ಬೇಸಿಗೆಯಲ್ಲಿ ಪ್ರೋಟಿನ್​ ಶೇಕ್​ ಕುಡಿಯುದರ ಅಪಾಯಗಳು

ಬೇಸಿಗೆಯಲ್ಲಿ ಪ್ರೋಟಿನ್​ ಶೇಕ್​ ಕುಡಿಯುದರ ಅಪಾಯಗಳು

Published on: 

ಬೇಸಿಗೆಯಲ್ಲಿ ಪ್ರೋಟಿನ್​ ಶೇಕ್​ ಕುಡಿಯುದರ ಅಪಾಯಗಳು

ಬೇಸಿಗೆಯಲ್ಲಿ ಪ್ರೋಟಿನ್​ ಶೇಕ್​ ಕುಡಿಯುದರ ಅಪಾಯಗಳು
ಬೇಸಿಗೆಯ ಅತಿಯಾದ ಶಾಖದಲ್ಲಿ ಪ್ರೋಟೀನ್ ಶೇಕ್ ಸೇವಿಸುವುದು ದೇಹದ ಮೇಲೆ ಹೆಚ್ಚಿನ ಒತ್ತಡ ಹೇರಬಹುದು. ಪ್ರೋಟೀನ್ ಜೀರ್ಣಿಸಿಕೊಳ್ಳಲು ದೇಹಕ್ಕೆ ಅತೀ ಹೆಚ್ಚು ನೀರು ಬೇಕಿರುವುದರಿಂದ, ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ ನಿರ್ಜಲೀಕರಣ (Dehydration), ಕಿಡ್ನಿ ಸಮಸ್ಯೆ ಮತ್ತು ದೇಹದ ಉಷ್ಣತೆ ಹೆಚ್ಚಾಗುವ ಸಂಭವವಿರುತ್ತದೆ.

ನಿರ್ಜಲೀಕರಣ (Dehydration)

ನಿರ್ಜಲೀಕರಣ (Dehydration)
ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇರುತ್ತದೆ. ಬೇಸಿಗೆಯಲ್ಲಿ ಈಗಾಗಲೇ ಬೆವರಿನ ಮೂಲಕ ದೇಹದ ನೀರು ಕಡಿಮೆಯಾಗಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ಪ್ರೋಟೀನ್ ಸೇವಿಸಿ, ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗಿ ಮೂತ್ರಪಿಂಡಗಳ ಮೇಲೆ ಒತ್ತಡ ಬೀಳಬಹುದು.

ದೇಹದ ಉಷ್ಣತೆ ಹೆಚ್ಚಳ (Increased Body Heat)

ದೇಹದ ಉಷ್ಣತೆ ಹೆಚ್ಚಳ (Increased Body Heat)
ಪ್ರೋಟೀನ್ ಹೆಚ್ಚಿನ ಥರ್ಮಿಕ್ ಎಫೆಕ್ಟ್ ಹೊಂದಿದೆ. ಅಂದರೆ ಇದನ್ನು ಜೀರ್ಣಿಸಲು ದೇಹವು ಹೆಚ್ಚು ಶಕ್ತಿಯನ್ನು ಬಳಸುತ್ತದೆ, ಇದರಿಂದ ದೇಹದ ಒಳಗಿನ ಉಷ್ಣತೆ ಹೆಚ್ಚಾಗುತ್ತದೆ. ಬೇಸಿಗೆಯ ಶಾಖದ ನಡುವೆ ಇದು ನಿಮಗೆ ಅತಿಯಾದ ಬೆವರುವಿಕೆ ಮತ್ತು ಸುಸ್ತನ್ನು ಉಂಟುಮಾಡಬಹುದು.

ಜೀರ್ಣಕ್ರಿಯೆಯ ತೊಂದರೆಗಳು (Digestive Issues)

ಜೀರ್ಣಕ್ರಿಯೆಯ ತೊಂದರೆಗಳು (Digestive Issues)
ಬಿಸಿಲಿನಲ್ಲಿ ನಮ್ಮ ಜೀರ್ಣಾಂಗ ವ್ಯೂಹವು ಸ್ವಲ್ಪ ನಿಧಾನವಾಗಿರುತ್ತದೆ. ಈ ಸಮಯದಲ್ಲಿ ಅತಿಯಾದ ಪ್ರೋಟೀನ್ ಸೇವನೆಯಿಂದ ಹೊಟ್ಟೆ ಉಬ್ಬರ,ಗ್ಯಾಸ್ ಸಮಸ್ಯೆ ಮತ್ತು ಮಲಬದ್ಧತೆ ಉಂಟಾಗಬಹುದು

ಮೂತ್ರಪಿಂಡದ ಮೇಲೆ ಒತ್ತಡ (Stress on Kidneys)

ಮೂತ್ರಪಿಂಡದ ಮೇಲೆ ಒತ್ತಡ (Stress on Kidneys)
ಹೆಚ್ಚಿನ ಪ್ರೋಟೀನ್ ಸೇವನೆಯಿಂದ ರಕ್ತದಲ್ಲಿ ಯೂರಿಯಾ ಮತ್ತು ನೈಟ್ರೋಜನ್ ಅಂಶ ಹೆಚ್ಚಾಗುತ್ತದೆ. ಇವುಗಳನ್ನು ಹೊರಹಾಕಲು ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನೀರು ಕಡಿಮೆ ಕುಡಿದರೆ ಇದು ದೀರ್ಘಕಾಲದಲ್ಲಿ ಕಿಡ್ನಿ ಕಲ್ಲುಗಳಿಗೆ ಕಾರಣವಾಗಬಹುದು.

Related Stories

No stories found.