More

    ಶಿಕ್ಷಕಿಯರ ಪ್ರಶಿಕ್ಷಣ ವರ್ಗ ಸಂಪನ್ನ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿ ಸೇವಾ ಭಾರತಿ ಟ್ರಸ್ಟಿನ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆ ಪಾಠ ಹಾಗೂ ಸಂಸ್ಕಾರ ಕೇಂದ್ರಗಳ ಶಿಕ್ಷಕಿಯರಿಗಾಗಿ ಎರಡು ದಿನಗಳ ಪ್ರಶಿಕ್ಷಣ ವರ್ಗ ಆಯೋಜಿಸಲಾಗಿತ್ತು.

    ಮಜೇಥಿಯಾ ಫೌಂಡೇಷನ್​ನ ನಂದಿನಿ ಮಜೇಥಿಯಾ ಹಾಗೂ ವಿದ್ಯಾವಿಕಾಸ ಪ್ರಕಲ್ಪದ ಪ್ರಾಂತ ಸಮಿತಿ ಅಧ್ಯಕ್ಷೆ ಭಾರತಿ ನಂದಕುಮಾರ ಉದ್ಘಾಟಿಸಿದರು. ಎರಡು ದಿನ ನಡೆದ ಹತ್ತು ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಆರ್​ಎಸ್​ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ, ಧಾರವಾಡ ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಸೇವಾ ಭಾರತಿ ಟ್ರಸ್ಟಿನ ಪ್ರಾಂತ ಕಾರ್ಯದರ್ಶಿ ರಘು ಅಕ್ಮಂಚಿ, ಚಂದ್ರಶೇಖರ ಗೋಕಾಕ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ವೀಣಾ ಅಠವಳೆ, ಪ್ರಾಧ್ಯಾಪಕ ರಾಜಕುಮಾರ ಪಾಟೀಲ, ರಾಚಯ್ಯ ವಾರಿಕಲ್ಮಠ, ಪ್ರಾಣೇಶ ಜೋಶಿ ಪಾಲ್ಗೊಂಡಿದ್ದರು.

    ಸಮಾರೋಪ ಸಮಾರಂಭದಲ್ಲಿ ಸೇವಾ ಭಾರತಿ ಟ್ರಸ್ಟ್ ಪ್ರಾಂತ ಅಧ್ಯಕ್ಷ ಪೂರ್ಣಚಂದ್ರ ಘಂಟಸಾಲ, ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ, ಭಾರತಿ ನಂದಕುಮಾರ ಇದ್ದರು.

    ಹುಬ್ಬಳ್ಳಿ ಮಹಾನಗರ, ಗ್ರಾಮಾಂತರ, ಕುಂದಗೋಳ, ನವಲಗುಂದ ತಾಲೂಕುಗಳಿಂದ 70 ಜನ ಶಿಕ್ಷಕಿಯರು ಭಾಗವಹಿಸಿದ್ದರು. ವೀಣಾ ಮಳಿಯೆ, ರತ್ನಾ ಮಾತಾಜಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts