More

    T20 World Cup: ಟೀಂ ಇಂಡಿಯಾ ಗೆಲುವಿಗಾಗಿ ವಿಶ್ವ ಪ್ರಸಿದ್ಧ ಸಿದ್ಧಿವಿನಾಯಕ ದೇಗುದಲ್ಲಿ ವಿಶೇಷ ಪೂಜೆ!

    ಬೆಂಗಳೂರು: ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಇನ್ನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತದ ಗೆಲ್ಲಲ್ಲಿ ಎಂದು ಪ್ರಾರ್ಥಿಸಿ ಮುಂಬೈನ ಸಿದ್ಧಿವಿನಾಯಕ ದೇವಾಲಯದ ಅರ್ಚಕರು ವಿಶೇಷ ಪೂಜೆ ನಡೆಸಿದ್ದಾರೆ.

    ಇದನ್ನೂ ಓದಿ:  ಹಿರಿಯ ನಾಗರಿಕರಿಗೆ ತೀರ್ಥಯಾತ್ರೆ ಯೋಜನೆ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ಈ ಫೈನಲ್ ಪಂದ್ಯದಲ್ಲಿ ಭಾರತ ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಹೀಗಿರುವಾಗ ಇಲ್ಲಿನ ವಾತಾವರಣ ಉಭಯ ತಂಡಗಳ ಟೆನ್ಷನ್ ಹೆಚ್ಚಿಸಿದೆ. ಬಾರ್ಬಡೋಸ್‌ನ ಹವಾಮಾನದ ಕುರಿತು ದೊಡ್ಡ ಅಪ್​ಡೇಟ್ ಇದೀಗ ಹೊರಬಂದಿದೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತದ ಗೆಲ್ಲಲ್ಲಿ ಎಂದು ಪ್ರಾರ್ಥಿಸಿ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದ ಅರ್ಚಕರು ಶನಿವಾರ ವಿಶೇಷ ಪೂಜೆ, ಹೋಮ, ಹವನ ಮಾಡಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಪ್ರೋತ್ಸಾಹದ ಸಂದೇಶಗಳು ತುಂಬಿಕೊಂಡಿವೆ. ಪ್ರಮುಖ ಬೀದಿಗಳು ಟೀಮ್ ಇಂಡಿಯಾವನ್ನು ಬೆಂಬಲಿಸುವ ಪೋಸ್ಟರ್​ಗಳಿಂದ ತುಂಬಿಕೊಂಡಿವೆ.

    ಈ ನಡುವೆ ಹಲವೆಡೆ ವಿಶೇಷ ಪೂಜೆಗಳು ನಡೆಯುತ್ತಿವೆ. ಅಂತೆಯ ಸಿದ್ಧಿವಿನಾಯಕ ದೇವಾಲಯದಲ್ಲೂ ಪೂಜೆ ಮಾಡಲಾಗಿದೆ. ಉತ್ತರಪ್ರದೇಶದ ಕಾನ್ಪುರ, ಪ್ರಯಾಗ್ ರಾಜ್​ನಲ್ಲಿ ಟೀಂ ಇಂಡಿಯಾ ಕಪ್ ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಮಾಡಿದರು. ಕರ್ನಾಟಕದ ಹುಬ್ಬಳ್ಳಿಯಲ್ಲಿ ಮಕ್ಕಳು ಗೆದ್ದು ಬಾ ಭಾರತ ಎಂದು ಹೇಳುವ ಮೂಲಕ ಶುಭ ಕೋರಿದ್ದಾರೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ಭಾರತದ ಗೆಲುವಿಗಾಗಿ ಅಭಿಮಾನಿಗಳು ಹೋಮ-ಹವನ ನಡೆಸಿದರು.

    ದಿಲ್ಲಿ ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್​ಗೆ 14 ದಿನಗಳ ನ್ಯಾಯಾಂಗ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts