More

    2024ರಲ್ಲಿ ಷೇರುಗಳ ಬೆಲೆ 700% ಏರಿಕೆ: ಈ ಎರಡು ಸ್ಟಾಕ್​ಗಳು ಯಾವವು ಗೊತ್ತೆ?

    ಮುಂಬೈ: ಈ ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳ ಷೇರು ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ನೀಡಿವೆ. ಈ ಕಂಪನಿಗಳಲ್ಲಿ ಎರಡು ಅಷ್ಟೇನೂ ಹೆಸರಿಲ್ಲದ ಕಂಪನಿಗಳು ಸೇರಿವೆ. ಕೆಸಿಕೆ ಇಂಡಸ್ಟ್ರೀಸ್ ಮತ್ತು ಟ್ರೈಡೆಂಟ್ ಟೆಕ್ಲ್ಯಾಬ್ಸ್ ಈ ಕಂಪನಿಗಳಾಗಿವೆ. ಈ ವರ್ಷ ಇಲ್ಲಿಯವರೆಗೆ ಈ ಕಂಪನಿಗಳ ಷೇರುಗಳ ಬೆಲೆಗಳು ಶೇಕಡಾ 700 ರಷ್ಟು ಏರಿಕೆ ಕಂಡಿವೆ.

    ಕೆಸಿಕೆ ಇಂಡಸ್ಟ್ರೀಸ್ ಒಂದು ಸಣ್ಣ ಕಂಪನಿಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಗುರುವಾರ ಶೇಕಡಾ 1.45 ಕುಸಿತದೊಂದಿಗೆ ರೂ 204 ರ ಮಟ್ಟ ತಲುಪಿವೆ.

    2024 ರ ಆರಂಭದಿಂದ ಇಲ್ಲಿಯವರೆಗೆ, ಈ ಕಂಪನಿಯ ಷೇರುಗಳ ಬೆಲೆ 680 ಪ್ರತಿಶತದಷ್ಟು ಹೆಚ್ಚಾಗಿದೆ. ಜೂನ್ 3 ರಂದು ಕಂಪನಿಯ ಷೇರುಗಳ ಬೆಲೆ 26.50 ರೂ. ಇತ್ತು. ಇದೀಗ 200 ರೂ.ಗಳ ಗಡಿ ದಾಟಿದೆ.

    ಈ ಮಲ್ಟಿಬ್ಯಾಗರ್ ಷೇರುಗಳ ಬೆಲೆಗಳು ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಷೇರು ಬೆಲೆ 184 ರೂ.ನಿಂದ 204 ರೂ.ಗೆ ತಲುಪಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 217.50 ರೂ. ಹಾಗೂ ಕನಿಷ್ಠ ಬೆಲೆ 20.05 ರೂ.

    ಟ್ರೈಡೆಂಟ್ ಟೆಕ್ಲ್ಯಾಬ್ಸ್ ಕಂಪನಿಯ ಷೇರುಗಳ ಬೆಲೆ ಗುರುವಾರದಂದು ಶೇಕಡಾ 5ರಷ್ಟು ಕುಸಿತದೊಂದಿಗೆ 853.50 ರೂ. ಮುಟ್ಟಿತು.

    ಈ ವರ್ಷದ ಆರಂಭದಲ್ಲಿ ಕಂಪನಿಯ ಷೇರಿನ ಬೆಲೆ 108 ರೂ. ಇತ್ತು. ಅಲ್ಲಿಂದ ಇಲ್ಲಿಯವರೆಗೆ ಷೇರುಗಳ ಬೆಲೆ 689 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಈ ಷೇರುಗಳ ಬೆಲೆ 408 ರೂ. ಇತ್ತು. ಅಂದಿನಿಂದ ಇಂದಿನವರೆಗೆ ಶೇ. 109ರಷ್ಟು ಹೆಚ್ಚಳ ಕಂಡಿದೆ.

    ಕಂಪನಿಯ 52 ವಾರಗಳ ಗರಿಷ್ಠ ಬೆಲೆ 920 ರೂ. ಇದೆ. ಗುರುವಾರ ಕಂಪನಿಯ ಷೇರುಗಳು ಬೆಲೆ ಈ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಸ್ಟಾಕ್‌ನ 52 ವಾರಗಳ ಕನಿಷ್ಠ ಬೆಲೆ ರೂ 93.25 ಆಗಿದೆ.

    ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

    ಷೇರುಪೇಟೆಯಲ್ಲಿ ಐತಿಹಾಸಿಕ ದಾಖಲೆ: 79,000 ಗಡಿ ದಾಟಿದ ಬಿಎಸ್​ಇ ಸೆನ್ಸೆಕ್ಸ್​; 24,000 ಮೀರಿದ ನಿಫ್ಟಿ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts