More

    ತಿಳಿದಿರುವವರಿಗೆ ಹೊಸದಾಗಿ ಕಲಿಸುವ ಅಗತ್ಯವಿಲ್ಲ; ಹಿಟ್​ಮ್ಯಾನ್​ ವಿರುದ್ಧ ಗುಡುಗಿದ ಪಾಕ್​ ಮಾಜಿ ನಾಯಕ

    ನವದೆಹಲಿ: ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್​ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್​ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿ ತೀವ್ರವಾಗಿ ಟೀಕೆಗೆ ಗುರಿಯಾಗಿತ್ತು. ಭಾರತದ ವಿರುದ್ಧ ನಿರಂತರವಾಗಿ ಆರೋಪ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನವು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್​ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಕುರಿತು ಮಾತನಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಜೂನ್​ 25ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್​ 08 ಪಂದ್ಯದಲ್ಲಿ ಟೀಮ್​ ಇಂಡಿಯಾ 24 ರನ್​ಗಳ ಭರ್ಜರಿ ಜಯ ಗಳಿಸಿತ್ತು. ಟೀಮ್​ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಅರ್ಷದೀಪ್​ ಸಿಂಗ್​ ಬಾಲ್ ಟ್ಯಾಂಪರಿಂಗ್​ ಮಾಡುವ ಮೂಲಕ ಮೋಸದಾಟವಾಡಿದ್ದಾರೆ. 15ನೇ ಓವರ್​ನಲ್ಲಿ ಅರ್ಷದೀಪ್​ ಬೌಲಿಂಗ್​ ಮಾಡಿದಾಗ ಚೆಂಡು ರಿವರ್ಸ್​ ಸ್ವಿಂಗ್​ ಆಗಲು ಶುರು ಮಾಡಿತು. ಇದು ಅಂಪೈರ್​ಗಳ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತನಿಖೆಯಾಗಬೇಕು ಎಂದು ಇಂಜಮಾಮ್​ ಆಗ್ರಹಿಸಿದ್ದರು.

    ಇಂಜಮಾಮ್​ ಆರೋಪಕ್ಕೆ ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಖಡಕ್​ ತಿರುಗೇಟು ನೀಡಿದ್ದ ರೋಹಿತ್​, ಇದು ಅಗ್ಗದ ಮತ್ತು ಮೂರ್ಖತನದ ಆರೋಪಗಳು ಎಂದಿದ್ದಾರೆ. ಇಲ್ಲಿರುವುದು ಬಿಸಿ ಮತ್ತು ಒಣ ಪಿಚ್‌ಗಳು. ಇಲ್ಲಿ ರಿವರ್ಸ್ ಸ್ವಿಂಗ್ ಆಗದೇ ಇನ್ನೆಲ್ಲಿ ಆಗುತ್ತದೆ. ನಾವೇನು ಇಂಗ್ಲೆಂಡ್​ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿಲ್ಲ ಎಂದು ರೋಹಿತ್​ ಶರ್ಮ ಖಾರವಾಗಿ ಪ್ರತಿಕ್ರಿಯೆ ನೀಡಿದರು.

    ಇದನ್ನೂ ಓದಿ: ಏಕದಿನ ವಿಶ್ವಕಪ್​ ಫೈನಲ್​ ಮರುಕಳಿಸಲಿ; ಟೀಮ್​ ಇಂಡಿಯಾ ಸೋಲಬೇಕು ಎಂದ ಮಾಜಿ ನಾಯಕ

    ಇದೀಗ ರೋಹಿತ್​ ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಂಜಮಾಮ್, ಖಂಡಿತವಾಗಿಯೂ ನಾವು ನಮ್ಮ ಬುದ್ದಿಯನ್ನು ಉಪಯೋಗಿಸಿ ಮಾತನಾಡುತ್ತೇವೆ. ಚೆಂಡು ರಿವರ್ಸ್​ ಸ್ವಿಂಗ್​ ಆಗುತ್ತಿದ್ದರ ಬಗ್ಗೆ ಅವರೇ ಹೇಳಿದ್ದಾರೆ. ಅದನ್ನು ಉಲ್ಲೇಖಿಸಿ ನಾವು ಮಾತನಾಡಿದ್ದೇವೆ. ರಿವರ್ಸ್​ ಸ್ವಿಂಗ್​ ಬಗ್ಗೆ ನಮಗೆ ಕಲಿಸುವ ಅಗತ್ಯವಿಲ್ಲ. ನಮಗೆ ಇದರ ಬಗ್ಗೆ ತಿಳಿದಿದ್ದು, ಹೊಸದಾಗಿ ಕಲಿಸುವ ಅವಶ್ಯಕತೆಯಿಲ್ಲ.

    ಚೆಂಡು ರಿವರ್ಸ್​ ಸ್ವಿಂಗ್​ ಆಗುತ್ತಿದ್ದುದ್ದರ ಬಗ್ಗೆ ನಾನು ಮಾತನಾಡಿದ್ದು, ಬಾಲ್​ ಟ್ಯಾಂಪರಿಂಗ್​ ಆಗಿದೆ ಎಂದು ಹೇಳಿಲ್ಲ. ಅಂಪೈರ್​ಗಳಿಗೆ ಒಮ್ಮೆ ಪರಿಶೀಲಿಸುವಂತೆ ಹೇಳಿದೆ. ನಾನೂ ಈಗಲೂ ಹೇಳುತ್ತೇನೆ. ಅಂದಿನ ಪಂದ್ಯದಲ್ಲಿ ಅಂಪೈರ್​ಗಳಾಗಿ ಇದ್ದವರು ಈಗಲೂ ಒಮ್ಮೆ ಪರಿಶೀಲಿಸಿ ಆಗ ನಿಮಗೆ ತಿಳಿಯುತ್ತದೆ ಎಂದು ಇಂಜಮಾಮ್​ ಉಲ್​ ಹಕ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts