More

    ಬೆಂಗಳೂರು-ಪಂಢರಪುರ ಮಧ್ಯೆ ವಿಶೇಷ ರೈಲು

    ಹುಬ್ಬಳ್ಳಿ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಣೆಗಾಗೊ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಲಾಗಿದೆ.

    ಎಸ್​ಎಂವಿಟಿ ಬೆಂಗಳೂರಿನಿಂದ ಜುಲೈ 1, 3 ಮತ್ತು 6 ರಂದು ರಾತ್ರಿ 10 ಗಂಟೆಗೆ ಹೊರಡುವ ರೈಲು, ಮಾರನೇ ದಿನ ಸಂಜೆ 6.20ಕ್ಕೆ ಪಂಢರಪುರ ನಿಲ್ದಾಣ ತಲುಪಲಿದೆ.

    ಪುನಃ ಇದೇ ರೈಲು ಜು. 2, 4 ಮತ್ತು 7 ರಂದು ರಾತ್ರಿ 8 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12.30ಕ್ಕೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

    ಜು. 2, 5 ಮತ್ತು 7 ರಂದು ರಾತ್ರಿ 10 ಗಂಟೆಗೆ ಎಸಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ಸಂಜೆ 6.20ಕ್ಕೆ ಪಂಢರಪುರವನ್ನು ತಲುಪುತ್ತದೆ.

    ಪುನಃ ಇದೆ ರೈಲು ಜು. 3, 6 ಮತ್ತು 8 ರಂದು ರಾತ್ರಿ 8 ಗಂಟೆಗೆ ಪಂಢರಪುರದಿಂದ ಹೊರಟು, ಮರುದಿನ ಮಧ್ಯಾಹ್ನ 12.30 ಕ್ಕೆ ಎಸ್​ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

    ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್​ಎಂಎಂ ಹಾವೇರಿ, ಎಸ್​ಎಸ್​ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ ರೋಡ, ಘಟಪ್ರಭಾ, ರಾಯಬಾಗ, ಚಿಂಚಲಿ, ಉಗರ್ ಖುರ್ದ್, ಮೀರಜ್, ಕವಠೆಮಹಂಕಲ್, ಧಲಗಾಂವ್, ಸಂಗೋಳ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts