More

    ರಾವಂದೂರಿನಲ್ಲಿ ಶ್ರೀ ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವ

    ರಾವಂದೂರು: ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ದೇವತೆ ಶ್ರೀ ಆದಿಶಕ್ತಿ ದೊಡ್ಡಮ್ಮ ತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ಶುಕ್ರವಾರ ಜರುಗಿದವು.

    ಬೆಳಗ್ಗೆ ಶ್ರೀ ದೊಡ್ಡಮ್ಮ ತಾಯಿ ಉತ್ಸವಮೂರ್ತಿಯನ್ನು ಎಸ್.ಕೊಪ್ಪಲು ಗ್ರಾಮದ ಮುದ್ದಪ್ಪನವರ ತೋಟಕ್ಕೆ ಉತ್ಸವಮೂರ್ತಿಯನ್ನು ಕೊಂಡೊಯ್ದು ತೋಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಯೊಂದಿಗೆ ಉತ್ಸವಮೂರ್ತಿಯನ್ನು ರಥದ ಮೇಲೆ ಕುಳ್ಳಿರಿಸಿ ಹಣ್ಣು ಜವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಲಾಯಿತು.

    ಗಜಾನನ ಬಳಗದ ವತಿಯಿಂದ ದೇವಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಶ್ರೀ ದೊಡ್ಡಮ್ಮತಾಯಿ ಗೆಳೆಯರ ಬಳಗದ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ರಸ್ತೆಯುದ್ದಕ್ಕೂ ಪಾನಕ,ಮಜ್ಜಿಗೆ ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಶೆಟ್ಟರು, ಪಾಲ್‌ಪತ್ತೆಗಾರರು, ಪತ್ತೆಗಾರರು, ಏಳು ಕೋಮಿನ ಮುಖಂಡರು, ಕಂದಾಯ ಇಲಾಖೆಯ ನೌಕರರು, ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

    ರೈತರ ಮುಖದಲ್ಲಿ ಹರ್ಷ: ಶ್ರೀ ದೊಡ್ಡಮ್ಮತಾಯಿ ರಥೋತ್ಸವ ಮುಗಿಯುತ್ತಿದ್ದಂತೆ ಬಿಸಿಲಿನ ಬೇಗೆಯನ್ನು ತಾಳಲಾಗದ ಮಳೆರಾಯನು ತಂಪನ್ನೆರೆಯುವ ಮೂಲಕ ಬಂತಂತಹ ಭಕ್ತರ ಹಾಗೂ ರೈತರ ಮುಖದಲ್ಲಿ ಹರ್ಷ ತಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts