More

    ಸಬ್​ರಿಜಿಸ್ಟ್ರಾರ್​ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?

    ಬೆಂಗಳೂರು: ಯುವ ಜನರೇ ಎಚ್ಚರ! ಉದ್ಯೋಗ ಕೊಡಿಸುವುದಾಗಿ ಆಮಿಷದ ಬಲೆ ಬೀಸುವ ವಂಚಕ ಜಾಲ ಸಕ್ರಿಯವಾಗಿದೆ ಜೋಕೆ. ನಿತ್ಯ ಒಂದಿಲ್ಲೊಂದು ವಂಚನೆಯ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಇದೀಗ ಸಬ್ ರಿಜಿಸ್ಟ್ರಾರ್​ ಹುದ್ದೆ ಕೊಡಿಸುವುದಾಗಿ ಯುವಕನೊಬ್ಬನಿಗೆ ಆಮಿಷವೊಡ್ಡಿದ ವಂಚಕರಿಬ್ಬರು ಆತನಿಂದ ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ವಂಚಕರ ಬಲೆಗೆ ಬಿದ್ದ ಮರಿಯಪ್ಪನಪಾಳ್ಯದ ಪಿ.ಮಹೇಶ್​ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ‘ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ನಡೆಸುತ್ತಿದ್ದ ಬಂದ್ರಿನಾಥ್​ ಎಂಬುವವರು 2017ರಲ್ಲಿ ನನಗೆ ಪರಿಚಯವಾದರು. ಈ ವೇಳೆ 2016ರಲ್ಲಿ ಕೆಪಿಎಸ್​ಸಿ ಕರೆ ಮಾಡಿದ್ದ ಸಬ್​ ರಿಜಿಸ್ಟ್ರಾರ್​ ಹುದ್ದೆಗೆ ಪರೀಕ್ಷೆ ಬರೆದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದೆ. ಆಗ ಬಂದ್ರಿನಾಥ್​, 36 ಲಕ್ಷ ರೂ. ಕೊಟ್ಟರೇ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ಅದಕ್ಕೆ ಒಪ್ಪಿ 36 ಲಕ್ಷ ರೂ.ಅನ್ನು ಬಂದ್ರಿನಾಥ್​ ಮತ್ತು ಪಲ್ಲವಿ ಎಂಬಾಕೆಗೆ ಹಂತ ಹಂತವಾಗಿ ಪಾವತಿ ಮಾಡಿದ್ದೆ. ಆದರೆ, ಅಂತಿಮ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ಬರಲಿಲ್ಲ. ಕೇಳಿದಾಗ ಸಬೂಬು ಹೇಳಿಕೊಂಡು ಕಾಲ ಮುಂದೂಡಿದ್ದರು. ಹಣ ವಾಪಸ್​ ಕೊಡುವಂತೆ ಒತ್ತಾಯ ಮಾಡಿದಾಗ 6 ಲಕ್ಷ ರೂ. ಕೊಟ್ಟು ಸುಮ್ಮನಾಗಿದ್ದಾರೆ. ಉಳಿಕೆ 30 ಲಕ್ಷ ರೂ. ಹಿಂತಿರುಗಿಸಿಲ್ಲ. ಹಣ ಕೇಳಿದಾಗ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಮಹೇಶ್​ ದೂರಿನಲ್ಲಿ ವಿವರಿಸಿದ್ದಾರೆ.

    ‘ಆರೋಪಿಗಳಾದ ಬದ್ರಿನಾಥ್​ ಮತ್ತು ಪಲ್ಲವಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಮಹೇಶ್​ ಮನವಿ ಮಾಡಿದ್ದಾರೆ. ಮಹೇಶ್​ ನೀಡಿದ ದೂರಿನ ಮೇರೆಗೆ ಡಿ.ಬದ್ರಿನಾಥ್​ ಮತ್ತು ಪಲ್ಲವಿ ವಿರುದ್ಧ ಎಫ್​​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ನನ್ನ ಮಗನನ್ನು ಅವರ ಮನೆಯಲ್ಲೇ ಕೂರಿಸಿಕೊಳ್ಳಲಿ… ನಮಗೆ ಊಟ ಕೊಟ್ಟರೆ ಸಾಕೆಂದ ಡಿಕೆಶಿ ತಾಯಿ

    ಬೆಳಗ್ಗೆ ಮನೆಯಲ್ಲಿದ್ದ ಬಾಲಕ ಮಧ್ಯಾಹ್ನ ಪೊದೆಯಲ್ಲಿ ಶವವಾಗಿ ಬಿದ್ದಿದ್ದ !

    ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts