ಹೃದಯಾಘಾತದಿಂದ ಪಾರಾಗಲು ಈ ನಾಲ್ಕು ಸಲಹೆಗಳನ್ನು ತಪ್ಪದೆ ಪಾಲಿಸಿ

ಹೃದಯಾಘಾತದಿಂದ ಪಾರಾಗಲು ಈ ನಾಲ್ಕು ಸಲಹೆಗಳನ್ನು ತಪ್ಪದೆ ಪಾಲಿಸಿ

Published on: 

ಹೃದಯಾಘಾತದಿಂದ ಪಾರಾಗಲು ಈ ನಾಲ್ಕು ಸಲಹೆಗಳನ್ನು ತಪ್ಪದೆ ಪಾಲಿಸಿ

ಹೃದಯಾಘಾತದಿಂದ ಪಾರಾಗಲು ಈ ನಾಲ್ಕು ಸಲಹೆಗಳನ್ನು ತಪ್ಪದೆ ಪಾಲಿಸಿ
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಒತ್ತಡದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯಾಘಾತದಂತಹ ಗಂಭೀರ ಅಪಾಯಗಳಿಂದ ದೂರವಿರಬಹುದು. ನಿಮ್ಮ ಹೃದಯವನ್ನು ಸದಾ ಬಲವಾಗಿ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುವ 4 ಅತ್ಯಗತ್ಯ ಸಲಹೆಗಳನ್ನು ತಪ್ಪದೆ ಪಾಲಿಸಿ.

ಪೌಷ್ಟಿಕ ಆಹಾರ ಸೇವಿಸಿ

ಪೌಷ್ಟಿಕ ಆಹಾರ ಸೇವಿಸಿ
ಹೃದಯದ ಆರೋಗ್ಯಕ್ಕಾಗಿ ನೀವು ತಿನ್ನುವ ಆಹಾರದಲ್ಲಿ ಹೆಚ್ಚಿನ ಗಮನಹರಿಸಿ. ಅತಿಯಾದ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸಿದರೆ, ಸಕ್ಕರೆ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಇವೆರಡೂ ಹೃದಯದ ಶತ್ರುಗಳು.

ವ್ಯಾಯಾಮ ಮಾಡಿ

ವ್ಯಾಯಾಮ ಮಾಡಿ
ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ವೇಗದ ನಡಿಗೆ, ಈಜು, ಅಥವಾ ಸೈಕ್ಲಿಂಗ್ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ. ದಿನವಿಡೀ ಒಂದೇ ಕಡೆ ಕುಳಿತುಕೊಳ್ಳಬೇಡಿ. ಪ್ರತಿ ಗಂಟೆಗೊಮ್ಮೆ ಸ್ವಲ್ಪ ಹೊತ್ತು ಓಡಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ಮಾನಸಿಕ ಒತ್ತಡವನ್ನು ನಿಯಂತ್ರಿಸಿ

ಮಾನಸಿಕ ಒತ್ತಡವನ್ನು ನಿಯಂತ್ರಿಸಿ
ಅತಿಯಾದ ಒತ್ತಡ ಮತ್ತು ಆತಂಕವು ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿದಿನ 10-15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ ಮತ್ತು ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿರುತ್ತದೆ.

ಕೆಟ್ಟ ಅಭ್ಯಾಸಗಳಿಗೆ ವಿದಾಯ ಹೇಳಿ

ಕೆಟ್ಟ ಅಭ್ಯಾಸಗಳಿಗೆ ವಿದಾಯ ಹೇಳಿ
ಧೂಮಪಾನ ಮತ್ತು ಮದ್ಯಪಾನವು ಹೃದಯದ ಅಪಧಮನಿಗಳನ್ನು ಹಾನಿಗೊಳಿಸುತ್ತವೆ. ಸಿಗರೇಟ್ ಸೇವನೆಯು ರಕ್ತನಾಳಗಳನ್ನು ಕಿರಿದಾಗಿಸಿ, ಹೃದಯಾಘಾತದ ಸಾಧ್ಯತೆಯನ್ನು ಹಲವು ಪಟ್ಟು ಹೆಚ್ಚಿಸುತ್ತದೆ.

Related Stories

No stories found.