More

    ಶ್ರೀನಿವಾಸ ವಿಶ್ವವಿದ್ಯಾಲಯಲ್ಲಿ ಸಂಶೋಧನಾ ಸಮ್ಮೇಳನ


    ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ ವತಿಯಿಂದ ಹೋಟೆಲ್ ಶ್ರೀನಿವಾಸದ ಸಭಾಂಗಣದಲ್ಲಿ ಸಂಶೋಧನಾ ಸಮ್ಮೇಳನ ನಡೆಯಿತು.
    ಸಮ್ಮೇಳನ ಉದ್ಘಾಟಿಸಿದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ ಎ.ರಾಘವೇಂದ್ರ ರಾವ್ ಮಾತನಾಡಿ
    ‘ಪ್ರತಿಯೊಂದು ಕ್ಷೇತ್ರದಲ್ಲೂ ಸಂಶೋಧನೆ ಸಾಧ್ಯ. ಸಂಶೋಧನೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದ್ದು ವಿದ್ಯಾರ್ಥಿಗಳು
    ಸಂಶೋಧನೆಗೆ ಆಸಕ್ತಿ ತೋರಲು ಮುಂದಾಗಬೇಕು ಎಂದರು.
    ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ ‘ ವೈಜ್ಞಾನಿಕ ಸಂಶೋಧನೆಗೆ ಭಾರತೀಯ ಕೊಡುಗೆಗಳು ಗಣನೀಯವಾಗಿದೆ ಎಂದರು.
    ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ , ಮೌಲ್ಯಮಾಪನ ಕುಲಸಚಿವ ಡಾ. ಶ್ರೀನಿವಾಸ
    ಮಯ್ಯ, ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ ನಿರ್ದೇಶಕ ಡಾ. ಪ್ರವೀಣ್ ಬಿ ಎಂ , ಅಭಿವೃದ್ಧಿ ಕುಲಸಚಿವ ಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು. ಕುಲಸಚಿವ ಡಾ. ಅನಿಲ್ ಕುಮಾರ್ ಸ್ವಾಗತಿಸಿ, ಸಂಶೋಧನಾ ಸಂಯೋಜಕಿ ಡಾ.ಶೈಲಶ್ರೀ ವಂದಿಸಿದರು. ಪ್ರೊ. ಶ್ವೇತಾ ಪೈ ಮತ್ತು ಪ್ರೊ.ರೋಹನ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts