More

    ಅಪಘಾತ ತಡೆಯಲು ಡಿಟೆಕ್ಟಿವ್ ಯಂತ್ರ ಅಳವಡಿಕೆ

    ತಾವರಗೇರಾ: ಅತಿ ವೇಗದಿಂದ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸಲು ಪಟ್ಟಣದಲ್ಲಿ ಸ್ಪೀಡ್ ಲೇಸರ್ ಡಿಟೆಕ್ಟಿವ್ ಯಂತ್ರ ಅಳವಡಿಸಲಾಗುತ್ತಿದೆ ಎಂದು ಪಿಎಸ್‌ಐ ಮಲ್ಲಪ್ಪ ವಜ್ರದ ಹೇಳಿದರು.

    ಪಟ್ಟಣ ಹೊರವಲಯದ ಲಿಂಗಸುಗೂರು ರಸ್ತೆಯಲ್ಲಿ ಸ್ಪೀಡ್ ಲೇಸರ್ ಡಿಟೆಕ್ಟಿವ್ ಯಂತ್ರ ವೀಕ್ಷಿಸಿ ಗುರುವಾರ ಮಾತನಾಡಿದರು. ತಾವರಗೇರಾ ಕುಷ್ಟಗಿ, ಗಂಗಾವತಿ, ಲಿಂಗಸುಗೂರು, ಸಿಂಧನೂರಿಗೆ ಕೇಂದ್ರ ಬಿಂದುವಾಗಿದೆ. ಹೀಗಾಗಿ ಹೆಚ್ಚಾಗಿ ವಾಹನಗಳು ಸಂಚರಿಸುತ್ತವೆ ಎಂದರು.

    ರಸ್ತೆ ಎಷ್ಟೇ ಅಗಲವಿದ್ದರೂ ವಾಹನಗಳು ಅತಿ ವೇಗದಿಂದ ಸಂಚರಿಸುವುದರಿಂದ ಅಪಘಾತಗಳು ಮೇಲಿಂದ ಮೇಲೆ ಆಗುತ್ತಿವೆ. ಅತಿಯಾದ ವೇಗದ ಚಲಾವಣೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೂ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಪೊಲೀಸ್ ಇಲಾಖೆಗೆ ಯಂತ್ರ ನೀಡಿದೆ. ಈ ಯಂತ್ರದಿಂದ ಐದು ಕಿ.ಮಿ. ದೂರದಿಂದ ವಾಹನಗಳ ವೇಗವನ್ನು ಪತ್ತೆಹಚ್ಚ ಬಹುದಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಎಲ್ಲರೂ ಸಂಚಾರ ನಿಯಮ ಪಾಲಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts