More

    ಮೊದಲ ಬಾರಿಗೆ 80ಸಾವಿರ ಗಡಿ ದಾಟಿದ ಸೆನ್ಸೆಕ್ಸ್.. ನಿಫ್ಟಿ ಸಹ ಸಾರ್ವಕಾಲಿಕ ದಾಖಲೆ!

    ಮುಂಬೈ: ಭಾರತೀಯ ಷೇರುಪೇಟೆ ಬುಧವಾರ (ಜುಲೈ 3) ಹೊಸ ದಾಖಲೆ ಬರೆಯಿತು. ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ದಿನದ ವಹಿವಾಟಿನ ವೇಳೆ ಗರಿಷ್ಟ ಮಟ್ಟ ತಲುಪಿ ಹೊಸ ದಾಖಲೆ ಬರೆದಿವೆ.

    ಇದನ್ನೂ ಓದಿ: ಈತ ಟೀಮ್​ ಇಂಡಿಯಾದ ಅತ್ಯಂತ ದುರಾದೃಷ್ಟಕರ ಆಟಗಾರ! ಸ್ಟಾರ್​ ಪಟ್ಟ ಪಡೆದ್ರೂ ಕೈಹಿಡಿಯದ ಅದೃಷ್ಟ

    ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ನ ಸೆನ್ಸೆಕ್ಸ್ ಇದೇ ಮೊದಲ ಬಾರಿ 80ಸಾವಿರ ಗಡಿ ದಾಟಿದೆ. ಜೂ.4 ರ ನಂತರ ಒಂದು ತಿಂಗಳ ಅವಧಿಯಲ್ಲಿ 8ಸಾವಿರ ಅಂಶದಷ್ಟು ಏರಿಕೆ ದಾಖಲಿಸಿದೆ. ಇದೇ ವೇಳೆ ನಿಫ್ಟಿ 24,300 ಅಂಶಗಳ ಗಡಿ ದಾಟಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.

    ಷೇರುಪೇಟೆಯ ವಹಿವಾಟು ಬುಧವಾರ ಬೆಳಗ್ಗೆ 9:20 ಕ್ಕೆ ಶುರುವಾಗಿದ್ದು, ಸೆನ್ಸೆಕ್ಸ್ 0.61 ಪ್ರತಿಶತ ಏರಿಕೆಯಾಗಿ 79,923 ಕ್ಕೆ ಮತ್ತು ನಿಫ್ಟಿ ಪ್ರತಿಶತ 0.55 ಏರಿಕೆಯಾಗಿ 24,257 ಕ್ಕೆ ತಲುಪಿತು. ದಿನದ ವಹಿವಾಟಿನ ಮೊದಲ ಮೂವತ್ತು ನಿಮಿಷಗಳಲ್ಲಿ ಗರಿಷ್ಠ 80,057.90 ಅನ್ನು ಮುಟ್ಟಿತು. ನಿಫ್ಟಿ 50 ಸೂಚ್ಯಂಕವು 24,294.60 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.

    ಸುಮಾರು 2,086 ಷೇರುಗಳು ಏರಿಕೆ ದಾಖಲಿಸಿದರೆ, 699 ಷೇರುಗಳು ಇಳಿಕೆ ಕಂಡಿವು. 100 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

    ಸೆನ್ಸೆಕ್ಸ್‌ನ 30 ಲಿಸ್ಟೆಡ್ ಕಂಪನಿಗಳ ಪೈಕಿ 23 ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಏಳು ಷೇರುಗಳ ಮೌಲ್ಯ ಇಳಿಕೆಯಾಗಿದೆ.

    ಸೆನ್ಸೆಕ್ಸ್‌ನಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ಟಾಪ್ ಪರ್ಫಾರ್ಮರ್ ಆಗಿದೆ. ಕಳೆದ ವರ್ಷ ಡಿಸೆಂಬರ್ 11 ರಿಂದ ಶೇಕಡಾ 74 ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪವರ್ ಗ್ರಿಡ್ ಶೇಕಡಾ 44 ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್ ಮತ್ತು ಟಾಟಾ ಮೋಟಾರ್ಸ್‌ನಂತಹ ಷೇರುಗಳು ಸಹ ಲಾಭ ಗಳಿಸಿದವು.

    See also  ಇಂಟ್ರಾ ಡೇ ವಹಿವಾಟಿನಲ್ಲಿ ದಾಖಲೆ ಬರೆದ ನಿಫ್ಟಿ: ಬೆಂಚ್​ಮಾರ್ಕ್​ ಸೂಚ್ಯಂಕ ಕುಸಿತದ ನಡುವೆಯೂ ಮಿಡ್​ ಕ್ಯಾಪ್​, ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳ ಏರಿಕೆ

    ಅದೇ ರೀತಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಶೇ.3.66 ಏರಿಕೆ ದಾಖಲಿಸಿದ್ದು, 1794 ರೂಪಾಯಿ ಮೌಲ್ಯದ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ನಿಫ್ಟಿ 50 ಏರಿಕೆಯೊಂದಿಗೆ ಬ್ಯಾಂಕ್ 69.6 ಪಾಯಿಂಟ್‌ ಕೂಡಿಸಿದೆ. ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಕೂಡ ಮುಂಚೂಣಿ ಸೂಚ್ಯಂಕ ಪ್ರದರ್ಶಿಸಿದ್ದು, ಉನ್ನತ ಮಟ್ಟಕ್ಕೆ ಏರಿಕೆ ಕಂಡಿವೆ.

    ಇನ್ನು ಸೆನ್ಸೆಕ್ಸ್ ಏಳು ತಿಂಗಳ ಒಳಗೆ 10ಸಾವಿರ ಪಾಯಿಂಟ್ ಮುನ್ನಡೆದಿದೆ. 2023ರ ಡಿಸೆಂಬರ್ 11ರಂದು ಮೊದಲ ಬಾರಿಗೆ 70ಸಾವಿರ ಗಡಿ ದಾಟಿದ್ದು, ಇದೀಗ ಏಳು ತಿಂಗಳ ಒಳಗೆ 80ಸಾವಿರ ಪಾಯಿಂಟ್‌ಗಳ ಮುನ್ನಡೆ ದಾಖಲಿಸಿದೆ.

    ಲೋಕಸಭೆ ಚುನಾವಣೆ ಫಲಿತಾಂಶ ಜೂ.4 ರಂದು ಪ್ರಕಟವಾದಾಗ ಸೆನ್ಸೆಕ್ಸ್​ ಕನಿಷ್ಠ ಮಟ್ಟಕ್ಕೆ ಅಂದರೆ 80ಸಾವಿರ ಅಂಶ ಕುಸಿತ ಕಂಡಿತ್ತು. ಅಂದಿನ ವಹಿವಾಟಿನಲ್ಲಿ ಶೇ. 5.74 ಅಂದರೆ 4,390 ಪಾಯಿಂಟ್ ನೊಂದಿಗೆ ಭಾರಿ ನಷ್ಟದೊಂದಿಗೆ 72,079.05 ಕ್ಕೆ ಕೊನೆಗೊಳಿಸಿತ್ತು.

    ಏರ್‌ಟೆಲ್ ಮೊಬೈಲ್ ಸೇವಾ ಸುಂಕ ಶೇ.10-21 ಹೆಚ್ಚಳ..ಈ ದಿನದಿಂದ ಪರಿಷ್ಕೃತ ದರ ಜಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts