More

    ಕುಷ್ಟಗಿಯಿಂದ ನರಗುಂದ ಮೂಲಕ ಗೋಕಾಕಗೆ ರೈಲು ಮಾರ್ಗ ಆರಂಭಿಸಿ

    ನರಗುಂದ: ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಗೋಕಾಕವರೆಗೆ ನೂತನ ರೈಲು ಮಾರ್ಗ ಪ್ರಾರಂಭಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರು, ನರಗುಂದ ನಾಗರಿಕರ ಪರವಾಗಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರಿಗೆ ಶಿರೋಳದಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.


    ನರಗುಂದ ಕೃಷಿ, ವಾಣಿಜ್ಯ, ಶೈಕ್ಷಣಿಕ, ಆರ್ಥಿಕತೆ ಸೇರಿ ಅತ್ಯಂತ ತ್ವರಿತವಾಗಿ ಪ್ರಗತಿ ಹೊಂದುತ್ತಿರುವ ನಗರವಾಗಿ ಹೊರಹೊಮ್ಮುತ್ತಿದೆ. ಈ ಭಾಗದ ರೈತರು, ವ್ಯಾಪಾರಸ್ಥರು ಹಾಗೂ ಲಕ್ಷಾಂತರ ಪ್ರವಾಸಿಗರುವಿವಿಧ ಕೆಲಸ ಕಾರ್ಯಗಳಿಗಾಗಿ ಬಸ್ ಮುಖಾಂತರ ಗೋಕಾಕ, ಬೆಳಗಾವಿ ಮಾರ್ಗವಾಗಿ ನೆರೆಯ ಮಹಾರಾಷ್ಟ್ರ, ದೆಹಲಿ ಮುಂತಾದೆಡೆ ಸಂಚರಿಸುತ್ತಿದ್ದಾರೆ.


    ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ 250 ಕಿಲೋ ಮೀಟರ್ ದೂರದಲ್ಲಿರುವ ಗೋಕಾಕವರೆಗೆ ನೂತನ ರೈಲು ಮಾರ್ಗ ನಿರ್ವಿುಸುವುದರಿಂದ ಗಜೇಂದ್ರಗಡದ ಶ್ರೀಕಾಲಕಾಲೇಶ್ವರ ದೇವಸ್ಥಾನ, ಇಟಗಿ ಶ್ರೀ ಭೀಮಾಬಿಂಕೆದೇವಿ, ಐತಿಹಾಸಿಕ ಪ್ರಸಿದ್ಧ ನರಗುಂದ, ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ, ನವಿಲು ತೀರ್ಥ ಜಲಾಶಯ, ಮುನವಳ್ಳಿಯ ರೇಣುಕಾ ಶುಗರ್ಸ್ ಫ್ಯಾಕ್ಟರಿ, ಗೊಡಚಿ ಶ್ರೀ ವೀರಭದ್ರೇಶ್ವರ, ಸೊಗಲದ ಶ್ರೀ ಸೋಮೇಶ್ವರ ದೇವಸ್ಥಾನ ಹಾಗೂ ಯರಗಟ್ಟಿ, ಘಟಪ್ರಭಾ, ಗೋಕಾಕ ಪಾಲ್ಸ್ ಸೇರಿ ಮುಂತಾದ ಐತಿಹಾಸಿಕ ಸ್ಥಳಗಳಿಗೆ ವಿಶೇಷ ಜೀವಕಳೆ ಬರುವುದರ ಜತೆಗೆ ಆರ್ಥಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರ ದೂರದ ಪ್ರಯಾಣ ಅತ್ಯಂತ ಸುಗಮಗೊಳಿಸಿದಂತಾಗುತ್ತದೆ.


    ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಹೇರಳವಾಗಿ ಹತ್ತಿ, ಗೋಧಿ, ಜೋಳ, ಕಬ್ಬು, ಗೋವಿನಜೋಳ, ಸೂರ್ಯಕಾಂತಿ ಮುಂತಾದ ಬೆಳೆ ಬೆಳೆಯುವ ರೈತರ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ನೂತನ ರೈಲು ಮಾರ್ಗ ವರದಾನವಾಗಿ ಪರಿಣಿಮಿಸಲಿದೆ. ನರಗುಂದ ನಾಗರಿಕರ ಬಹು ದಿನಗಳ ಬೇಡಿಕೆ ತಕ್ಷಣ ಈಡೇರಿಸುವುದರ ಜತೆಗೆ ರೈತರ ಆದಾಯ ದ್ವಿಗುಣಗೊಳ್ಳಲು ಶ್ರಮಿಸಬೇಕೆಂದು ಒತ್ತಾಯಿಸಿದರು.
    ಬಂಡಾಯ ಸಾಹಿತಿ ಮಾರುತಿ ಭೋಸಲೆ, ಚನ್ನು ನಂದಿ, ಆರ್.ಟಿ. ಪಾಟೀಲ, ರಾಘವೇಂದ್ರ ಗುಜಮಾಗಡಿ, ಬಸವರಾಜ ತಾವರೆ, ನಬೀಸಾಬ ಕಿಲ್ಲೇದಾರ, ವಾಸುರಡ್ಡಿ ಹೆಬ್ಬಾಳ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts