More

    ಶರಣ ತತ್ವಗಳ ಅಧ್ಯಯನದಿಂದ ಜೀವನ ಸಾರ್ಥಕ

    ಕೂಡ್ಲಿಗಿ: ಶರಣರ ವಚನಗಳು ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧಿ ಮಾಡುವ ಔಷಧಿಗಳಾಗಿವೆ ಎಂದು ತಹಸೀಲ್ದಾರ್ ಎಂ.ರೇಣುಕಾ ಹೇಳಿದರು.

    ಇದನ್ನೂ ಓದಿ: ಮಕ್ಕಳ ಕಲಿಕೆಯಲ್ಲಿ ಪಾಲಕರ ಜವಾಬ್ದಾರಿ : ಸಮಾಲೋಚನಾ ಸಭೆಯಲ್ಲಿ ಶರಣ ಕುಮಾರ ಹೇಳಿಕೆ

    ಪಟ್ಟಣ ತಾಲೂಕು ಕಚೇರಿಯಲ್ಲಿ ಮಂಗಳವಾರ ಡಾ.ಫ.ಗು.ಹಳಕಟ್ಟಿ ಜಯಂತಿ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದಿನನಿತ್ಯ ನಾವುಗಳು ವಚನಗಳ ಪಠಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ಶರಣ ತತ್ವಗಳನ್ನು ಅಧ್ಯಯನ ಮಾಡಿದರೆ ಶರಣರ ಜೀವನವಾಗುತ್ತದೆ.

    ಇಂಥ ಮಾನವೀಯ ಮೌಲ್ಯಗಳ ಗಣಿಯಂತಿರುವ ವಚನಗಳನ್ನು ನಮಗೆ ಸಿಗುವಂತೆ ಮಾಡಿದ್ದು, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಾಗಿದ್ದಾರೆ. ಹಳಕಟ್ಟಿ ಯಾವ ವಿಶ್ವವಿದ್ಯಾಲಯಗಳು ಮಾಡಲಾಗದ ಬಹು ದೊಡ್ಡ ಸಾಧನೆಯನ್ನು ಮಾಡುವ ಮೂಲಕ ವಚನ ಸಂರಕ್ಷಣೆ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

    ಪ್ರಸ್ತುತ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ಶಕ್ತಿ ವಚನ ಸಾಹಿತ್ಯ ಹೊಂದಿದೆ ಎಂದು ತಿಳಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ಕಾಯಕ ಶರಣರನ್ನು ಒಗ್ಗೂಡಿಸಿದಂತೆ,

    ವಚನಕಾರರ ಸಾಹಿತ್ಯವನ್ನು 20ನೇ ಶತಮಾನದಲ್ಲಿ ಒಗ್ಗೂಡಿಸಲು ಶ್ರಮಿಸಿದ ಡಾ.ಫ.ಗು.ಹಳಕಟ್ಟಿ ಅವರನ್ನು ಆಧುನಿಕ ಬಸವಣ್ಣ ಎಂದು ಕರೆದರೆ ತಪ್ಪಾಗಲಾರದು. ಇಂಥ ಶ್ರೇಷ್ಠ ಕಾಯಕಜೀವಿ ಹಳಕಟ್ಟಿ ಶರಣರು ಸದಾ ಸ್ಮರಿಸುವ ಕಾರ್ಯವಾಗಬೇಕು ಎಂದರು.

    ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಕರವೇ ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್, ಕಜಾಪ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಉಪ ತಹಸೀಲ್ದಾರ್ ಎಸ್.ಚಂದ್ರಶೇಖರ, ಟಿಎಸ್‌ಐ ಡಾ.ಎಸ್.ಪಿ.ಪ್ರದೀಪ್ ಕುಮಾರ್, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts