More

    ಭಾರತ ಮೋಸದಾಟವಾಡಿ​ ಗೆದ್ದಿದೆ; ಸ್ಟಾರ್​ ವೇಗಿ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

    ನವದೆಹಲಿ: ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್​ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್​ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿ ತೀವ್ರವಾಗಿ ಟೀಕೆಗೆ ಗುರಿಯಾಗಿತ್ತು. ಇತ್ತ ಪಾಕ್​ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್​ ಅಜಂ ಮಾತ್ರವಲ್ಲದೇ ತಂಡದಲ್ಲಿರುವ ಬೇರೆ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದು, ತಲೆದಂಡ ಅಥವಾ ದೇಶದ್ರೋಹ ಪ್ರಕರಣ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ತಮ್ಮ ತಂಡದ ಕಳಪೆ ಪ್ರದರ್ಶನ ಕುರಿತು ಮಾತನಾಡದ ಪಾಕ್​ ಮಾಜಿ ಆಟಗಾರರು ಭಾರತದ ವಿರುದ್ಧ ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದು, ಹಲವರು ಕಿಡಿಕಾರಿದ್ದಾರೆ.

    09 ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಾಲಿ ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಸೆಮಿಫೈನಲ್​ ಪ್ರವೇಶಿಸಿದ ಬೆನ್ನಲ್ಲೇ ಟೀಮ್​ ಇಂಡಿಯಾ ವಿರುದ್ಧ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್​ ಬಾಲ್​ ಟ್ಯಾಂಪರಿಂಗ್​ ಆರೋಪ ಮಾಡಿದ್ದು, ಟೀಮ್​ ಇಂಡಿಯಾದ ವೇಗಿ ಈ ಅಪರಾಧ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಸೆಮಿಫೈನಲ್​ ಪ್ರವೇಶಿಸುತ್ತಿದ್ದಂತೆ ಅಫ್ಘಾನಿಸ್ತಾನ ವಿರುದ್ಧ ಕೇಳಿ ಬಂತು ಮೋಸದಾಟದ ಆರೋಪ; ವಿಡಿಯೋ ವೈರಲ್​

    ಈ ಕುರಿತು ಮಾತನಾಡಿರುವ ಇಂಜಮಾಮ್​ ಉಲ್​ ಹಕ್​, ಜೂನ್​ 25ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್​ 08 ಪಂದ್ಯದಲ್ಲಿ ಟೀಮ್​ ಇಂಡಿಯಾ 24 ರನ್​ಗಳ ಭರ್ಜರಿ ಜಯ ಗಳಿಸಿತ್ತು. ಟೀಮ್​ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಅರ್ಷದೀಪ್​ ಸಿಂಗ್​ ಬಾಲ್ ಟ್ಯಾಂಪರಿಂಗ್​ ಮಾಡುವ ಮೂಲಕ ಮೋಸದಾಟವಾಡಿದ್ದಾರೆ. 15ನೇ ಓವರ್​ನಲ್ಲಿ ಅರ್ಷದೀಪ್​ ಬೌಲಿಂಗ್​ ಮಾಡಿದಾಗ ಚೆಂಡು ರಿವರ್ಸ್​ ಸ್ವಿಂಗ್​ ಆಗಲು ಶುರು ಮಾಡಿತು. ಇದು ಅಂಪೈರ್​ಗಳ ಗಮನಕ್ಕೆ ಬಂದಿಲ್ಲ.

    ಅರ್ಷದೀಪ್​ ಸಿಂಗ್​ 15ನೇ ಓವರ್​ ಎಸೆದಾಗ ಚೆಂಡು ರಿವರ್ಸ್​ ಸ್ವಿಂಗ್​ ಆಗುತ್ತಿದೆ ಎಂದರೆ ನೀವು ಗಮನಿಸಬೇಕಾದ ಅಂಶ ತುಂಬಾ ಇದೆ. 12-13ನೇ ಓವರ್​ನಲ್ಲಿ ಸ್ವಿಂಗ್​ ಆಗದ ಬಾಲ್​ ಅರ್ಷದೀಪ್​ ಎಸೆತದಲ್ಲಿ ಹೇಗೆ ಸ್ವಿಂಗ್​ ಆಗಲು ಸಾಧ್ಯ. ಒಂದು ವೇಳೆ ಪಾಕಿಸ್ತಾನದ ಆಟಗಾರರು ಈ ಕೆಲಸ ಮಾಡಿದ್ದರೆ ಇಷ್ಟೊತ್ತಿಗಾಗಲೇ ವಿಶ್ವ ಕ್ರಿಕೆಟ್​ನಲ್ಲಿ ಭಾರೀ ಕೋಲಾಹಲ ಉಂಟಾಗಿರುತ್ತಿತ್ತು. ಅರ್ಷದೀಪ್​ ರಿವರ್ಸ್​ ಸ್ವಿಂಗ್​ ಮಾಡಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಬಾಲ್​ ಟ್ಯಾಂಪರಿಂಗ್​ ಮಾಡಿದರೆ ಈ ರೀತಿ ಮಾಡಲು ಸಾಧ್ಯ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್​ ಭಾರತದ ವಿರುದ್ಧ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts