗಳು (ಅಕ್ಷರ್​ ಪಟೇಲ್​ ಮತ್ತು ಕುಲದೀಪ್​ ಯಾದವ್​ ತಲಾ 3 ವಿಕೆಟ್​) ಮಾಡಿದ ಜಾದೂವಿನಿಂದ ಆಂಗ್ಲರ ಪಡೆ ನೆಲಕಚ್ಚಿತು. ಅಂತಿಮವಾಗಿ ಭಾರತ ತಂಡ ಫೈನಲ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿತು. ಸೆಮಿಫೈನಲ್‌ಗೆ ಮಳೆ ಅಡ್ಡಿಪಡಿಸಿದರೂ ಪೂರ್ಣ ಪಂದ್ಯವನ್ನು ನಡೆಸಲಾಯಿತು. ಟೀಮ್​ ಇಂಡಿಯಾ ವಿಜೇತರಾಗಿ ಹೊರಹೊಮ್ಮಿತು. ಶನಿವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಶಸ್ತಿ ಹೋರಾಟಕ್ಕೆ ಭಾರತ ತಂಡ ಸಜ್ಜಾಗಿದೆ.

    ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮ ಕೊಂಚ ಭಾವುಕರಾದರು. ಅಲ್ಲದೆ, ಕಣ್ಣೀರಾಕಿದರು. ಈ ಘಟನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದೆ. ರೋಹಿತ್ ಶರ್ಮ ನಾಯಕತ್ವದಲ್ಲೇ ಟೀಮ್ ಇಂಡಿಯಾ 2022ರಲ್ಲಿ ಟಿ20 ವಿಶ್ವಕಪ್ ಆಡಿತು. ಈ ಟೂರ್ನಿಯಲ್ಲಿ ಸೆಮಿಸ್‌ಗೆ ತೆರಳಿದ್ದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿತ್ತು. 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಟೀಮ್​ ಇಂಡಿಯಾ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಎರಡು ದೊಡ್ಡ ಸೋಲಿನ ನಂತರ, ಟೀಮ್​ ಇಂಡಿಯಾ ಮತ್ತೊಮ್ಮೆ ರೋಹಿತ್​ ನಾಯಕತ್ವದಲ್ಲಿ ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸಿದೆ. ಈ ಖುಷಿಯ ಕ್ಷಣದಲ್ಲಿ ನಾಯಕ ರೋಹಿತ್ ಶರ್ಮ ಭಾವುಕರಾದರು. ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಮ್‌ಗೆ ಹೋಗುತ್ತಿದ್ದಾಗ ರೋಹಿತ್, ಕೊಹ್ಲಿಯನ್ನು ಹುರಿದುಂಬಿಸುತ್ತಾ ಭಾವುಕರಾದರು. ಈ ವೇಳೆ ಕೊಹ್ಲಿ ರೋಹಿತ್‌ಗೆ ಸಾಂತ್ವನ ಹೇಳಲು ಯತ್ನಿಸಿದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಉತ್ತಮ ಸ್ಕೋರ್ ದಾಖಲಿಸಿತು. ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ನಾಯಕ ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 47 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 23 ರನ್ ಗಳಿಸಿ ಉತ್ತಮ ರನ್​ ಕಾಣಿಕೆ ನೀಡಿದರು. ಇಂಗ್ಲೆಂಡ್‌ನ ಬೌಲರ್‌ಗಳಲ್ಲಿ ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದು ಮಿಂಚಿದರು.

    172 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 16.4 ಓವರ್​ಗಳಲ್ಲಿ 103 ರನ್ ಗಳಿಗೆ ಆಲೌಟಾಯಿತು. ಹ್ಯಾರಿ ಬ್ರೂಕ್ 25, ನಾಯಕ ಜೋಸ್ ಬಟ್ಲರ್ 23 ಮತ್ತು ಜೋಫ್ರಾ ಆರ್ಚರ್ 21 ರನ್ ಗಳಿಸಿದರು. ಇತರ ಬ್ಯಾಟರ್‌ಗಳು ವಿಫಲರಾದರು. ಭಾರತದ ಬೌಲರ್‌ಗಳಲ್ಲಿ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದರು. (ಏಜೆನ್ಸೀಸ್​)

    ಹೊಸ ಇತಿಹಾಸ ಬರೆದ ರೋಹಿತ್​: ಈ ದಾಖಲೆ ನಿರ್ಮಿಸಿದ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ!

    ಹಾವೇರಿಯಲ್ಲಿ ಭೀಕರ ಅಪಘಾತ: 13 ಮಂದಿ ದುರ್ಮರಣ, ತಾಯಿಯ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts