More

    ಘನತ್ಯಾಜ್ಯ ಘಟಕ ನಿರ್ವಹಣೆಗೆ ಚರ್ಚಿಸಿ ಪರಿಹಾರ: ಶಾಸಕ ಶಾಂತನಗೌಡ ಭರವಸೆ

    ಹೊನ್ನಾಳಿ: ರಾಜ್ಯದ 5600 ಗ್ರಾಪಂಗಳಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ಘಟಕಗಳು ನಿರ್ವಹಣೆಯಲ್ಲಿ ಬಹುತೇಕ ವಿಫಲವಾಗಿವೆ. ಈ ಬಗ್ಗೆ ಸದನದಲ್ಲಿ ಚರ್ಚಿಸುವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.

    ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಶುಕ್ರವಾರ ಗ್ರಾಪಂನಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಉದ್ಘಾಟಿಸಿ, ಮಾತನಾಡಿದರು.

    ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ರಸ್ತೆಗಳ ಮೇಲೆ ನೀರು ಹರಿಯುತ್ತಿದೆ. ಘನತ್ಯಾಜ್ಯ ಘಟಕಗಳ ಉದ್ದೇಶ ಈಡೇರಿಲ್ಲ. ಗ್ರಾಮಸ್ಥರು ಘನ್ಯತ್ಯಾಜ್ಯವನ್ನು ವಾಹನಗಳಿಗೆ ತಂದು ಹಾಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಗ್ರಾಪಂ ಕಟ್ಟಡಗಳು, ಶಾಲಾ ಕಟ್ಟಡಗಳು ಸೋರಿಕೆಯಾಗುತ್ತಿವೆ. ಇದಕ್ಕೆ ರಾಜಕಾರಣಿಗಳು ಕಾರಣರಲ್ಲ. ಏಕೆಂದರೆ ಪ್ರತಿಯೊಂದು ಕಾಮಗಾರಿ ನಾವೇ ಮಾಡಬೇಕು ಎನ್ನುವ ಧೋರಣೆ ಸರಿಯಲ್ಲವೆಂದರು.

    ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ನೂತನ ಗ್ರಾಪಂ ಕಟ್ಟಡದ ಮೇಲ್ಚಾವಣಿ ಕಟ್ಟಡ ಕಾಮಗಾರಿಗೆ ನನ್ನ ಅನುದಾನ ಹಣ ಕೊಡಿಸುವೆ. ಅದಕ್ಕೆ ಸಂಬಂಧಪಟ್ಟ ಕ್ರಿಯಾಯೋಜನೆ ತಯಾರಿಸಿ ತಮಗೆ ಕಳಿಸಿ ಎಂದು ಹೇಳಿದರು.

    ಜಿಪಂ ಮಾಜಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಗ್ರಾಮಸ್ಥರ ಕುಂದು ಕೊರತೆ ನೀಗಿಸುವ ಕೆಲಸ ಗ್ರಾಪಂಗಳು ಮಾಡಬೇಕಾಗಿದೆ ಎಂದರು.

    ಗ್ರಾಪಂ ಅಧ್ಯಕ್ಷ ಸೋಮಣ್ಣ ಮಾತನಾಡಿ, ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಲು ಅನುದಾನ ನೀಡಬೇಕು, ಗ್ರಾಪಂ ನೂತನ ಕಟ್ಟಡಕ್ಕೆ ಆವರಣ ಗೋಡೆಗೆ ಅನುದಾನ ನೀಡಬೇಕು ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

    ತಾಪಂ ಇಒ ಎಚ್.ವಿ. ರಾಘವೇಂದ್ರ, ಮುಖಂಡ ಬಿ. ಸಿದ್ದಪ್ಪ, ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ವಿ. ನಾಗಪ್ಪ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts