ಊಟದ ನಂತರ ಸ್ನಾನ ಮಾಡುವುದರ ದುಷ್ಪರಿಣಾಮಗಳು

ಊಟದ ನಂತರ ಸ್ನಾನ ಮಾಡುವುದರ ದುಷ್ಪರಿಣಾಮಗಳು

Published on: 

ಊಟದ ನಂತರ ಸ್ನಾನ ಮಾಡುವುದರ ದುಷ್ಪರಿಣಾಮಗಳು

ಊಟದ ನಂತರ ಸ್ನಾನ ಮಾಡುವುದರ ದುಷ್ಪರಿಣಾಮಗಳು
ಊಟವಾದ ತಕ್ಷಣ ಸ್ನಾನ ಮಾಡುವುದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ರಕ್ತದ ಹರಿವು ಹೊಟ್ಟೆಯ ಭಾಗದಿಂದ ಚರ್ಮದ ಕಡೆಗೆ ವರ್ಗಾವಣೆಯಾಗಿ, ಆಹಾರ ಜೀರ್ಣವಾಗುವುದು ತಡವಾಗುತ್ತದೆ. ಇದು ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ವಾಕರಿಕೆಗೆ ಕಾರಣವಾಗಬಹುದು.

ಜೀರ್ಣಕ್ರಿಯೆಯಲ್ಲಿ ವ್ಯತ್ಯಯ (Digestion Problems)

ಜೀರ್ಣಕ್ರಿಯೆಯಲ್ಲಿ ವ್ಯತ್ಯಯ (Digestion Problems)
ನಾವು ಊಟ ಮಾಡಿದ ತಕ್ಷಣ ನಮ್ಮ ದೇಹದ ಹೆಚ್ಚಿನ ರಕ್ತದ ಹರಿವು ಜೀರ್ಣಾಂಗವ್ಯೂಹದ ಕಡೆಗೆ ಇರುತ್ತದೆ. ಇದು ಆಹಾರವನ್ನು ಚೆನ್ನಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ. ಆದರೆ ಊಟವಾದ ತಕ್ಷಣ ಸ್ನಾನ ಮಾಡಿದಾಗ, ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ರಕ್ತದ ಹರಿವು ಹೊಟ್ಟೆಯ ಭಾಗದಿಂದ ಚರ್ಮದ ಮೇಲ್ಮೈಗೆ ವರ್ಗಾವಣೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ.

ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ (Acidity and Gas)

ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ (Acidity and Gas)
ಜೀರ್ಣಕ್ರಿಯೆ ಸರಿಯಾಗಿ ನಡೆಯದಿದ್ದಾಗ ಹೊಟ್ಟೆಯಲ್ಲಿ ಆಹಾರ ದೀರ್ಘಕಾಲ ಉಳಿಯುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಎದೆ ಉರಿ ಕಾಣಿಸಿಕೊಳ್ಳಬಹುದು.

ವಾಕರಿಕೆ ಮತ್ತು ವಾಂತಿ (Nausea)

ವಾಕರಿಕೆ ಮತ್ತು ವಾಂತಿ (Nausea)
ಹೊಟ್ಟೆ ತುಂಬಿದಾಗ ಸ್ನಾನ ಮಾಡುವುದರಿಂದ ಕೆಲವರಿಗೆ ತಲೆತಿರುಗುವಿಕೆ ಅಥವಾ ವಾಕರಿಕೆ ಉಂಟಾಗಬಹುದು. ರಕ್ತದ ಓಟದಲ್ಲಿ ಬದಲಾವಣೆಯಾಗುವುದು ಇದಕ್ಕೆ ಮುಖ್ಯ ಕಾರಣ.

ದೇಹದ ಉಷ್ಣತೆಯಲ್ಲಿ ಏರುಪೇರು

ದೇಹದ ಉಷ್ಣತೆಯಲ್ಲಿ ಏರುಪೇರು
ಊಟದ ನಂತರ ದೇಹದ ಉಷ್ಣತೆ ಸ್ವಲ್ಪ ಹೆಚ್ಚಾಗಿರುತ್ತದೆ ಸ್ನಾನ ಮಾಡುವುದರಿಂದ ದೇಹದ ತಾಪಮಾನ ಇದ್ದಕ್ಕಿದ್ದಂತೆ ಇಳಿಕೆಯಾಗುತ್ತದೆ, ಇದು ದೇಹದ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ತೂಕ ಹೆಚ್ಚಾಗುವ ಸಾಧ್ಯತೆ

ತೂಕ ಹೆಚ್ಚಾಗುವ ಸಾಧ್ಯತೆ
ಸರಿಯಾದ ರೀತಿಯಲ್ಲಿ ಆಹಾರ ಜೀರ್ಣವಾಗದಿದ್ದರೆ, ಅದು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುವ ಸಾಧ್ಯತೆ ಇರುತ್ತದೆ. ಇದು ಪರೋಕ್ಷವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು.

Related Stories

No stories found.