More

    ಮಗಳು ತೀರಿಕೊಂಡ್ರೆ ಆಕೆಯ ಪತಿ, ಮಕ್ಕಳಿಗೆ ಆಸ್ತಿ ಹೋಗುತ್ತೇ ವಿನಾ ಬೇರೆಯವರಿಗಲ್ಲ

    ಮಗಳು ತೀರಿಕೊಂಡ್ರೆ ಆಕೆಯ ಪತಿ, ಮಕ್ಕಳಿಗೆ ಆಸ್ತಿ ಹೋಗುತ್ತೇ ವಿನಾ ಬೇರೆಯವರಿಗಲ್ಲಪ್ರಶ್ನೆ: ನಾವು ಹಿಂದೂಗಳು. ನಮ್ಮ ತಂದೆ ತೀರಿಕೊಂಡಿದ್ದಾರೆ. ಅವರಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಇದ್ದಾಳೆ. ಎಲ್ಲಾ ಮಕ್ಕಳಿಗೆ ಮದುವೆ ಅಗಿದೆ . ನಮ್ಮ ತಾಯಿ ಇದ್ದಾರೆ. ಒಬ್ಬ ಮಗ ಒಬ್ಬ ಮಗಳು ತೀರಿಕೊಂಡಿದ್ದಾರೆ. ಮಗಳಿಗೆ 1982ರಲ್ಲೇ ಮದುವೆ ಆಗಿದೆ. ಅವಳಿಗೂ ಭಾಗ ಇದೆಯೇ? ಈಗ ನಮ್ಮ ತಾಯಿ ಅವರ ಇಚ್ಛೆಯಂತೆ ಆಸ್ತಿ ವಿಭಾಗ ಮಾಡಬಹುದೇ?

    ಉತ್ತರ: ಮೃತ ಹಿಂದೂ ಪುರುಷನ ಆಸ್ತಿ ಆತನ ಹೆಂಡತಿ ಮತ್ತು ಎಲ್ಲ ಮಕ್ಕಳಿಗೂ ಸಮಭಾಗ ಆಗುತ್ತದೆ. ನಿಮ್ಮ ತಾಯಿ ತನ್ನ ಆರನೇ ಒಂದು ಭಾಗದ ಆಸ್ತಿಯನ್ನು ಮಾತ್ರ ತನ್ನ ಇಷ್ಟ ಬಮದವರಿಗೆ ಕೊಡಬಹುದು. ಉಳಿದ ಎಲ್ಲ ಮಕ್ಕಳಿಗೂ ತಲಾ ಆರನೇ ಒಂದು ಭಾಗ ಇರುತ್ತದೆ.

    ತೀರಿಕೊಂಡಿರುವ ಮಗಳ ಪಾಲು ಆಕೆಯ ಗಂಡ ಮತ್ತು ಮಕ್ಕಳಿಗೆ ಹೋಗುತ್ತದೆ. ತೀರಿಕೊಂಡಿರುವ ಮಗನ ಪಾಲಿನಲ್ಲಿ ಮತ್ತೆ ಆತನ ಹೆಂಡತಿ ಮತ್ತು ಮಕ್ಕಳಿಗೆ ಮತ್ತು ತಾಯಿಗೂ ಸಹ ಪಾಲು ಬರುತ್ತದೆ. ಯಾವಾಗ ಮದುವೆ ಆದರೂ ಆಸ್ತಿಯ ಹಕ್ಕಿಗೆ ಚ್ಯುತಿ ಬರುವುದಿಲ್ಲ.

    ಕ್ರೀಡಾ ಪ್ರಾಧಿಕಾರದಲ್ಲಿದೆ 28 ಡೆಪ್ಯುಟಿ ಡೈರೆಕ್ಟರ್ ಹುದ್ದೆಗಳು: ಎರಡು ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts