More

    ಕಾಲೇಜ್​​ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣ: ಆರು ಪಿಎಫ್‌ಐ ಕಾರ್ಯಕರ್ತರು ದೋಷಿ, ಐವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

    ಕೊಚ್ಚಿ: ಪ್ರೊಪೆಸರ್​​ ಮೇಲೆ ದಾಳಿ ನಡೆಸಿ ಬಲಗೈಯನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ದೋಷಿಗಳೆಂದು, ಇತರ ಐವರನ್ನು ದೋಷಮುಕ್ತರೆಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯವು ಘೋಷಿಸಿದೆ.

    ನಿಷೇಧಿತ ಸಂಘಟನೆ ಪಾಪುಲರ್​ ಫ್ರಂಟ್​​ ಆಫ್​ ಇಂಡಿಯಾದ(ಪಿಎಫ್​ಐ) ಸದಸ್ಯರಾದ ಎಂ.ಕೆ.ನಾಸರ್, ಸಜಿಲ್, ನಜೀಬ್, ಎಂ.ಕೆ.ನೌಶಾದ್, ಪಿ.ಪಿ.ಮುಹಮ್ಮದ್ಮುಂಜು ಮತ್ತು ಪಿ.ಎಂ.ಅಯೂಬ್​​ರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಶಫೀಕ್, ಅಜೀಜ್ ಓಡಕ್ಕಲಿ, ಮೊಹಮ್ಮದ್ ರಫಿ, ಟಿ.ಪಿ.ಸುಬೈರ್ ಮತ್ತು ಮನ್ಸೂರ್​ರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

    ಇದನ್ನೂ ಓದಿ: ಹಾಸ್ಟೆಲ್​ ಮೇಲ್ವಿಚಾರಣೆ ವೇಳೆ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ, ಅಧಿಕಾರಿಯ ಬಂಧನ

    ಪ್ರಶ್ನೆ ಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ 2010ರ ಜುಲೈ 4ರಂದು ತೊಡುಪುಳದ ನ್ಯೂಮನ್ ಕಾಲೇಜಿನ ಅಧ್ಯಾಪಕರಾಗಿದ್ದ ಟಿಟಿ ಜೋಸೆಫ್​​ ಎಂಬುವರ ಮೇಲೆ ದಾಳಿ ನಡೆದಿತ್ತು. ಏಕಾಏಕಿ ದಾಳಿ ನಡೆಸಿದ ದಾಳಿಕೋರರ ಗುಂಪು ಪ್ರೊಫೆಸರ್​​ರನ್ನು ವಾಹನದಿಂದ ಹೊರಗೆಳೆದು, ಮನೆಯವರ ಸಮ್ಮುಖದಲ್ಲೇ ಹಲ್ಲೆ ನಡೆಸಿ ಅವರ ಬಲಗೈಯನ್ನು ಕತ್ತರಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸವಾದ್ ಎಂಬಾತ ಎಸಗಿದ್ದು, ಆತ ಇನ್ನೂ ತಲೆಮರೆಸಿಕೊಂಡಿದ್ದಾರೆ.

    ಈ ಪ್ರಕರಣವು ಮಲಯಾಳಂ ಪ್ರೊಫೆಸರ್ ಟಿಜೆ ಜೋಸೆಫ್‌ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಕ್ರೂರ ದಾಳಿಗೆ ಸಂಬಂಧಿಸಿದ್ದು, ಈ ಕುರಿತು ಮಾತನಾಡಿದ ಜೋಸೆಫ್​​, ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ. ಈ ಕ್ಷಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸದಿರುವುದು ಸೂಕ್ತ. ಪಿಎಫ್‌ಐ ದಾಳಿಯಲ್ಲಿ ಅನೇಕರು ಬಲಿಪಶುಗಳಾಗಿದ್ದು, ಅನೇಕರು ಈಗ ಜೀವಂತವಾಗಿಲ್ಲ. ಅವರಿಗಾಗಿ ತಾವು ಮೌನ ಆಚರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಪ್ರೇರಣೆ: ವಿದೇಶಿಗರಿಂದ ಅಮರನಾಥ ಯಾತ್ರೆ

    ಈ ಪ್ರಕರಣದ ವಿಚಾರಣೆಯನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಈ ಹಿಂದೆ ಮೊದಲ ಹಂತದಲ್ಲಿ ವಿಚಾರಣೆಗೆ ಒಳಗಾದ 13 ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, 18 ಮಂದಿಯನ್ನು ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು. ಸದ್ಯ ಅಪರಾಧಿ ಎನಸಿಕೊಂಡಿರುವ ಈ 6 ಮಂದಿಯ ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts