More

    ಯುವಜನತೆಗೆ ಕೌಶಲ ತರಬೇತಿ ಆರಂಭ

    ಹುಬ್ಬಳ್ಳಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್ಎಂಇ) ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ (ಸಿಎಸ್ಆರ್) ಅಡಿಯಲ್ಲಿ ಯುವಜನರಿಗೆ ಕೌಶಲ ತರಬೇತಿ ಹಾಗೂ ಉದ್ಯೋಗಾವಕಾಶ ನೀಡುವ ಉಪಕ್ರಮ ಆರಂಭವಾಗಿದೆ.

    ನಾಸ್ಕಾಮ್ ಫೌಂಡೇಷನ್ ಆಶ್ರಯದಲ್ಲಿ ತಂತ್ರಜ್ಞಾನ ಆಧಾರಿತ ಎಸ್ಎಂಇಗಳನ್ನು ಒಂದುಗೂಡಿಸುವುದು, ಜತೆಗೆ ನಿರ್ಲಕ್ಷಿತ ಯುವಕರಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ. ಗುರುವಾರ ದೇಶದ ಹುಬ್ಬಳ್ಳಿ, ತಿರುವನಂತಪುರ ಹಾಗೂ ದೆಹಲಿಯಲ್ಲಿ ಇದನ್ನು ಪ್ರಾರಂಭ ಮಾಡಲಾಗಿದೆ.

    ಉದ್ಯಮದ ಮಹನೀಯರ ಕಾರ್ಯತಂತ್ರದ ಪಾಲುದಾರಿಕೆಯು 120 ಯುವಕರಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಿದೆ.

    ಶೇ. 60ರಷ್ಟು ಮಹಿಳಾ ಅಭ್ಯರ್ಥಿಗಳು ಹುಬ್ಬಳ್ಳಿಯ 40 ವಿದ್ಯಾರ್ಥಿಗಳೊಂದಿಗೆ ತರಬೇತಿ ಪಡೆಯಲಿದ್ದಾರೆ. ಸಮಗ್ರ ತರಬೇತಿಯು ಪೈಥಾನ್ ಮತ್ತು ಡೇಟಾ ಅನಾಲಿಟಿಕ್ಸ್ ಸೇರಿ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಲ್ಪಾವಧಿಯ ಕೋರ್ಸ್ ಗಳನ್ನು ಒಳಗೊಂಡಿದೆ.

    ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ, ಪರಿಣತ ನಾಯಕರಿಂದ ಮಾರ್ಗದರ್ಶನ ಮುಂತಾದ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸಿದ ಶೇ. 50ರಷ್ಟು ಕೌಶಲಪೂರ್ಣ ಯುವಕರು ಐಟಿ/ಐಟಿಇಎಸ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿಗೆ ಪ್ರವೇಶ ಪಡೆಯುಯುವರು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts