More

    ಸಿಎಂ ಅರವಿಂದ್​ ಕೇಜ್ರಿವಾಲ್​​ ಜಾಮೀನಿಗೆ ಹೈಕೋರ್ಟ್​​ ತಡೆ; ಸುನೀತಾ ಕೇಜ್ರಿವಾಲ್​ ಏನಂದ್ರು ಗೊತ್ತಾ?

    ನವದೆಹಲಿ: ಸಿಎಂ ಅರವಿಂದ್​ ಕೇಜ್ರಿವಾಲ್​​​ ಜಾಮೀನು ವಿರುದ್ಧ ಜಾರಿ ನಿರ್ದೇಶನಾಲಯ ಹೈಕೋರ್ಟ್​​​ ಮೆಟ್ಟಿಲೇರಿದ್ದು, ನ್ಯಾಯಾಲಯ ಜಾಮೀನಿಗೆ ತಡೆ ನೀಡಿದೆ. ಈ ಬಗ್ಗೆ ಸಿಎಂ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಸರ್ವಾಧಿಕಾರದ ಎಲ್ಲ ಮಿತಿಗಳನ್ನು ದಾಟಲಾಗಿದೆ ಎಂದು ಹೇಳಿದರು.

    ಇದನ್ನು ಓದಿ: ನೀಟ್​​​ ಕೌನ್ಸೆಲಿಂಗ್ ಪ್ರಕ್ರಿಯೆ ನಿಷೇಧಿಸಲು ಸುಪ್ರೀಂಕೋರ್ಟ್ ನಿರಾಕರಣೆ; ಎನ್​ಟಿಎಗೆ ನೋಟಿಸ್​ ಜಾರಿ

    ಸಿಎಂ ಕೇಜ್ರಿವಾಲ್ ಅವರ ಜಾಮೀನು ಆದೇಶವನ್ನು ಅಪ್‌ಲೋಡ್ ಮಾಡುವ ಮೊದಲೇ ತನಿಖಾ ಸಂಸ್ಥೆ ಇಡಿ ಹೈಕೋರ್ಟ್‌ಗೆ ತಲುಪಿದೆ. ಅರವಿಂದ್ ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂಬಂತೆ ವರ್ತಿಸುತ್ತಿದ್ದಾರೆ. ಸರ್ವಾಧಿಕಾರ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಮುಖ್ಯಮಂತ್ರಿಗೂ ಕಾನೂನು ಅಧಿಕಾರ ನೀಡುತ್ತಿಲ್ಲ ಎಂದು ಸುನೀತಾ ಕೇಜ್ರಿವಾಲ್​​ ಹೇಳಿದರು. ಹೈಕೋರ್ಟ್ ಆದೇಶವು ಇನ್ನೂ ಬರಬೇಕಿದೆ. ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯ ಒದಗಿಸಲಿದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

    ಇದೇ ಸಮಯದಲ್ಲಿ ಹರಿಯಾಣ ಸರ್ಕಾರಕ್ಕೆ ಮನವಿ ಮಾಡಲು ದೆಹಲಿ ಸಚಿವೆ ಅತಿಶಿ ಅವರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಲಿದ್ದಾರೆ. ಅವರು ನೀರನ್ನು ಬಿಟ್ಟು ಬೇರೆನನ್ನೂ ಸೇವಿಸುವುದಿಲ್ಲ. ದೆಹಲಿಯ ಜನರಿಗಾಗಿ ಇದನ್ನು ಮಾಡುತ್ತಿದ್ದಾರೆ. ಅತಿಶಿಯ ತಪಸ್ಸು ಯಶಸ್ವಿಯಾಗಲಿ ಮತ್ತು ಸಾರ್ವಜನಿಕರಿಗೆ ಸ್ವಲ್ಪ ಪರಿಹಾರ ಸಿಗಲಿ ಎಂದು ಹಾರೈಸುತ್ತೇನೆ ಎಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.

    ಆಪಾದಿತ ಮದ್ಯದ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪ್ರಶ್ನಿಸಿ ಇಡಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಆಲಿಸದ ಹೊರತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡುವ ಅಧೀನ ನ್ಯಾಯಾಲಯದ ಆದೇಶವು ಪರಿಣಾಮಕಾರಿಯಾಗಿರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ (ಜೂನ್​​ 21) ಹೇಳಿದೆ.

    ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ವಿಚಾರಣೆಯ ಕುರಿತು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು, ಜಾಮೀನು ತಾತ್ಕಾಲಿಕ ಪ್ರಕ್ರಿಯೆ ಆಗಿದೆ. ಇದನ್ನು ರಿಯಾಯಿತಿಯಾಗಿ ನೋಡಬಾರದು. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಎಂಬುದು ನಮ್ಮ ನಿಲುವು. ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ಸ್ವತಂತ್ರ ಸಂಸ್ಥೆಗಳಾಗಿವೆ ಎಂದು ಹೇಳಿದರು. (ಏಜೆನ್ಸೀಸ್​)

    ನೀರಿನ ಬಿಕ್ಕಟ್ಟು ನಿವಾರಿಸುವಂತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಚಿವೆ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts