ಕುಟುಂಬದೊಂದಿಗೆ ಡಿವೈನ್​ ಸ್ಟಾರ್​ ಬರ್ತಡೇ ಸಂಭ್ರಮ

ಕುಟುಂಬದೊಂದಿಗೆ ಡಿವೈನ್​ ಸ್ಟಾರ್​ ಬರ್ತಡೇ ಸಂಭ್ರಮ

Published on: 

ಕುಟುಂಬದೊಂದಿಗೆ ಡಿವೈನ್​ ಸ್ಟಾರ್​ ಬರ್ತಡೇ ಸಂಭ್ರಮ

ಕುಟುಂಬದೊಂದಿಗೆ ಡಿವೈನ್​ ಸ್ಟಾರ್​ ಬರ್ತಡೇ ಸಂಭ್ರಮ
ಡಿವೈನ್​ ಸ್ಟಾರ್​ ಎಂದೇ ಜನಮನ ಗೆದ್ದಿರುವ ನಟ ಹಾಗೂ ನಿರ್ದೇಶಕ ರಿಷಬ್​ ಶೆಟ್ಟಿ ಅವರು ಇಂದು ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ತಮ್ಮ ಕುಟುಂಬದೊಂದಿಗೆ ಕೇಕ್ ಕತ್ತರಿಸಿರುವ ಸುಂದರ ಫೋಟೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಶೇಷ ಕೇಕ್​

ವಿಶೇಷ ಕೇಕ್​
ಸಿನಿಮಾದ ಕ್ಲಾಪ್ ಬೋರ್ಡ್ ಮತ್ತು ಫಿಲ್ಮ್ ರೋಲ್ ವಿನ್ಯಾಸವಿರುವ ವಿಶೇಷ ಕೇಕ್ ಅನ್ನು ಪತ್ನಿ ಪ್ರಗತಿ ಶೆಟ್ಟಿ, ಮಗ ರಣವಿತ್ ಹಾಗೂ ಮಗಳು ರಾಧ್ಯಾ ಜತೆ ಸೇರಿ ಕತ್ತರಿಸುವ ಮೂಲಕ ರಿಷಬ್​ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಶುಭಾಶಯಗಳ ಸುರಿಮಳೆ

ಶುಭಾಶಯಗಳ ಸುರಿಮಳೆ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ರಿಷಬ್​ ಅವರಿಗೆ ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ವಿವಿಧ ಸಿನಿಮಾ ರಂಗದ ಕಲಾವಿದರು ಹಾಗೂ ಅಭಿಮಾನಿಗಳು ಶುಭಾಶಯಗಳು ಸುರಿಮಳೆಗೈಯುತ್ತಿದ್ದಾರೆ.

ಕಾಂತಾರ ಸೃಷ್ಟಿಸಿದ ಜಾಗತಿಕ ಇತಿಹಾಸ

ಕಾಂತಾರ ಸೃಷ್ಟಿಸಿದ ಜಾಗತಿಕ ಇತಿಹಾಸ
ರಿಷಬ್​ ಅವರ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು 'ಕಾಂತಾರ' ಚಾಪ್ಟರ್​ 1 ಮತ್ತು 2 ಸಿನಿಮಾ. ಕರಾವಳಿಯ ಸಾಂಪ್ರದಾಯಿಕ ದೈವಾರಾಧನೆ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಿಸಿ, ನಟಿಸಿದ ಈ ಚಿತ್ರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು.

ಯಶಸ್ವಿ ನಿರ್ದೇಶಕ ಹಾಗೂ ನಟ

ಯಶಸ್ವಿ ನಿರ್ದೇಶಕ ಹಾಗೂ ನಟ
ರಿಷಬ್​ ಕೇವಲ ಅದ್ಭುತ ನಟ ಮಾತ್ರವಲ್ಲ, ಸ್ಯಾಂಡಲ್‌ವುಡ್‌ನ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಕಿರಿಕ್ ಪಾರ್ಟಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ರಾಷ್ಟ್ರ ಪ್ರಶಸ್ತಿಯ ಗರಿ

ರಾಷ್ಟ್ರ ಪ್ರಶಸ್ತಿಯ ಗರಿ
ಇವರು ನಿರ್ದೇಶಿಸಿದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರಕ್ಕೆ ಭಾರತ ಸರ್ಕಾರದ ಅತ್ಯುನ್ನತ ಅತ್ಯುತ್ತಮ ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಕಾಂತಾರ ಸಿನಿಮಾಗೂ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.

ಕುಂದಾಪುರದಿಂದ ಪ್ಯಾನ್-ಇಂಡಿಯಾ ಸ್ಟಾರ್‌ವರೆಗೆ

ಕುಂದಾಪುರದಿಂದ ಪ್ಯಾನ್-ಇಂಡಿಯಾ ಸ್ಟಾರ್‌ವರೆಗೆ
ಉಡುಪಿ ಜಿಲ್ಲೆಯ ಕುಂದಾಪುರದವರಾದ ರಿಷಬ್​, ಆರಂಭದ ದಿನಗಳಲ್ಲಿ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ನೀರಿನ ಬಿಜಿನೆಸ್, ಹೋಟೆಲ್ ಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಇಂದು ತಮ್ಮ ಕಠಿಣ ಪರಿಶ್ರಮದಿಂದ ಇಡೀ ದೇಶವೇ ತಿರುಗಿ ನೋಡುವಂತಹ ತಾರೆಯಾಗಿ ಬೆಳೆದು ನಿಂತಿದ್ದಾರೆ.

Related Stories

No stories found.