More

    ದೊಡ್ಡ ಗಡಿಯಾರ ದುರಸ್ತಿ ನೆಪದಲ್ಲಿ ಹಗರಣ

    ಮೈಸೂರು: ದೊಡ್ಡ ಗಡಿಯಾರದ ದುರಸ್ತಿ ನೆಪದಲ್ಲಿ ಹಗರಣ ನಡೆಯುತ್ತಿದೆ ಎಂದು ಆರೋಪಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
    ನಗರದ ದೊಡ್ಡ ಗಡಿಯಾರದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಪಾರಂಪರಿಕ ನಗರ. ಅದರ ಹೆಗ್ಗುರುತುಗಳಲ್ಲಿ ಒಂದಾದ ದೊಡ್ಡ ಗಡಿಯಾರ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ನೆಪದಲ್ಲಿ ಹಿಂದೆ ನಿರ್ಮಾಣಕ್ಕೆ ಬಳಸಿದ್ದ ಸುಣ್ಣ, ಮರಳು ಹಾಗೂ ಇತರ ಪದಾರ್ಥಗಳನ್ನು ಬಳಸದೆ ಎಂ ಸ್ಯಾಂಡ್, ಸಿಮೆಂಟ್ ಬಳಸಲಾಗುತ್ತಿದೆ. ಅರಮನೆಯ ಸುತ್ತಮುತ್ತ, ಕರಿಕಲ್ಲು ತೊಟ್ಟಿ ದ್ವಾರದ ದುರಸ್ತಿ ಕಾರ್ಯಕ್ಕೆ ನದಿ ಮರಳನ್ನೇ ಬಳಸಿದ್ದಾರೆ. ಆಯುರ್ವೇದ ಕಾಲೇಜು ಕಟ್ಟಡ, ಕಾಡಾ ಕಟ್ಟಡ, ಸರ್ಕಾರಿ ಅತಿಥಿ ಗೃಹ, ವೆಲ್ಲಿಂಗ್ಟನ್ ಲಾಡ್ಜ್ ದುರಸ್ತಿಗೆ ಹಿಂದೆ ಬಳಸಿದ್ದ ವಸ್ತುಗಳನ್ನೇ ಬಳಸಿದ್ದಾರೆ. ಆದರೆ, ದೊಡ್ಡ ಗಡಿಯಾರಕ್ಕೆ ನದಿ ಮರಳು, ಸುಣ್ಣದ ಗಾರೆ ಬದಲು ಎಂ ಸ್ಯಾಂಡ್, ಸಿಮೆಂಟ್ ಉಪಯೋಗಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಅದನ್ನು ನಿಲ್ಲಿಸಿ ಗಡಿಯಾರ ನಿರ್ಮಾಣಕ್ಕೆ ಹಿಂದೆ ಬಳಸಿದ್ದ ವಸ್ತುಗಳನ್ನೇ ಬಳಸಬೇಕು. ಯಾವುದೇ ಹಗರಣ ಮಾಡದೆ ದೊಡ್ಡ ಗಡಿಯಾರ ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts