More

    ಒಂದು ಕಾಲದ ಕುಚಿಕು ಗೆಳೆಯನ ಪತ್ನಿಗೆ ಮಧ್ಯರಾತ್ರಿಯಲ್ಲಿ ವಾಯ್ಸ್​ ಮೆಸೇಜ್ ಕಳುಹಿಸಿದ್ದ! ದಚ್ಚು​ ವಿರುದ್ಧ ಗಂಭೀರ ಆರೋಪ

    ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಯುವಕನನ್ನು ಅಪಹರಿಸಿ, ಮನಬಂದಂತೆ ಥಳಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನವಾಗಿರುವ ನಟ ದರ್ಶನ್​, ಗೆಳತಿ ಪವಿತ್ರಾ ಗೌಡ ಮತ್ತು ಅವರ ಸಹಚರರನ್ನು ಜೂನ್​ 15 ರಂದು ಕೋರ್ಟ್​ ಮತ್ತೆ ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿತ್ತು. ಇಂದು ಅವಧಿ ಅಂತ್ಯವಾಗಲಿದ್ದು, ಮತ್ತೆ ಆರೋಪಿಗಳನ್ನು ಇಂದು ಕೋರ್ಟ್​ ಮುಂದೆ ಹಾಜರುಪಡಿಸಲಿದ್ದಾರೆ. ಇಂದು ದರ್ಶನ್​ ಮತ್ತು ಅವರ ಗ್ಯಾಂಗ್​ ಜೈಲುಪಾಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ದರ್ಶನ್​ ಬಗ್ಗೆ ಒಂದೊಂದೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.

    ಮೈಸೂರಿನ ಬಳಿಯಿರುವ ದರ್ಶನ್​ ಅವರ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಎತ್ತಿನ ಕೊಂಬು ಚುಚ್ಚಿ ಗಾಯವಾದಾಗ ದರ್ಶನ್​ ಸಹಾಯ ಮಾಡಲಿಲ್ಲ ಎಂಬ ಆರೋಪ ಮೊನ್ನೆಯಷ್ಟೇ ಕೇಳಿಬಂತು. ಅಲ್ಲದೆ, ಸಹಾಯ ಕೇಳಲು ಹೋದಾಗ ನಾಯಿ ಛೂ ಬಿಟ್ಟಿದ್ದರು ಎಂದು ಸಂತ್ರಸ್ತನ ಸಂಬಂಧಿಕರು ಮಾಧ್ಯಮದ ಮುಂದೆ ಬಾಯ್ಬಿಟ್ಟಿದ್ದರು. ಪೊನ್ನಂಪೇಟೆಯಲ್ಲಿರುವ ದರ್ಶನ್​ ಅವರ ಪೂರ್ವಿಕರ ನಿವಾಸವನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ರೀತಿ ಒಂದೊಂದೆ ಆರೋಪಗಳು ದರ್ಶನ್​ ವಿರುದ್ಧ ಕೇಳಿಬರುತ್ತಿವೆ.

    ದರ್ಶನ್​ ವಿರುದ್ಧ ಬಿಗ್​ಬಾಸ್ ಸೀಸನ್​ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರು ತಮ್ಮ ಫೇಸ್​ಬುಕ್​ ಪೇಜ್​ ಮೂಲಕ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಆರು ಅಡಿ ದೈತ್ಯಾಕಾರನ ಕರ್ಮ ಕಾಂಡ ಎಂಬ ಶೀರ್ಷಿಕೆಯಲ್ಲಿ ನಿತ್ಯವೂ ದರ್ಶನ್​ ಕುರಿತಾದ ಒಂದೊಂದು ಕರಾಳ ಕತೆಯನ್ನು ಬಹಿರಂಗಪಡಿಸುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯ ಎಂಬುದು ಸಂಬರಗಿಗೆ ಮಾತ್ರ ತಿಳಿದಿದೆ.

    ಈಗಾಗಲೇ ಎರಡು ಕರ್ಮಕಾಂಡಗಳನ್ನು ಬಿಚ್ಚಿಟ್ಟಿರುವ ಪ್ರಶಾಂತ್​ ಸಂಬರಗಿ, ಇದೀಗ ಮೂರನೇ ಕರ್ಮಕಾಂಡವನ್ನು ಬಿಚ್ಚಿಟ್ಟಿದ್ದಾರೆ. ಮುಂದುವರಿದ ದಚ್ಚುವಿನ ಕರ್ಮಕಾಂಡ ಭಾಗ-3 ಎಂಬ ಶೀರ್ಷಿಕೆಯೊಂದಿಗೆ ಬರವಣಿಗೆ ಆರಂಭಿಸಿರುವ ಸಂಬರಗಿ, ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ. ಈ ಘಟನೆ ನಡೆದಿದ್ದು 2019ರಲ್ಲಿ, ಈ 6 ಅಡಿ ದೈತ್ಯಾಕಾರದ ಮೃಗ, ಸ್ನೇಹ ಮತ್ತು ಮಾನವೀಯತೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದನು. ಅವತ್ತು ಒಂದು ಕಾಲದ ಇವನ ಕುಚಿಕು, ಸ್ಯಾಂಡಲ್‌ವುಡ್ ಸ್ಟಾರ್​ ಹೀರೋ ಗೆಳೆಯನ ಹೆಂಡತಿಗೆ ರಾತ್ರಿಯಲ್ಲಿ ಬೆದರಿಕೆ ಮತ್ತು ಎಚ್ಚರಿಕೆ ಧ್ವನಿ ಸಂದೇಶವನ್ನು ಕಳಿಸಿಬಿಟ್ಟು, ಅದರಲ್ಲಿ ಹೇಳ್ತಾನೆ ನಿಮ್ಮ ಸ್ಟಾರ್ ಪತಿ ಯಾವುದೇ ಕಾರಣಕ್ಕೂ ನನ್ನ ಅಭಿಮಾನಿ ಬಳಗವನ್ನು ಸಂಪರ್ಕಿಸದಂತೆ ನೋಡಿಕೋ, ಇಲ್ಲ ಅಂದ್ರೆ ಪರಿಸ್ಥಿತಿ ನೆಟ್ಟಗಿರಲ್ಲ. ನಶೆಯಲ್ಲಿ ಇವನ ದೊಡ್ಡ ಮೋರಿ ಬಾಯಿಗೆ ಹೆಣ್ಣು, ಗಂಡು ಬೆಲೆನೇ ಇರಲ್ಲ, ಏನೇನು ಕೆಟ್ಟ ಮಾತು ಹೇಳಿರ್ತಾನೋ? ತು ಇವನ ಜಾಯಮಾನನೇ ಇಷ್ಟು. ಕೀಳು ಮನಸ್ಥಿತಿಯ ಕ್ರಿಮಿ ಎಂದು ಸಂಬರಗಿಗೆ ಕಿಡಿಕಾರಿದ್ದಾರೆ.

    ಕರ್ಮಕಾಂಡ ಭಾಗ-1
    ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ಸಂಗೀತ ನಿರ್ದೇಶಕ ಮತ್ತು ಟಿವಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿರುವ ನನ್ನ ಸ್ನೇಹಿತನಿಗೆ 2 ವರುಷದ ಹಿಂದೆ ಹಾರ್ಟ್ ಅಟ್ಯಾಕ್ ಆಗಿತ್ತು. ಅದಕ್ಕೆ ಕಾರಣ ರೌಡಿ ಬಾಸ್. ಅದೇ ಆರು ಅಡಿ ಎತ್ತರದ ಮೃಗದಿಂದ ಬೆದರಿಕೆಯ ಕರೆ ಮತ್ತು ಮಾನಸಿಕ ಹಿಂಸೆ ಎಂದು ಪ್ರಶಾಂತ್​ ಸಂಬರಗಿ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಮೂರು ದಿನಗಳ ಹಿಂದೆ ಬರೆದುಕೊಂಡಿದ್ದರು. ಇದಕ್ಕೆ ಆರು ಅಡಿ ದೈತ್ಯಾಕಾರನ ಕರ್ಮ ಕಾಂಡ ಭಾಗ-1 ಎಂದು ಶೀರ್ಷಿಕೆ ನೀಡಿದ್ದರು.

    ಕರ್ಮಕಾಂಡ ಭಾಗ-2
    ಆರು ಅಡಿ ದೈತ್ಯಾಕಾರನ ಮತ್ತೊಂದು ಕರ್ಮ ಕಾಂಡ ಭಾಗ-2 ಎಂಬ ಶೀರ್ಷಿಕೆ ಮೂಲಕ ಪ್ರಶಾಂತ್​ ಸಂಬರಗಿ, ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಹಿಂಸೆ ಮತ್ತು ಕೊಲೆ ಮಾಡುವ ಮುನ್ನ ಅಮಾಯಕ ರೇಣುಕಾಸ್ವಾಮಿ ತಾನು ಲಿಂಗಾಯತ ಮತ್ತು ಸಸ್ಯಾಹಾರಿ ಎಂದು ಗೋಗರಿದರು ಕೇಳದೆ, ಬಲವಂತವಾಗಿ ಚಿಕನ್ ತುಂಡನ್ನು ಬಾಯಿಗೆ ತುರಿಕಿದನು ಈ ರೌಡಿ ಬಾಸ್. ಅದೇ ರೀತಿ 3 ವರ್ಷಗಳ ಹಿಂದೆ ಒಬ್ಬಳು ಖ್ಯಾತ ಕನ್ನಡ ಚಲನಚಿತ್ರ ನಟಿ, ಇವನೊಡನೆ ಚಿತ್ರೀಕರಣ ವೇಳೆಯಲ್ಲಿ ತಾನು ಸಸ್ಯಾಹಾರಿ ಮತ್ತು ಸಾತ್ವಿಕ ಊಟ ಬೇಕು ಎಂದು ಕೇಳಿದಾಗಲೂ ಅವಳ ಮಾತನ್ನು ಲೆಕ್ಕಿಸದೆ, ಈ ದೈತ್ಯಾಕಾರನ ಸೂಚನೆಯಂತೆ ಮಧ್ಯಾಹ್ನದ ಊಟದಲ್ಲಿ ನಾನ್‌ವೆಜ್ ಮಾಂಸವನ್ನು ಬೆರೆಸಿ ನೀಡಲಾಗಿತ್ತು. ನಟಿ ಅದನ್ನು ತಿನ್ನುವಾಗ ಈ ದುರಾತ್ಮ ದುರ್ಯೋಧನಂತೆ ಗಹಗಹಿಸಿ ನಕ್ಕನಂತೆ. ತು.. ಇವನೊಬ್ಬ ಮೃಗ ಎಂದು ಪ್ರಶಾಂತ್​ ಸಂಬರಗಿ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

    ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.

    ಆ ಖ್ಯಾತ ನಟಿಗೆ ಮಾಡಬಾರದ್ದನ್ನು ಮಾಡಿ ದುರ್ಯೋಧನನಂತೆ ನಗುತ್ತಿದ್ದ! ದರ್ಶನ್​ ವಿರುದ್ಧ ಮತ್ತೊಂದು ಆರೋಪ

    ಖ್ಯಾತ ಸಂಗೀತ ನಿರ್ದೇಶಕನಿಗೆ ಹೃದಯಾಘಾತವಾಗಲು ದರ್ಶನ್ ಕಾರಣ! ಬಿಗ್​ಬಾಸ್​ ಸ್ಪರ್ಧಿಯಿಂದ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts