More

    ವಿದ್ಯಾರ್ಥಿಗಳಿಗೆ ಕೌಶಲ, ಬದ್ಧತೆ ಮುಖ್ಯ


    ವಿಜಯವಾಣಿ ಸುದ್ದಿಜಾಲ ಧಾರವಾಡ
    ವಿದ್ಯಾರ್ಥಿ ಜೀವನದಲ್ಲಿ ಇನ್ನು ಮುಂಬರುವ ದಿನಗಳಲ್ಲಿ ನೌಕರಿ ಪಡೆಯಲು ಕೇವಲ ಅಂಕಗಳು ಹೆಚ್ಚಿದ್ದರೆ ನಡೆಯದು. ಕೌಶಲ ಹಾಗೂ ಬದ್ಧತೆ ಬೇಕು. ಇಟ್ಟುಕೊಂಡ ಗುರಿ ಮುಟ್ಟಲು ಸತತ ಪರಿಶ್ರಮ ಪಡಬೇಕು ಎಂದು ಮೈಸೂರಿನ ಪ್ರೊ. ಕೃಷ್ಣೇಗೌಡ ಹೇಳಿದರು
    ನಗರದ ವಿದ್ಯಾಗಿರಿಯ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾಷಿರ್ಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಬಡತನ ಎನ್ನುವುದು ಉನ್ನತ ಸ್ಥಾನಕ್ಕೆ ಏರಲು ಅಡ್ಡಿಯಾಗದು. ಬಡತನ ಅನುಭವಿಸುತ್ತಲೇ ಸಾಧನೆಗೈದ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ. ಅವಕಾಶಗಳು ಸಿಕ್ಕಾಗ ಅದನ್ನು ಉಪಯೋಗ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಜೆಎಸ್​ಎಸ್​ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಆದರ್ಶ ಮೌಲ್ಯಗಳನ್ನು ಕೃಷ್ಣೇಗೌಡ ತಿಳಿಸಿದ್ದಾರೆ. ಅವರ ಮಾತುಗಳೆಲ್ಲ ವಿದ್ಯಾರ್ಥಿಗಳ ಸಾಧನೆಯ ಮೆಟ್ಟಿಲುಗಳಾಗಿವೆ. ವಿದ್ಯಾರ್ಥಿಗಳ ಹಿತವನ್ನೇ ಮೂಲ ಉದ್ದೇಶವಾಗಿಟ್ಟುಕೊಂಡಿರುವ ಸಂಸ್ಥೆಯ ಸದುಪಯೋಗ ಪಡೆದು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
    ವಿವೇಕ ಲಕ್ಷ್ಮೇಶ್ವರ, ಎನ್​.ಎಲ್​. ಪುಡಕಲಕಟ್ಟಿ, ಶ್ರೀಕಾಂತ ರಾಗಿಕಲ್ಲಾಪುರ, ಡಾ. ರಾಜೇಶ ಚಿಟಗುಪ್ಪಿ, ದೈಹಿಕ ನಿರ್ದೇಶಕ ಜೆ.ಆರ್​. ಕುಂದಗೋಳ, ಶ್ರವಣ ಯೋಗಿ, ರಶ್ಮಿ ಹೊಸಳ್ಳಿ, ಪ್ರಿಯಾಂಕಾ ಚನ್ನಗೌಡರ, ಪ್ರಾಚಾರ್ಯ ಡಾ. ಕೆ.ಎಚ್​. ನಾಗಚಂದ್ರ ಉಪಸ್ಥಿತರಿದ್ದರು.
    ಡಾ. ಸೂರಜ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದಿಪ ನಾಯಕ, ಕಾವ್ಯ ಕೋಟಿ ನಿರೂಪಿಸಿದರು. ಮಧು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts