ವೆಬ್ ಸ್ಟೋರೀಸ್
ಮೊಟ್ಟೆಯ ಕ್ವಾಲಿಟಿ ಚೆಕ್ ಮಾಡಲು ಈ ನೈಸರ್ಗಿಕ ಸೂತ್ರ ಬಳಸಿ!
ಮೊಟ್ಟೆಯ ಕ್ವಾಲಿಟಿ ಚೆಕ್ ಮಾಡಲು ಈ ನೈಸರ್ಗಿಕ ಸೂತ್ರ ಬಳಸಿ!
ಮೊಟ್ಟೆಗಳು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು "ಪ್ರಕೃತಿಯ ಮಲ್ಟಿವಿಟಮಿನ್" ಎಂದೇ ಕರೆಯಲಾಗುತ್ತದೆ. ಮೊಟ್ಟೆಗಳ ಪೌಷ್ಟಿಕಾಂಶ, ಆರೋಗ್ಯ ಪ್ರಯೋಜನಗಳು ಮತ್ತು ಅವುಗಳನ್ನು ಬಳಸುವಾಗ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ನೀರಿನ ಫ್ಲೋಟ್ ಟೆಸ್ಟ್
ಒಂದು ಪಾತ್ರೆಯ ತುಂಬಾ ನೀರು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ. ತಾಜಾ ಮೊಟ್ಟೆಯಾದರೆ ನೀರಿನ ತಳಭಾಗದಲ್ಲಿ ಅಡ್ಡಲಾಗಿ ಕುಳಿತುಕೊಳ್ಳುತ್ತದೆ. ಹಾಳಾದ ಮೊಟ್ಟೆಯಾಗಿದ್ದರೆ ನೀರಿನ ಮೇಲ್ಭಾಗದಲ್ಲಿ ತೇಲುತ್ತದೆ. ತೇಲುವ ಮೊಟ್ಟೆಯನ್ನು ಬಳಸಬೇಡಿ.
ಅಲ್ಲಾಡಿಸಿ ನೋಡುವುದು
ಮೊಟ್ಟೆಯನ್ನು ಕಿವಿಯ ಹತ್ತಿರ ತಂದು ಲಘುವಾಗಿ ಅಲ್ಲಾಡಿಸಿ. ಒಳ್ಳೆಯ ಮೊಟ್ಟೆಯಾಗಿದ್ದರೆ ಒಳಗಿನಿಂದ ಯಾವುದೇ ಶಬ್ದ ಬರುವುದಿಲ್ಲ. ಒಂದು ವೇಳೆ ಒಳಗಿನ ದ್ರವ ಸಡಿಲಗೊಂಡು 'ಲಬ-ಲಬ' ಎಂದು ನೀರು ಅಲ್ಲಾಡಿದಂತೆ ಶಬ್ದ ಬಂದರೆ ಅದು ಹಳೆಯ ಅಥವಾ ಹಾಳಾದ ಮೊಟ್ಟೆಯಾಗಿದೆ.
ಒಡೆದು ಪರೀಕ್ಷಿಸುವುದು
ಮೊಟ್ಟೆಯನ್ನು ಪ್ಲೇಟ್‌ನಲ್ಲಿ ಒಡೆದು ಹಾಕಿದಾಗ ಅದರ ಹಳದಿ ಭಾಗ ಗಟ್ಟಿಯಾಗಿ, ದುಂಡಗೆ ಮೇಲಕ್ಕೆ ಎದ್ದು ನಿಲ್ಲಬೇಕು ಹಾಗೂ ಬಿಳಿ ಭಾಗ ಹರಡಿಕೊಳ್ಳಬಾರದು. ಹಳದಿ ಭಾಗ ತಟ್ಟನೆ ಒಡೆದು ನೀರಾಗಿ ಹರಡಿಕೊಂಡರೆ ಅದು ತಾಜಾ ಅಲ್ಲ ಎಂದರ್ಥ.
ವಾಸನೆ ಪರೀಕ್ಷೆ
ಇದು ಅತ್ಯಂತ ನಂಬಿಕಸ್ಥ ವಿಧಾನ. ಮೊಟ್ಟೆಯನ್ನು ಒಡೆದ ತಕ್ಷಣ ಅದರಿಂದ ಯಾವುದೇ ರೀತಿಯ ಕೊಳೆತ ಅಥವಾ ತೀಕ್ಷ್ಣವಾದ ಗಂಧಕದ ವಾಸನೆ ಬಂದರೆ ಅದನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಿ. ಒಳ್ಳೆಯ ಮೊಟ್ಟೆಗೆ ಯಾವುದೇ ದುರ್ವಾಸನೆ ಇರುವುದಿಲ್ಲ.
ಬೆಳಕಿಗೆ ಹಿಡಿದು ನೋಡುವುದು
ಕತ್ತಲೆಯಲ್ಲಿ ಮೊಟ್ಟೆಯ ಹಿಂಭಾಗಕ್ಕೆ ಮೊಬೈಲ್ ಫ್ಲ್ಯಾಶ್‌ಲೈಟ್ ಬೆಳಕನ್ನು ಹಾಯಿಸಿ ನೋಡಿ. ಒಳಗಿನ ಭಾಗ ಸ್ವಚ್ಛವಾಗಿ, ಪಾರದರ್ಶಕವಾಗಿ ಕಂಡರೆ ಅದು ಒಳ್ಳೆಯ ಮೊಟ್ಟೆ. ಒಳಗಡೆ ಕಪ್ಪು ಕಲೆಗಳು ಅಥವಾ ಕತ್ತಲೆಯಂತೆ ಕಂಡರೆ ಅದು ಕೆಟ್ಟ ಮೊಟ್ಟೆಯಾಗಿದೆ.

