More

    ಖೂಬಾ ಹ್ಯಾಟ್ರಿಕ್​ ಓಟಕ್ಕೆ ಬಿತ್ತು ಬ್ರೇಕ್; ಗೆಲುವಿನತ್ತ ದಾಪುಗಾಲಿಟ್ಟ ದೇಶದ ಅತ್ಯಂತ ಕಿರಿಯ ಅಭ್ಯರ್ಥಿ ಸಾಗರ್ ಖಂಡ್ರೆ

    ಬೀದರ್​: 18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇಂದು (ಜೂನ್ 04) ಪ್ರಕಟಗೊಂಡಿದ್ದು, ಲೆಕ್ಕಾಚಾರಗಳು ತಲೆಕೆಳಗಾದಂತೆ ಕಾಣುತ್ತಿವೆ. ಬೀದರ್​ನಲ್ಲಿ ಲೋಕಸಭೆ ಕ್ಷೇತ್ರದಲ್ಲಿ ಹ್ಯಾಟ್ರಿಕ್​ ಗೆಲುವು ನಿರೀಕ್ಷಿಸಿದ್ದ ಕೇಂದ್ರ ಸಚಿವ ಭಗವಂತ್​ ಖುಬಾಗೆ ದೇಶದ ಅತ್ಯಂತ ಕಿರಿಯ ಅಭ್ಯರ್ಥಿ ಸಾಗರ್​ ಖಂಡ್ರಗೆ ಬ್ರೇಕ್​ ಹಾಕಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

    ಬೀದರ್​ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ರಥಿಯಾಗಿ ಕಣಕ್ಕಿಳಿದಿದ್ದ ಸಾಗರ್​ ಖಂಡ್ರೆ 4,91,839 ಮತಗಳನ್ನು ಪಡೆದಿದ್ದು, ಬಿಜೆಪಪಿ ಅಭ್ಯರ್ಥಿ ಭಗವಂತ್​ ಖೂಬಾ ವಿರುದ್ಧ 1,06,277 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ. ಈ ಮೂಲಕ ದೇಶದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಾಗರ್​ ಖಂಡ್ರೆ ಗೆಲುವು ದಾಖಲಿಸುವತ್ತ ದಾಪುಗಾಲಿಟ್ಟಿದ್ದಾರೆ.

    ಲೋಕಸಭೆ ಚುನಾವಣೆಗೂ ಮುನ್ನ ಭಗವಂತ್​ ಖೂಬಾ ಅವರಿಗೆ ಟಿಕೆಟ್​ ನೀಡದಂತೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್​ ಅವರಿಗೆ ಟಿಕೆಟ್​ ನೀಡಿತ್ತು. ಆಂತರಿಕ ಭಿನ್ನಾಭಿಪ್ರಾಯದಿಂದ ಖೂಬಾ ಅವರು ಸೋಲು ಕಂಡಿರಬಹುದು ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts