More

    ಆಸಿಸ್​ ವಿರುದ್ಧ ಶತಕದ ಅಂಚಿನಲ್ಲಿ ಔಟ್: ರೋಹಿತ್​ ಆಡಿದ​​​ ಮಾತುಗಳನ್ನು ಕೇಳಿದ್ರೆ ಸೆಲ್ಯೂಟ್​ ಹೊಡಿರೋ ಅಂತೀರಾ!

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿಗೆ ಟೀಮ್​ ಇಂಡಿಯಾ ಸೇಡು ತೀರಿಸಿಕೊಂಡಿದೆ. ನಿನ್ನೆ (ಜೂನ್​ 24) ನಡೆದ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 8​ ಪಂದ್ಯದಲ್ಲಿ ಆಸಿಸ್​ ವಿರುದ್ಧ ಭಾರತ 24 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಸೋತು ಸುಣ್ಣವಾಗಿರುವ ಆಸೀಸ್, ಸೆಮಿಸ್ ಅವಕಾಶಕ್ಕಾಗಿ ಬಾಂಗ್ಲಾದೇಶ-ಅಫ್ಘಾನ್ ಪಂದ್ಯದ ಮೇಲೆ ಅವಲಂಬಿತವಾಗಿದೆ.

    ನಿನ್ನೆ ಆಸಿಸ್​ ಪಡೆಯನ್ನು ರೋಹಿತ್​ ಶರ್ಮ ಅಕ್ಷರಶಃ ಕಾಡಿದರು. ಬೌಂಡರಿ ಹಾಗೂ ಸಿಕ್ಸರ್ ಸುರಿಮಳೆ ಮೂಲಕ ಆಸಿಸ್​ ಬೌಲರ್​ಗಳಿಗೆ ಬೆವರಿಳಿಸಿದರು. ಒಂದೇ ಪಂದ್ಯದಲ್ಲಿ 6 ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯುವ ಮೂಲಕ ಹಿಟ್​ಮ್ಯಾನ್​ ಅಂದ್ರೆ ಏನು ಎಂಬುದನ್ನು ಸಾಬೀತು ಮಾಡಿದರು. ಇನ್ನು ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮ, ಅನಿರೀಕ್ಷಿತ ಕಾಮೆಂಟ್ ಮಾಡಿದ್ದಾರೆ. ಅದೇನೆಂದು ನಾವೀಗ ತಿಳಿಯೋಣ.

    ನಿರ್ಣಾಯಕ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಅತ್ಯದ್ಭುತ ಫಾರ್ಮ್​​ಗೆ ಮರಳಿದರು. ಆಸಿಸ್ ವಿರುದ್ಧದ ಕೊನೆಯ ಸೂಪರ್ 8 ಪಂದ್ಯದಲ್ಲಿ ಭಾರತ 24 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಶತಕ ವಂಚಿತರಾದರು. ಬಳಿಕ ಟೀಮ್​ ಇಂಡಿಯಾ ನೀಡಿದ 206 ರನ್‌ಗಳ ಬೃಹತ್ ಗುರಿಯನ್ನು ಮುರಿಯನ್ನು ಬೆನ್ನತ್ತ ಆಸಿಸ್​ ಪಡೆ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು.

    ಪಂದ್ಯದ ಬಳಿಕ ಮಾತನಾಡಿದ ರೋಹಿತ್​ ಶರ್ಮ, ನನಗೆ ಮೊದಲಿನಿಂದಲೂ ಹೀಗೆಯೇ ಆಡಿ ಅಭ್ಯಾಸ. ನಾನು ಮೊದಲೇ ಹೇಳಿದ್ದೆ, ಆಕ್ರಮಣಕಾರಿಯಾಗಿ ಆಡಿ ಬೌಲರ್‌ಗಳ ಮೇಲೆ ಒತ್ತಡ ಹೇರಬೇಕು. ಆಗ ಅವರು ರಕ್ಷಣಾತ್ಮಕ ಮನೋಭಾವವನ್ನು ಹೊಂದುತ್ತಾರೆ. ಅದನ್ನೇ ನಾನು ಎಲ್ಲ ಪಂದ್ಯಗಳಲ್ಲಿ ಅನ್ವಯಿಸಲು ಬಯಸುತ್ತೇನೆ. ಆದರೆ, ಈ ಕ್ರಮದಲ್ಲಿ ನಾನು ಶತಕದ ಬಗ್ಗೆ ಯೋಚಿಸುವುದಿಲ್ಲ. ಆದರೆ ನನಗೆ ತಂಡದ ಯಶಸ್ಸು ತುಂಬಾ ಮುಖ್ಯ ಎಂದು ರೋಹಿತ್​ ಹೇಳಿದರು. 90 ರನ್ ಗಳಿಸಿದ ನಂತರ ಕೆಲವರು ಶತಕವನ್ನು ನೋಡುತ್ತಾರೆ. ಆದರೆ, ನಾನು ಅಂತಹ ವ್ಯಕ್ತಿಯಲ್ಲ ಎಂದು ರೋಹಿತ್ ಹೇಳಿದರು.

    ಸದ್ಯ ರೋಹಿತ್​ ಆಡಿದ ಮಾತುಗಳು ವೈರಲ್​ ಆಗಿದ್ದು, ಕ್ರೀಡಾಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ರೋಹಿತ್​ ಓರ್ವ ನಿಸ್ವಾರ್ಥ ಆಟಗಾರ ಎಂದು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

    ನಿಜ ಹೇಳ್ತೀನಿ 2 ಬಾರಿ ಅನುಷ್ಕಾ ಶರ್ಮಾರನ್ನು… ಮದ್ವೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವಿಜಯ್​ ಮಲ್ಯ ಪುತ್ರ!

    ಅದರ ಮೇಲೆಯೇ ಕಣ್ಣು… ಬಟ್ಟೆ ಬಿಚ್ಚಿದ್ದನ್ನು ಟ್ರೋಲ್​ ಮಾಡಿದವರಿಗೆ ಖಡಕ್​ ಉತ್ತರ ಕೊಟ್ಟ ಅನಸೂಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts