More

    ಈ ವಿಷಯದ ಬಗ್ಗೆ ಅನುಮಾನವೇ ಬೇಡ… ರೋಹಿತ್​ರನ್ನು ಕಪಿಲ್ ದೇವ್​​ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

    ನವದೆಹಲಿ: ಜೂ.27ರಂದು ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ 68 ರನ್​ಗಳ ಭರ್ಜರಿ ಜಯ ಸಾಧಿಸಿ ಇದೀಗ ಫೈನಲ್ ಹಂತವನ್ನು ತಲುಪಿದೆ.​ ಸತತ ಗೆಲುವಿನ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚುತ್ತಿರುವ ರೋಹಿತ್ ಪಡೆ, ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ. ಪಂದ್ಯ ಆರಂಭದ ಬೆನ್ನಲ್ಲೇ ಇದೀಗ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಗೆಲುವಿಗೆ ಶುಭಹಾರೈಸುತ್ತಿದ್ದು, ವಿಶ್ವಕಪ್ ಕಿರೀಟಕ್ಕೆ ಮುತ್ತಿಡಲಿ ಎಂದು ಆಶಿಸಿದ್ದಾರೆ.

    ಇದನ್ನೂ ಓದಿ: ನಗರದಲ್ಲಿ ಕೊಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ

    ಇನ್ನು ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಫೈನಲ್​ವರೆಗೂ ಮುನ್ನಡೆಸಿಕೊಂಡು ಬಂದಿರುವ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಕೇವಲ ನಾಯಕತ್ವ ಮಾತ್ರ ನಿಭಾಯಿಸದ ರೋಹಿತ್, ಒಬ್ಬ ಉತ್ತಮ ಆರಂಭಿಕ ಬ್ಯಾಟ್ಸ್​ಮನ್ ಆಗಿ ತಂಡಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಈ ಬಗ್ಗೆ ಮೆಚ್ಚಿ ಮಾತನಾಡಿದ ಭಾರತದ ಮಾಜಿ ಹಿರಿಯ ಕ್ರಿಕೆಟಿಗ ಶ್ರೀಕಾಂತ್, ‘ಹಿಟ್​ಮ್ಯಾನ್’ ಕ್ಯಾಪ್ಟನ್ಸಿ ಮತ್ತು ಕಪಿಲ್ ದೇವ್ ಅವರ ನಾಯಕತ್ವ ಒಂದೇ ಎಂದು ಹೇಳಿದ್ದಾರೆ.

    “ಟಿ20 ವಿಶ್ವಕಪ್​ ಸ್ಪರ್ಧೆಯಲ್ಲಿದ್ದ ಅಷ್ಟು ಬಲಿಷ್ಠ ತಂಡಗಳನ್ನು ಹಿಂದಿಕ್ಕಿ, ಫೈನಲ್ ಪ್ರವೇಶಿಸಿರುವ ಭಾರತದ ಹಾದಿ ಅಂದುಕೊಂಡಂತೆ ಸುಲಭ ಇರಲಿಲ್ಲ. ಇದಕ್ಕೆ ತಂಡದ ಅಪಾರ ಕೊಡುಗೆ ಮತ್ತು ರೋಹಿತ್ ಶರ್ಮ ಅವರ ಅದ್ಭುತ ಕ್ಯಾಪ್ಟನ್ಸಿಯೇ ಕಾರಣ. ಅಂದು 1983ರ ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ಕ್ಯಾಪ್ಟನ್, ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರಂತೆಯೇ ರೋಹಿತ್ ಕೂಡ ನಾಯಕತ್ವ ನಿಭಾಯಿಸಿದ್ದಾರೆ. ಅದರಲ್ಲಿ ಕಿಂಚಿತ್ತು ಅನುಮಾನವೇ ಇಲ್ಲ” ಎಂದು ಶ್ರೀಕಾಂತ್ ಅಭಿಪ್ರಾಯಿಸಿದ್ದಾರೆ.

    ಇದನ್ನೂ ಓದಿ: ಕಿರುಕುಳ ಎನ್ನಿಸಿದಾಗ ರಕ್ಷಣೆ ಪಡೆದುಕೊಳ್ಳಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಮಂಜುಳಾ ಇಟ್ಟಿ ಸಲಹೆ

    “ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅದ್ಭುತ ನಾಯಕನಾಗಿ ಹೊರಹೊಮ್ಮಿದ್ದಾರೆ. ತಂಡದಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಟೂರ್ನಿಯ ಪೂರ ಶರ್ಮಾ ತಮ್ಮ ಬ್ಯಾಟ್​ನಿಂದ ಆಕರ್ಷಕ ಇನ್ನಿಂಗ್ಸ್​ ನೀಡಿದ್ದಾರೆ. ಇದರೊಟ್ಟಿಗೆ ನಾಯಕತ್ವವನ್ನು ಸಹ ಎಲ್ಲರೂ ಮೆಚ್ಚುವಂತೆ ನಿಭಾಯಿಸಿದ್ದಾರೆ. ಸಣ್ಣ, ಸಣ್ಣ ಕೊಡುಗೆಗಳೇ ತಂಡದ ಗೆಲುವಿಗೆ ದೊಡ್ಡ ಕಾರಣವಾಗಿ ಹೊರಹೊಮ್ಮುವುದು” ಎಂದು ಶ್ರೀಕಾಂತ್ ಹೇಳಿದ್ದಾರೆ,(ಏಜೆನ್ಸೀಸ್).

    ಫೈನಲ್​ನಲ್ಲಿ ಕೊಹ್ಲಿ ಬಿಟ್ಟು, ಈ ಇಬ್ಬರನ್ನು ಓಪನಿಂಗ್ ಆಡಿಸಿ; ಟೀಮ್ ಇಂಡಿಯಾಗೆ ಶೋಯಿಬ್ ಅಖ್ತರ್​ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts