More

    ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು?​ ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?

    ನವದೆಹಲಿ: ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. 13 ವರ್ಷಗಳಿಂದ ಕಬ್ಬಿಣದ ಕಡಲೆಯಾಗಿದ್ದ ವಿಶ್ವಕಪ್ ಅನ್ನು ಟೀಮ್​ ಇಂಡಿಯಾ ಕೊನೆಗೂ ಗೆದ್ದುಕೊಂಡಿದೆ. ಜೂನ್​ 29ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕಿರು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ 7 ರನ್​ಗಳ ಜಯ ಸಾಧಿಸಿತು.

    ಒಂದು ಹಂತದಲ್ಲಿ ಗೆಲುವು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್​ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಸೂಪರ್ ಬೌಲಿಂಗ್‌ನೊಂದಿಗೆ ದಾಳಿ ನಡೆಸಿದರು. ಕ್ಲಾಸೆನ್-ಮಿಲ್ಲರ್‌ರಂತಹ ಅಗ್ರ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದರೂ, ದಕ್ಷಿಣ ಆಫ್ರಿಕಾ 30 ಎಸೆತಗಳಲ್ಲಿ 30 ರನ್ ಗಳಿಸಬೇಕಾದ ಸುಲಭ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಸೋಲಿನೊಂದಿಗೆ ಆಫ್ರಿಕಾ ಮತ್ತೊಮ್ಮೆ ಚೋಕರ್ಸ್​ ಪಟ್ಟವನ್ನು ಹೊತ್ತುಕಂಡಿದೆ. ಭಾರತದ ಗೆಲುವಿನಿಂದ ಕೋಟ್ಯಂತರ ಅಭಿಮಾನಿಗಳು ಇದೀಗ ಸಂತಸದಲ್ಲಿ ಮುಳುಗಿದ್ದಾರೆ.

    ಟೀಮ್​ ಇಂಡಿಯಾದ ಗೆಲುವನ್ನು ಜನರು ಅದ್ಧೂರಿಯಾಗಿ ಆಚರಿಸಿದರು. ರಸ್ತೆಗೆ ಬಂದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ವಿಶ್ವಕಪ್ ಕನಸು ನನಸಾಗಿರುವುದರಿಂದ ಭಾರತದ ಆಟಗಾರರು ಸಖತ್​ ಸಂಭ್ರಮಿಸಿದರು. ಅಲ್ಲದೆ, ಭಾವುಕರಾದರು. ಚಾಂಪಿಯನ್ ಆಗುತ್ತಿದ್ದಂತೆ ಟೀಮ್​ ಇಂಡಿಯಾ ಆಟಗಾರರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸುವುದರ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

    ಆದರೆ, ನಾಯಕ ರೋಹಿತ್ ಶರ್ಮ ತಮ್ಮ ವಿಶ್ವಕಪ್ ಕನಸು ನನಸಾಗುತ್ತಿದ್ದಂತೆ ಮಗುವಿನಂತೆ ಅಳುತ್ತಿದ್ದರು. ಒಂದು ಕಡೆ ಅಳುತ್ತಾ ಇನ್ನೊಂದು ಕಡೆ ನಗುತ್ತಾ ಮಿಶ್ರ ಭಾವನೆಗಳನ್ನು ತೋರಿಸಿದರು. ರಾಷ್ಟ್ರಧ್ವಜವನ್ನು ತೆಗೆದುಕೊಂಡು ಬಂದು ನೆಲದಲ್ಲಿ ನೆಟ್ಟರು. ಆದರೆ ವಿಶ್ವಕಪ್ ವೇಳೆ ರೋಹಿತ್​ ಮಾಡಿದ ಆ ಒಂದು ಕೆಲಸ ಇದೀಗ ವೈರಲ್ ಆಗುತ್ತಿದೆ.

    ವಿಶ್ವಕಪ್ ವೇಳೆ ರೋಹಿತ್ ವಿಚಿತ್ರವಾಗಿ ನಡೆದಿದ್ದರು. ಹಿಟ್‌ಮ್ಯಾನ್ ಸ್ವಲ್ಪ ಕೆಳಗೆ ಬಾಗಿ ವಿಭಿನ್ನ ಶೈಲಿಯಲ್ಲಿ ನಡೆಯುವ ಮೂಲಕ ವೇದಿಕೆಯನ್ನು ತಲುಪಿದರು. ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರ ಕೈಯಿಂದ ಟ್ರೋಫಿ ಸ್ವೀಕರಿಸಿ ಸಂಭ್ರಮದಲ್ಲಿ ಮುಳುಗಿದರು. ರೋಹಿತ್ ನಡೆಗೆ ಅರ್ಥ ತಿಳಿದ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಆದರೆ, ಇದು ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯ ಶೈಲಿ ಎಂದು ಅನೇಕರಿಗೆ ತಿಳಿದಿಲ್ಲ. ಅರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ ಗೆದ್ದಾಗ ಮೆಸ್ಸಿ ಕೂಡ ಇದೇ ರೀತಿ ಸಂಭ್ರಮಿಸಿದ್ದರು. ಅಂದಿನಿಂದ ಈ ವಿಭಿನ್ನ ಆಚರಣೆಯು ಬಹುತೇಕ ಸಾಂಪ್ರದಾಯಿಕವಾಗಿದೆ.

    ಇತರ ಕ್ರೀಡೆಗಳಲ್ಲಿಯೂ ಕಪ್ ಗೆದ್ದಾಗ ಈ ರೀತಿ ಮಾಡುವುದು ಸಾಮಾನ್ಯವಾಗಿದೆ. ರೋಹಿತ್ ಕೂಡ ಮೆಸ್ಸಿಯ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. (ಏಜೆನ್ಸೀಸ್)

    ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

    ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿ​ ಹಾರ್ದಿಕ್​ ಕಣ್ಣೀರು: ಪತ್ನಿ ನತಾಶಾ ಪೋಸ್ಟ್​ಗೆ ಫ್ಯಾನ್ಸ್​ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts