More

    ರೋಹಿತ್ ಅಲ್ಲ,​ ಆಸಿಸ್​ ವಿರುದ್ಧ ಗೆಲ್ಲಲು ಈ ಇಬ್ಬರೇ ಕಾರಣ: ಸಚಿನ್​ ತೆಂಡೂಲ್ಕರ್​ ಶಾಕಿಂಗ್​ ಹೇಳಿಕೆ

    ನವದೆಹಲಿ: ಟೀಮ್​ ಇಂಡಿಯಾ ಸತತ ಗೆಲುವಿನೊಂದಿಗೆ ಟಿ20 ವಿಶ್ವಕಪ್​ ಮೆಗಾಟೂರ್ನಿಯಲ್ಲಿ ಸೆಮಿಫೈನಲ್ ಲಗ್ಗೆಯಿಟ್ಟಿದೆ. ಸೋಮವಾರ (ಜೂನ್​ 24) ಆಸ್ಟ್ರೇಲಿಯಾ ವಿರುದ್ಧ ವೆಸ್ಟ್​ಇಂಡೀಸ್​ನ ಸೇಂಟ್ ಲೂಸಿಯಾದಲ್ಲಿ ನಡೆದ ಸೂಪರ್​ 8ರ ಪಂದ್ಯದಲ್ಲಿ 24 ರನ್‌ಗಳಿಂದ ಭರ್ಜರಿ ಜಯಗಳಿಸಿತು. ನಾಯಕ ರೋಹಿತ್ ಶರ್ಮ 92 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆದರೆ, ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಪ್ರಕಾರ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರೋಹಿತ್ ಶರ್ಮ ಅಲ್ಲವಂತೆ! ಟೀಮ್ ಇಂಡಿಯಾ ಗೆಲ್ಲಲು ಈ ಇಬ್ಬರು ಆಟಗಾರರು ಕಾರಣ ಎಂದು ಸಚಿನ್​ ಟ್ವೀಟ್​ ಮಾಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

    ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 24 ರನ್​ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲ್​ನಲ್ಲಿ ಭಾರತ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಸಿಸ್​ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ನಾಯಕ ರೋಹಿತ್ ಶರ್ಮ ಆಸ್ಟ್ರೇಲಿಯಾ ವಿರುದ್ಧದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ದಿಗ್ಗಜ ಬ್ಯಾಟ್ಸ್‌ಮನ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ಈ ವಿಚಾರದಲ್ಲಿ ಸ್ವಲ್ಪ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಪಂದ್ಯದ ಬಗ್ಗೆ ಎಕ್ಸ್​ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅದ್ಭುತ ಗೆಲುವಿಗಾಗಿ ಟೀಮ್​ ಇಂಡಿಯಾಕ್ಕೆ ಮೊದಲು ಅಭಿನಂದನೆಗಳು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವಿಗೆ ಎರಡು ಕ್ಷಣಗಳು ಕಾರಣವಾಗಿತ್ತು. ಅದರಲ್ಲಿ ಒಂದು ಬೌಂಡರಿ ಗೆರೆ ಬಳಿ ಅಕ್ಷರ್ ಪಟೇಲ್ ಹಿಡಿದ ಅದ್ಭುತ ಕ್ಯಾಚ್. ಮತ್ತೊಂದು ಜಸ್ಪ್ರೀತ್​ ಬುಮ್ರಾ ಅವರು ಟ್ರಾವಿಸ್‌ನ ಹೆಡ್ ಅನ್ನು ಔಟ್​ ಮಾಡಿದ್ದು. ಸೆಮಿಫೈನಲ್​ಗೆ ಕಾಯಲು ಆಗುತ್ತಿಲ್ಲ ಎಂದು ಎಕ್ಸ್​ ಖಾತೆಯಲ್ಲಿ ಸಚಿನ್​ ಬರೆದುಕೊಂಡಿದ್ದಾರೆ. ಆದರೆ, ಈ ಟ್ವೀಟ್‌ನಲ್ಲಿ ಅದ್ಭುತ ಆಟವಾಡಿದ ರೋಹಿತ್ ಹೆಸರನ್ನು ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹ.

    ಟ್ರಾವಿಸ್ ಹೆಡ್-ಮಿಚೆಲ್ ಮಾರ್ಷ್ 48 ಎಸೆತಗಳಲ್ಲಿ 81 ರನ್ ಜೊತೆಯಾಟ ನಡೆಸಿ ಪಂದ್ಯದ ಮೇಲೆ ಒಂದು ಹಂತದಲ್ಲಿ ಹಿಡಿತ ಸಾಧಿಸಿದ್ದರು. ಹೀಗಿರುವಾಗ ಕುಲದೀಪ್ ಯಾದವ್ ಬೌಲಿಂಗ್​ನಲ್ಲಿ ಮಿಚೆಲ್ ಮಾರ್ಷ್​ (37)​ ಬೃಹತ್​ ಹೊಡೆತಕ್ಕೆ ಯತ್ನಿಸಿದರು. ಚೆಂಡು ಸಿಕ್ಸರ್‌ಗೆ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಅಕ್ಷರ್ ಪಟೇಲ್ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದರು. ಇತ್ತ ಅಪಾಯಕಾರಿಯಾಗುತ್ತಿದ್ದ ಟ್ರಾವಿಸ್ ಹೆಡ್​ (76) ಅವರನ್ನು ಬುಮ್ರಾ ಔಟ್​ ಮಾಡಿದರು. ಈ ಎರಡು ಘಟನೆಗಳು ಪಂದ್ಯವನ್ನು ಟೀಮ್​ ಇಂಡಿಯಾದತ್ತ ವಿಜಯಲಕ್ಷ್ಮಿಯನ್ನು ತಿರುಗಿಸಿದವು.

    ಅಂದಹಾಗೆ ಟೀಮ್ ಇಂಡಿಯಾದ ಯಶಸ್ಸಿಗೆ ಬುಮ್ರಾ ಮತ್ತು ಅಕ್ಷರ್ ಪಟೇಲ್ ಕಾರಣ ಎಂಬ ಸಚಿನ್ ಅವರ ಕಾಮೆಂಟ್‌ಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    11ನೇ ವಯಸ್ಸಿನಲ್ಲೇ ಎಮ್ಮೆ ಹಾಲು ಮಾರಾಟ! ಕೋಟಿಗಳ ಸಾಮ್ರಾಜ್ಯ ಕಟ್ಟಿದ ಯುವತಿಯ ಯಶೋಗಾಥೆ ಇದು…

    ಸೆಮಿಸ್​ಗೂ ಮುನ್ನ ಇಂಗ್ಲೆಂಡ್​ ತಂಡಕ್ಕೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ಹಾರ್ದಿಕ್​ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts