More

    ಇಂಡಿಗನತ್ತ ಶಾಲೆಯ ಸೋಲಾರ್ ಪ್ಯಾನಲ್ ಹಾನಿ

    ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಘಟನೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿದ್ದ ಸೋಲಾರ್ ಪ್ಯಾನಲ್ ಹಾನಿಯಾಗಿರುವುದು ಶನಿವಾರ ತಡವಾಗಿ ಬೆಳಕಿಗೆ ಬಂದಿದೆ.

    ಮೂಲ ಸೌಕರ್ಯ ಒದಗಿಸದ ಸಂಬಂಧ ಇಂಡಿಗನತ್ತ ಗ್ರಾಮಸ್ಥರು ರೊಚ್ಚಿಗೆದ್ದು ಏ.26ರಂದು ಮತಗಟ್ಟೆಯನ್ನು ಧ್ವಂಸ ಗೊಳಿಸಿದ್ದರು. ಕಲ್ಲು ತೂರಾಟದಿಂದ ಅಧಿಕಾರಿಗಳು ಗಾಯಗೊಂಡಿದ್ದರು. ಶಾಲಾ ಕೊಠಡಿಯ ಬಾಗಿಲು, ಕಿಟಕಿ ಹಾಗೂ ಕಾಂಪೌಂಡ್ ಹಾನಿಗಾಗಿತ್ತು. ಜತೆಗೆ ಕಲ್ಲು ತೂರಾಟದಿಂದ ಕೊಠಡಿಯ ಛಾವಣಿಯಲ್ಲಿ ಅಳವಡಿಸಲಾಗಿದ್ದ ಸೋಲಾರ್ ಪ್ಯಾನಲ್ ಸಹ ಹಾನಿಯಾಗಿತ್ತು. ಆದರೆ ಈ ಬಗ್ಗೆ ಗಮನಕ್ಕೆ ಬಂದಿರಲಿಲ್ಲ.

    ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕಳೆದ 6 ತಿಂಗಳ ಹಿಂದೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಲೆಗೆ ಸೋಲಾರ್ ಪ್ಯಾನಲ್ ಅಳವಡಿಸಿದ್ದು, ಸ್ಮಾರ್ಟ್ ಕ್ಲಾಸ್‌ನ ಟಿವಿ ಹಾಗೂ ವಿದ್ಯುತ್ ದೀಪಗಳಿಗೆ ಅನುಕೂಲವಾಗಿತ್ತು. ಆದರೆ ಇದೀಗ ಶಾಲೆ ಆರಂಭವಾಗಿರುವುದರಿಂದ ಇಲ್ಲಿನ ಶಿಕ್ಷಕ ರಾಘವೇಂದ್ರ ಅವರು ಮಕ್ಕಳಿಗೆ ಸ್ಮಾಟ್ ಕ್ಲಾಸ್ ತರಗತಿ ನಡೆಸುತ್ತಿದ್ದರು. 24 ಗಂಟೆಯೂ ಉತ್ತಮ ಸಾಮರ್ಥ್ಯ ಶಕ್ತಿಯನ್ನು ಹೊಂದಿದ್ದ ಸೋಲಾರ್ ಪ್ಯಾನಲ್ ಇತ್ತೀಚೆಗೆ ಸಾಮರ್ಥ್ಯ ಕ್ಷೀಣಿಸಿತ್ತು. ಇದರಿಂದ ಅನುಮಾನಗೊಂಡ ಶಿಕ್ಷಕ ರಾಘವೇಂದ್ರ ಅವರು ಪ್ಯಾನಲ್ ಬಳಿ ತೆರಳಿ ವೀಕ್ಷಿಸಿದಾಗ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts