More

    ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಮುಂಬೈ: ರತ್ನವೀರ್ ಪ್ರಿಸಿಷನ್​ ಇಂಜಿನಿಯರಿಂಗ್ (Ratnaveer Precision Engineering) ಷೇರುಗಳ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ರೂ. 166.98 ತಲುಪಿದವು. ನಂತರ ಅಲ್ಪ ಕುಸಿತ ಕಂಡು ಅಂತಿಮವಾಗಿ ರೂ. 160.78ಕ್ಕೆ ಮುಟ್ಟಿದವು.

    ಕಳೆದ 8 ವಹಿವಾಟು ದಿನಗಳಲ್ಲಿ ಈ ಷೇರು ಬೆಲೆ 32% ರಷ್ಟು ಹೆಚ್ಚಾಗಿದೆ. ಪ್ರಸ್ತುತ ತಿಂಗಳಲ್ಲಿ ಇದುವರೆಗೆ 39% ರಷ್ಟು ಏರಿಕೆಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಆರು ತಿಂಗಳಲ್ಲಿ 32%; ಈ ವರ್ಷದ ಆರಂಭದಿಂದ ಇದುವರೆಗೆ 40% ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ 22.85% ಮತ್ತು ಐದು ದಿನಗಳಲ್ಲಿ 36.64% ಹೆಚ್ಚಾಗಿದೆ. ಇದರ 52 ವಾರಗಳ ಗರಿಷ್ಠ ಬೆಲೆ ರೂ 166.95 ಮತ್ತು ಕನಿಷ್ಠ ಬೆಲೆ ರೂ 107 ಆಗಿದೆ.

    ದೇಶೀಯ ಬ್ರೋಕರೇಜ್ ಸಂಸ್ಥೆ ಐಸಿಐಸಿಐ ಡೈರೆಕ್ಟ್ ರಿಸರ್ಚ್ ಈ ಕಂಪನಿಯ ಪ್ರತಿ ಷೇರಿಗೆ ರೂ 200 ಗುರಿ ಬೆಲೆಯೊಂದಿಗೆ ‘ಖರೀದಿ’ ರೇಟಿಂಗ್‌ ನೀಡಿದೆ. ಇದು ಗುರುವಾರದ ಮುಕ್ತಾಯದ ಬೆಲೆಗಿಂತ ಶೇ. 25% ರಷ್ಟು ಹೆಚ್ಚು ಇದೆ.

    ಗುಜರಾತ್​ ಮೂಲದ ಸ್ಟೇನ್‌ಲೆಸ್ ಸ್ಟೀಲ್ ಉತ್ಪನ್ನಗಳನ್ನು ತಯಾರಿಸುವ ಕಂಪನಿ ಇದಾಗಿದೆ.
    ಸ್ಟೇನ್​ಲೆಸ್​ ಸ್ಟಿಲ್​ ಡ್ರಾ ಶೀಟ್‌ಗಳು, ವಾಷರ್‌ಗಳು, ಸೌರ ಛಾವಣಿಯ ಕೊಕ್ಕೆಗಳು, ಪೈಪ್‌ಗಳು ಮತ್ತು ಟ್ಯೂಬ್‌ ಮುಂತಾದ ಉತ್ಪನ್ನಗಳು ಇದರಲ್ಲಿ ಸೇರಿವೆ. ಇವುಗಳನ್ನು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

    ಈ ಕಂಪನಿಯು ಲಾಭ ಪಡೆಯಲು ಕಂಪನಿಯು ಉತ್ತಮ ಸ್ಥಾನದಲ್ಲಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
    ಆಟೋಮೊಬೈಲ್, ರಾಸಾಯನಿಕ, ತೈಲ ಮತ್ತು ಅನಿಲ, ರಸಗೊಬ್ಬರ, ಫಾರ್ಮಾ, ಪೆಟ್ರೋಕೆಮಿಕಲ್, ವಿದ್ಯುತ್, ಸಮುದ್ರದ ನೀರಿನ ಉಪಕರಣಗಳು ಮತ್ತು ಇತರ ಎಂಜಿನಿಯರಿಂಗ್ ಅಪ್ಲಿಕೇಶನ್‌ಗಳಂತಹ ವಲಯಗಳನ್ನು ಒಳಗೊಂಡಂತೆ ಭಾರೀ ಕೈಗಾರಿಕಾ ಬಂಡವಾಳ ವೆಚ್ಚದಿಂದ ಈ ಕಂಪನಿಗೆ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ತ್ವರಿತ ನಗರೀಕರಣವು ಮೂಲಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ನಿರ್ಮಾಣದ ವೇಗವನ್ನು ಹೆಚ್ಚಿಸಿದೆ. ಇದರಿಂದಲೂ ಕಂಪನಿಗೆ ಬೇಡಿಕೆ ಮತ್ತಷ್ಟು ಹೆಚ್ಚಬಹುದು ಎಂದು ಬ್ರೋಕರೇಜ್ ಅಂದಾಜಿಸಿದೆ.

    ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

    ಷೇರುಪೇಟೆಯಲ್ಲಿ ಐತಿಹಾಸಿಕ ದಾಖಲೆ: 79,000 ಗಡಿ ದಾಟಿದ ಬಿಎಸ್​ಇ ಸೆನ್ಸೆಕ್ಸ್​; 24,000 ಮೀರಿದ ನಿಫ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts