More

    VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗ

    ಕೊಡಗು: ಈಗ ಎಲ್ಲೆಡೆ ಅಂತರ್ಜಾತಿ, ಅಂತರ್​ಧರ್ಮೀಯ ವಿವಾಹ ಕಾಮನ್. ಅಲ್ಲೊಂದು ಇಲ್ಲೊಂದು ಸಲಿಂಗಿಗಳ ಮದುವೆ ನಡೆಯುತ್ತಿರುವುದನ್ನೂ ಕಂಡಿದ್ದೇವೆ. ಇಂತಹದ್ದೇ ಮತ್ತೊಂದು ಸಲಿಂಗ ಜೋಡಿ ಅದ್ದೂರಿಯಾಗಿ ಅದೂ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಮದುವೆ ಕೊಡವ ಜನಾಂಗವನ್ನು ಕೆರಳಿಸಿದ್ದು, ಕೊಡವ ಸಮಾಜದಿಂದಲೇ ಮದುಮಗನನ್ನು ಹೊರಗಿಡಲು ಸಜ್ಜಾಗಿದೆ.

    ಇಂತಹ ಕಠಿಣ ನಿರ್ಧಾರದತ್ತ ಕೊಡವರು ಚಿಂತಿಸಲು ಪ್ರಮುಖ ಕಾರಣ ಇದೆ. ಸಲಿಂಗ ಮದುಮಕ್ಕಳು ಅಮೆಕಾದವರೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಅವರಿಬ್ಬರೂ ಭಾರತ ಮೂಲದವರು. ಅಷ್ಟೇ ಅಲ್ಲ ಅದರೊಲ್ಲೊಬ್ಬ ಕನ್ನಡಿಗ. ಅವನೇ ಶರತ್ ಪೊನ್ನಪ್ಪ. ಮೂಲತಃ ಕೊಡಗಿನ ಕೊಡವ ಸಮುದಾಯದ ಈತ ಮನೆಯವರನ್ನೆಲ್ಲ ಬಿಟ್ಟು ವಿದೇಶದಲ್ಲಿ ನೆಲೆಸಿ ದಶಕ ಕಳೆದಿದೆ. ಅಲ್ಲಿ ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್ ಎಂಬಾತನ ಪರಿಚಯವಾಗಿದ್ದು, ಇಬ್ಬರಿಗೂ ಲವ್ ಆಗಿದೆ. ಪ್ರೀತಿ ಬೆಳೆದು ಕೊನೆಗೆ ಸೆ.26ರಂದು ಮದುವೆಯನ್ನೂ ಮಾಡಿಕೊಂಡಿದ್ದಾರೆ. ಅದೂ ಕೊಡವ ಸಂಪ್ರದಾಯದ ಶೈಲಿಯಲ್ಲಿ! ಸಲಿಂಗ ಮದುವೆ ಸಮಾರಂಭದಲ್ಲಿ ಮದುಮಕ್ಕಳ ಸ್ನೇಹಿತರು ಭಾಗಿಯಾಗಿ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ವಿಡಿಯೋ, ಫೋಟೋ ವೈರಲ್​ ಆಗಿದೆ.

    VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗಕೊಡವರಂತೆ ತಲೆಗೆ ಪೇಟ ಧರಿಸಿದ್ದ ಸಲಿಂಗ ಮದುಮಕ್ಕಳು, ಕೊಡವರ ಸಾಂಪ್ರದಾಯಿಕ ಉಡುಗೆಯನ್ನು ಅರೆಬರೆಯಾಗಿ ತೊಟ್ಟಿದ್ದರು. ಇದು ಕೊಡವರ ಅಸಮಾಧಾನಕ್ಕೆ ಪ್ರಮುಖ ಕಾರಣ. ಇದಿರಿಂದ ಕೊಡವ ಜನಾಂಗಕ್ಕೆ ಅವಮಾನವಾಗಿದ್ದು, ಕೊಡವರ ಇತಿಹಾಸದಲ್ಲಿ ಇಂಥ ಘಟನೆ ನಡೆದಿರಲಿಲ್ಲ. ಈ ಬಗ್ಗೆ ಅಮೆರಿಕಾ ಕೊಡವ ಕೂಟಕ್ಕೆ ಪತ್ರ ಬರೆದು ವಿಚಾರ ಮಾಡಿ ಸ್ಪಷ್ಟನೆ ನೀಡುವಂತೆ ಮಡಿಕೇರಿ ಕೊಡವ ಸಮಾಜ ಕೇಳಿಕೊಂಡಿದೆ. ಇನ್ನು ಕಂಡಕಂಡಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಬಳಕೆ ಮಾಡೋದಕ್ಕೂ ಕೊಡವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಕೊಡವ ಜನಾಂಗದಿಂದಲೇ ಆತನನ್ನು ಹೊರಗಿಡುವಂತೆ ಕೊಡವ ಸಮಾಜದ ಒಕ್ಕೂಟಕ್ಕೆ ಮನವಿ ಮಾಡಲಾಗುವುದು ಎಂದು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಈ ಬಗ್ಗೆ ಮಡಿಕೇರಿ ಕೊಡವ ಸಮಾಜದಿಂದ ತುರ್ತು ಸಭೆಯನ್ನೂ ನಡೆಸಲಾಗಿದೆ.

    ಶರತ್​ ಪೊನ್ನಪ್ಪ ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಉನ್ನತ ಶಿಕ್ಷಣಕ್ಕಾಗಿ 20 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅವರ ತಂದೆ ಜಯಕುಮಾರ್​ ಇಂಜಿನಿಯರ್​ ಆಗಿ, ತಾಯಿ ನಳಿನಿ ವೈದ್ಯರಾಗಿ ದುಬೈನಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಬಳಿಕ ಅಲ್ಲಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.

    VIDEO| ಸಲಿಂಗ ಮದುವೆಯಾದ ಕನ್ನಡಿಗ! ಆತನನ್ನು ಹೊರದಬ್ಬಲು ಸಜ್ಜಾಗಿದೆ ಕೊಡವ ಜನಾಂಗ

    ಸಲಿಂಗ ಮದುವೆಯಾದ ಕನ್ನಡಿಗ!

    ಸಲಿಂಗ ಮದುವೆಯಾದ ಕನ್ನಡಿಗ!ಮಾಹಿತಿಗೆ https://bit.ly/3nriIAn

    Posted by Vijayavani on Wednesday, October 7, 2020

    ಡ್ರಗ್ಸ್​ ಕೇಸ್​: ಸಿಸಿಬಿ ಕಚೇರಿಗೆ ಬಂದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ

    ಸಬ್​ರಿಜಿಸ್ಟ್ರಾರ್​ ಕೆಲಸಕ್ಕಾಗಿ 36 ಲಕ್ಷ ರೂ. ಕೊಟ್ಟವನ ಸ್ಥಿತಿ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts