More

    ಪಾನಿಪುರಿ ಬಳಿಕ ರಾಜ್ಯದಲ್ಲಿ ಶವರ್ಮಾ ಬ್ಯಾನ್​! ಸರ್ಕಾರದ ನಿಲುವೇನು ಗೊತ್ತಾ?

    ಬೆಂಗಳೂರು: ಗೋಬಿ ಮಂಚೂರಿ, ಕಾಟನ್​ ಕ್ಯಾಂಡಿ, ಕಬಾಬ್​, ಪಾನಿಪುರಿಯಲ್ಲಿ ಹಾನಿಕಾರಕ ಅಂಶಗಳು ಕಂಡ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಬಳಸುತ್ತಿದ್ದ ಕೃತಕ ಬಣ್ಣವನ್ನು ಸರ್ಕಾರ ಬ್ಯಾನ್​ ಮಾಡಿದ ಬೆನ್ನಲ್ಲೇ ಇದೀಗ ಈ ಪಟ್ಟಿಗೆ ಚಿಕನ್ ಶವರ್ಮಾ ಬ್ಯಾನ್​ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ರಾಜ್ಯಾದ್ಯಂತ ಸಂಗ್ರಹಿಸಿರುವ ಹಲವು ಶವರ್ಮಾ ಮಾದರಿಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ಗಳು ಪತ್ತೆಯಾಗಿವೆ. ಹೀಗಾಗಿ ಶವರ್ಮಾ ಬ್ಯಾನ್​ಗೆ ಆಹಾರ & ಗುಣಮಟ್ಟ ಇಲಾಖೆ (FASSAI) ಚಿಂತನೆ ನಡೆಸಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಶವರ್ಮಾ ಸೇವಿಸಿ ಅಸ್ವಸ್ಥಗೊಂಡು ಮೃತಪಟ್ಟ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಇದರ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಒಟ್ಟು 17 ಕಡೆಗಳಲ್ಲಿ ಶವರ್ಮಾ ಮಾದರಿ ಸಂಗ್ರಹಿಸಿದ್ದು, 17ರ ಪೈಕಿ 8ರಲ್ಲಿ ಬ್ಯಾಕ್ಟೀರಿಯಾ ಮತ್ತು ಈಸ್ಟ್‌ಗಳು ಪತ್ತೆಯಾಗಿವೆ. ಹೀಗಾಗಿ ಶವರ್ಮಾವನ್ನು ಅಸುರಕ್ಷಿತ ಎಂದು ಧೃಡಪಡಿಸಲಾಗಿದೆ.

    ಇದನ್ನೂ ಓದಿ: ಬಾಕ್ಸ್​ಆಫೀಸ್​ನಲ್ಲಿ ಕಲ್ಕಿ ಅಬ್ಬರ; ಮೂರನೇ ದಿನ ಗಳಿಸಿದ್ದೆಷ್ಟು?

    ಆಹಾರ ತಯಾರಿಸುವ ಸಂದರ್ಭದಲ್ಲಿನ ನೈರ್ಮಲ್ಯದ ಕೊರತೆ, ದೀರ್ಘಕಾಲದಿಂದ ಸಂಗ್ರಹಿಸಿರುವುದು ಮತ್ತು ವಿತರಣೆಯ ಸಂದರ್ಭದಲ್ಲಿನ ನೈರ್ಮಲ್ಯ ಕೊರತೆಯಿಂದ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ಗಳು ಕಂಡು ಬರುತ್ತವೆ. ಹೀಗಾಗಿ ಎಲ್ಲಾ ಶವರ್ಮಾ ಆಹಾರ ತಯಾರಕರು ಆಹಾರ ಸುರಕ್ಷತಾ ನಿಯಮ ಪಾಲಿಸಬೇಕು. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಶವರ್ಮಾ ಮಾರಾಟಗಾರರಿಗೆ FSSAI ನೋಂದಣಿ ಕಡ್ಡಾಯಗೊಳಿಸಲಾಗಿದೆ. ನೋಂದಣಿ ಪತ್ರ ಪ್ರದರ್ಶನ ಮಾಡದಿದ್ರೆ ಮಾರಾಟಕ್ಕೆ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಗೋಬಿ ಮಂಚೂರಿ, ಕಾಟನ್​ ಕ್ಯಾಂಡಿ, ಕಬಾಬ್​ ಹಾಗೂ ಪಾನಿಪುರಿಯಲ್ಲಿ ಹಾನಿಕಾರಕ ಅಂಶಗಳು ಬಳಸುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೆಲವು ಪದಾರ್ಥಗಳನ್ನು ಬಳಸದಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಶವರ್ಮಾದಲ್ಲೂ ಹಾನಿಕಾರಕ ಅಂಶ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts