More

    ಶಂಕರನಾರಾಯಣ ಸಾಮಗ ಯುವಕಲಾವಿದರಿಗೆ ಆದರ್ಶ

    ಉಡುಪಿ: ಶಂಕರನಾರಾಯಣ ಸಾಮಗರು ಮಠದೊಂದಗಿಗೆ ನಿಕಟಸಂಪರ್ಕ ಹೊಂದಿದ್ದು, ಅವರು ಕಲಾವಿದ, ವಿದ್ವಾಂಸ ಮಾತ್ರವಲ್ಲದೆ ಸಂಸ್ಕಾರದ ಪ್ರತಿಕವಾಗಿದ್ದರು. ಹಿರಿಯ ವ್ಯಕ್ತಿಯ ಸರಳತೆ ಯುವಕಲಾವಿದರಿಗೆ ಆದರ್ಶಪ್ರಾಯವಾಗಿದೆ ಎಂದು ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಹೇಳಿದರು.


    ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ಶನಿವಾರ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನ ಪರಿಚಯಿಸುವ ‘ದೊಡ್ಡ ಸಾಮಗರ ನಾಲ್ಮೊಗ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಅಶೀರ್ವಚನ ನೀಡಿದರು.


    ಹಿರಿಯ ಕಲಾವಿದರ ಬಗೆಗಿನ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಲಭಿಸಬೇಕು. ಇದರಿಂದ ಯುವ ಪೀಳಿಗೆಗೆ ಸಾಧಕರ ಪರಿಚಯವಾಗಲು ಸಾಧ್ಯವಿದೆ. ಯಕ್ಷಗಾನದ ಪರಂಪರೆಗೆ ಸೇವೆ ಸಲ್ಲಿಸಿ ಮಹನೀಯರ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.


    ಮಾಹೆಯ ಸಹಕುಲಾಧಿಪತಿ ಡಾ. ಎಚ್​.ಎಸ್​.ಬಲ್ಲಾಳ್​ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಶುಭಾಶಂಸನೆ ಮಾಡಿದರು. ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಪುಸ್ತಕ ಪರಿಚಯಿಸಿದರು. ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಮಾಹೆ ಸಹಕುಲಾಧಿಪತಿ ಡಾ. ನಾರಾಯಣ ಸಭಾಹಿತ್​, ಮಣಿಪಾಲ ಯುನಿವರ್ಸಲ್​ ಪ್ರೆಸ್​ ನ ಸಂಪಾದಕಿ ಪ್ರೊ. ನೀತಾ ಇನಾಂದಾರ್​, ದ.ಕ.ಕಸಾಪ ಅಧ್ಯಕ್ಷ ಪ್ರದಿಪ ಕುಮಾರ್​ ಕಲ್ಕೂರ್​, ಹಿರಿಯ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾವ್​, ಸಾಹಿತಿ ಭಾಮ ಸಾಮಗ, ಕೃತಿಕಾರ ದಿನೇಶ್​ ಉಪ್ಪೂರ ಉಪಸ್ಥಿತರಿದ್ದರು. ಪ್ರೊಫೆಸರ್​ ಎಂ.ಎಲ್​.ಸಾಮಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts