More

    ಸನಾತನ ಧರ್ಮ ನಿರ್ಮೂಲನೆ ಹೇಳಿಕೆ; ಉದಯನಿಧಿ ಸ್ಟಾಲಿನ್​ಗೆ ಷರತ್ತುಬದ್ಧ ಜಾಮೀನು​

    ಬೆಂಗಳೂರು: 2023ರಲ್ಲಿ ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಿಎಂ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್​ಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

    2023ರ ಸೆಪ್ಟೆಂಬರ್​ನಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಉದಯನಿಧಿ ಸ್ಟಾಲಿನ್​ ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ಅವರ ಹೇಳಿಕೆಯೂ ದೇಶಾದ್ಯಂತ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಪರಮೇಶ್​ ಎಂಬುವವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಉದಯನಿಧಿಗೆ ನೋಟಿಸ್​ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

    ಇದನ್ನೂ ಓದಿ: VIDEO| ಬಿರಿಯಾನಿಯಲ್ಲಿ ಲೆಗ್​ ಪೀಸ್​ ಸಿಕ್ಕಿಲ್ಲ ಎಂದು ಕಿರಿಕ್; ಕ್ಷಣಾರ್ಧದಲ್ಲೇ ರಣರಂಗವಾದ ಮದುವೆ ಮನೆ

    ಸಚಿವ ಉದಯನಿಧಿ ಪರ ಹಿರಿಯ ವಕೀಲ ವಿಲ್ಸನ್​ ವಾದ ಮಂಡಿಸಿದ್ದು, ತಮ್ಮ ಕಕ್ಷಿದಾರರ ವಿರುದ್ಧ ದೇಶಾದ್ಯಂತ ಏಳು ಪ್ರಕರಣಗಳು ದಾಖಲಾಗಿದ್ದು, ಉದಯನಿಧಿ​​ ಅವರು ಒಂದು ರಾಜ್ಯದ ಕ್ರೀಡಾ ಸಚಿವ. ಹೀಗಾಗಿ, ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ‌ ನೀಡಬೇಕು. ಸುಪ್ರೀಂ ಕೋರ್ಟ್​ನಿಂದ ಅವರಿಗೆ ವಿನಾಯಿತಿ ಸಿಕ್ಕಿದೆ. ಇನ್ನೂ ಅದೇಶದ ಪ್ರತಿ ಲಭ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು  ವಿಚಾರಣೆಯನ್ನು ಆಗಸ್ಟ್​ 8ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ಒಳಗಾಗಿ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಸಲ್ಲಿಸುವಂತೆ ಉದಯನಿಧಿ ಪರ ವಕೀಲರಿಗೆ ನ್ಯಾಯಧೀಶರು ಸೂಚಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯನಿಧಿಗೆ 1 ಲಕ್ಷ ರೂ. ಬಾಂಡ್​ ಶ್ಯೂರಿಟಿಯೊಂದಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts