More

    ಫೈನಲ್​ನಲ್ಲಿ ಕೊಹ್ಲಿ ಬಿಟ್ಟು, ಈ ಇಬ್ಬರನ್ನು ಓಪನಿಂಗ್ ಆಡಿಸಿ; ಟೀಮ್ ಇಂಡಿಯಾಗೆ ಶೋಯಿಬ್ ಅಖ್ತರ್​ ಸಲಹೆ

    ನವದೆಹಲಿ: ನಿನ್ನೆ (ಜೂ.27) ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ 68 ರನ್​ಗಳ ಅಂತರದಲ್ಲಿ ಇಂಗ್ಲೆಂಡ್​ ತಂಡವನ್ನು ಮಣಿಸಿ, ಫೈನಲ್​ಗೆ ಪ್ರವೇಶಿಸಿತು. ಸತತ ಗೆಲುವಿನ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚುತ್ತಿರುವ ರೋಹಿತ್ ಪಡೆ, ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.

    ಇದನ್ನೂ ಓದಿ: ಕಳೆದುಹೋದ ಗೊಂಬೆಗಾಗಿ ಕಣ್ಣೀರಿಟ್ಟ ವ್ಯಕ್ತಿ! ಹುಡುಕಿಕೊಟ್ಟವರಿಗೆ ಭಾರೀ ಮೊತ್ತದ ಬಹುಮಾನ

    ಫೈನಲ್ ಪಂದ್ಯಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಕ್ಷಿಯಾಗಲಿದ್ದು, ಮ್ಯಾಚ್ ಮತ್ತಷ್ಟು ರೋಚಕವಾಗಿರುವುದು ಖಚಿತ ಎಂದೇ ಹೇಳಬಹುದು. ಫೈನಲ್​ಗೆ ಪ್ರವೇಶಿಸಿರುವ ಟೀಮ್ ಇಂಡಿಯಾ ಬಗ್ಗೆ ಮಾತನಾಡಿದ ಹೆಡ್​ ಕೋಚ್ ರಾಹುಲ್ ದ್ರಾವಿಡ್​, “ರೋಹಿತ್​ ಶರ್ಮ ನಾಯಕತ್ವ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿರುವುದು ಸಂತಸ ತಂದಿದೆ. ಟ್ರೋಫಿ ಪಡೆಯುವ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರಿಂದ ದೊಡ್ಡದೇನೋ ಬರಲಿದೆ ನಿರೀಕ್ಷಿಸಿ” ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಸತತ ಕಳಪೆ ಪ್ರದರ್ಶನ ತೋರಿರುವ ವಿರಾಟ್ ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕ್​ನ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್​, “ಕಳೆದ ಎರಡು ವಿಶ್ವಕಪ್‌ಗಳಲ್ಲಿ ಭಾರತ ಅರ್ಹ ಚಾಂಪಿಯನ್ ಆಗಿದೆ. ಈ ಬಾರಿಯ ಟ್ರೋಫಿ ಕೂಡ ಅವರದ್ದೇ ಆಗಲಿ ಎಂದು ಆಶಿಸುತ್ತೇನೆ. ದಕ್ಷಿಣ ಆಫ್ರಿಕಾ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡಬೇಕು. ಕಾರಣ ಅವರು ತಮ್ಮ ಮೊದಲ ಫೈನಲ್ ಆಡುತ್ತಿದ್ದಾರೆ. ಟೀಮ್ ಇಂಡಿಯಾದ ಸ್ಪಿನ್ ದಾಳಿಯ ವಿರುದ್ಧ ರನ್ ಗಳಿಸಲು ಅತ್ಯಂತ ಕಷ್ಟಕರ. ಇದು ಸೌತ್ ಆಫ್ರಿಕಾಗೆ ಸವಾಲಿನ ಕೆಲಸ. ಇದೆಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಭಾರತ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಲಿದೆ” ಎಂದು ಹೇಳಿದರು.

    ಇದನ್ನೂ ಓದಿ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಳ್ಳಬೇಕು:ಶಂಭುನಾಥ ಸ್ವಾಮೀಜಿ

    “ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ನಲ್ಲಿರುವ ಕಾರಣ ಪ್ರಸ್ತುತ ಫೈನಲ್ ಪಂದ್ಯದಲ್ಲಿ ಭಾರತ ಅವರನ್ನು ರೋಹಿತ್ ಜತೆ ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಸುವುದು ಸರಿಯಲ್ಲ. ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಓಪನಿಂಗ್ ಬ್ಯಾಟ್ಸ್​ಮನ್ ಆಗಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿ. ಕೊಹ್ಲಿಯನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುವುದು ಉತ್ತಮ. ಇದರಿಂದ ತಂಡಕ್ಕೆ ಮತ್ತಷ್ಟು ಬಲ ಸಿಗಲಿದೆ. ಆಗ ‘ರನ್ ಮಷಿನ್’ ಅಬ್ಬರದ ಬ್ಯಾಟಿಂಗ್​ ನೋಡಲು ಅವಕಾಶ ಸಿಗಲಿದೆ” ಎಂದು ಟೀಮ್ ಇಂಡಿಯಾ ಮ್ಯಾನೆಜ್​ಮೆಂಟ್​ಗೆ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

    ರೋಹಿತ್ ಮತ್ತು ವಿರಾಟ್​ಗೆ ಇದೇ ಫೈನಲ್​ ಟಿ20 ವಿಶ್ವಕಪ್​! ಹೊಸ ಅಧ್ಯಾಯಕ್ಕೆ ಸಜ್ಜಾದ ಬಿಸಿಸಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts