More

    ವಿಶ್ವಕಪ್​ಗೆ ಕೊಡಬೇಕಾದ ಗೌರವ ಇದು! ಕಪ್​ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್ ಕಾಲೆಳೆದ ಭಾರತೀಯರು​

    ನವದೆಹಲಿ: ಟಿ20 ವಿಶ್ವಕಪ್-2024 ಗೆದ್ದ ಭಾರತ ತಂಡವನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ. 13 ವರ್ಷಗಳ ಕಪ್ ಕನಸು ಇದೀಗ ಈಡೇರಿದ್ದು, ಟೀಮ್​ ಇಂಡಿಯಾ ಸೆಲ್ಯೂಟ್​ ಹೊಡೆಯುತ್ತಿದ್ದಾರೆ. ಕಪ್ ಗೆದ್ದ ಭಾರತದ ಜೊತೆಗೆ ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ. ಕೊನೆಯವರೆಗೂ ತಂಡದ ಹೋರಾಟದ ರೀತಿ ಅದ್ಭುತವಾಗಿತ್ತು ಎಂದು ಬಣ್ಣಿಸುತ್ತಿದ್ದಾರೆ. ಹರಿಣಗಳ ಹೋರಾಟದಿಂದ ಪಂದ್ಯವೂ ಕೊನೆಯ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿತು. ರೋಹಿತ್-ಮಾರ್ಕ್ರಾಮ್ ತಂಡವನ್ನು ಹೊಗಳುತ್ತಿರುವ ಭಾರತೀಯ ಅಭಿಮಾನಿಗಳು ಆಸ್ಟ್ರೇಲಿಯಾವನ್ನು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಏಕದಿನ ವಿಶ್ವಕಪ್-2023 ಫೈನಲ್. ಆ ಪಂದ್ಯದ ಕೊನೆಯಲ್ಲಿ ಕಪ್ ಗೆದ್ದ ಖುಷಿಯಲ್ಲಿ ಕಾಂಗರೂ ಆಟಗಾರರು ಅತಿಯಾಗಿ ವರ್ತಿಸಿದರು. ತಂಡದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಕಪ್‌ ಮೇಲೆ ಕಾಲಿಟ್ಟ ದೃಶ್ಯ ಇಂದಿಗೂ ಕಣ್ಣ ಮುಂದಿದೆ. ಅದೇ ಕ್ಷಣವನ್ನು ಇದೀಗ ಟ್ರೋಲ್​ ಮಾಡಲಾಗುತ್ತಿದೆ.

    ವಿಶ್ವಕಪ್ ಗೆದ್ದ ನಂತರ ಮಾರ್ಷ್ ಡ್ರೆಸ್ಸಿಂಗ್ ರೂಂನಲ್ಲಿ ನಡೆದುಕೊಂಡ ರೀತಿ ಆ ಸಮಯದಲ್ಲಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಮಾರ್ಷ್ ತನ್ನ ಕಾಲುಗಳನ್ನು ಕಪ್ ಮೇಲೆ ಇಟ್ಟುಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರೊಂದಿಗೆ ಆಸ್ಟ್ರೇಲಿಯಾಕ್ಕೆ ಆಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಪ್ರತಿಷ್ಠಿತ ಕಪ್​ಗೆ ಕೊಟ್ಟ ಗೌರವ ಇದೇನಾ? ಎಂದು ಕ್ರೀಡಾಭಿಮಾನಿಗಳು ಪ್ರಶ್ನೆ ಮಾಡಿದ್ದರು. ಆಸೀಸ್ ಆಟಗಾರರಾಗಲಿ ಅಥವಾ ಆ ದೇಶದ ಆಡಳಿತ ಮಂಡಳಿಯಾಗಲಿ ಈ ನಡೆಯನ್ನು ಖಂಡಿಸಿದ ದಾಖಲೆ ಇಲ್ಲ. ಇದನ್ನು ಭಾರತೀಯ ಅಭಿಮಾನಿಗಳು ಈಗಲೂ ನೆನಪಿಸುತ್ತಿದ್ದಾರೆ. ಟಿ20 ವಿಶ್ವಕಪ್ ಗೆದ್ದ ನಂತರ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ನಡೆಯನ್ನು ಹೈಲೈಟ್ ಮಾಡುತ್ತಿದ್ದಾರೆ. ಹಿಟ್‌ಮ್ಯಾನ್ ತನ್ನ ಮನಃಪೂರ್ವಕವಾಗಿ ವಿಶ್ವಕಪ್ ಅನ್ನು ಆನಂದಿಸಿದ್ದನ್ನು ಮುಂದಿಟ್ಟು ಮಾರ್ಷ್​ಗೆ ಬುದ್ಧಿಮಾತು ಹೇಳುತ್ತಿದ್ದಾರೆ.

    ಕಪ್ ಗೆದ್ದ ನಂತರ ರೋಹಿತ್ ಭಾವುಕರಾದರು. ತನ್ನ ಸಹ ಆಟಗಾರರನ್ನು ಅಪ್ಪಿಕೊಂಡು ಕಣ್ಣೀರು ಸಹ ಹಾಕಿದರು. ಕೊನೆಯ ಓವರ್ ಬೌಲಿಂಗ್ ಮಾಡಿ ಪಂದ್ಯಕ್ಕೆ ತಿರುವು ನೀಡಿದ ಹಾರ್ದಿಕ್ ಪಾಂಡ್ಯಗೆ ಮುತ್ತಿಟ್ಟರು. ಬಳಿಕ ಮೈದಾನದಲ್ಲಿ ರಾಷ್ಟ್ರಧ್ವಜ ಹಿಡಿದು ಹಾರಿಸಿದರು. ಕಪ್ ಹಿಡಿದುಕೊಂಡು ಕೊಹ್ಲಿ ಜೊತೆ ಫೋಟೋಗೆ ಪೋಸ್ ಕೊಟ್ಟರು. ಈ ಕ್ರಮದಲ್ಲಿ ರೋಹಿತ್​ ಕಪ್ ಅನ್ನು ತನ್ನ ಎದೆಗೆ ಒತ್ತಿ ಹಿಡಿದರು. ಈ ಕ್ಷಣವನ್ನು ಕಳೆದ ವಿಶ್ವಕಪ್‌ನಲ್ಲಿ ಆಸೀಸ್ ಆಟಗಾರ ಮಾರ್ಷ್ ಕಾಲಿಟ್ಟ ಕ್ಷಣಕ್ಕೆ ಹೋಲಿಕೆ ಮಾಡಿ ಅಭಿಮಾನಿಗಳು ಇದೀಗ ನೆನಪಿಸಿಕೊಳ್ಳುತ್ತಿದ್ದಾರೆ.

    ಮಾರ್ಷ್​ ತನ್ನ ಕೆಲಸದಿಂದ ವಿಶ್ವಕಪ್ ಅನ್ನು ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸುವ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ನೋಯಿಸಿದರೆ, ರೋಹಿತ್ ಎಲ್ಲರ ಮನ ಗೆದ್ದಿದ್ದಾರೆ ಎಂದು ಕ್ರೀಡಾಭಿಮಾನಿಗಳು ಹೇಳುತ್ತಿದ್ದಾರೆ. ಇದು ಉಭಯ ದೇಶಗಳ ಸಂಸ್ಕೃತಿಯ ನಡುವಿನ ವ್ಯತ್ಯಾಸ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಭಾರತದಲ್ಲಿ ಬಾಲ್ಯದಿಂದಲೇ ಗೌರವ ಕಲಿಸಲಾಗುತ್ತದೆ ಎಂದು ಆಸಿಸ್​ ಪಡೆಯನ್ನು ಟೀಕಿಸುತ್ತಿದ್ದಾರೆ. ನಿನ್ನೆ ರೋಹಿತ್ ಕಪ್​ಗೆ ತೋರಿದ ಗೌರವ, ಪ್ರೀತಿಯೇ ಇದಕ್ಕೆ ಸಾಕ್ಷಿ. ಆಸೀಸ್​ನಲ್ಲಿ ಈ ರೀತಿ ಕಲಿಸುವುದಿಲ್ಲ ಎಂದು ನೆಟಿಜನ್​ಗಳು ಕಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಝೀರೋ ಅಲ್ಲ ಹೀರೋ: ಅಂದು ವೇಸ್ಟ್​ ಎಂದು ಹೀಯಾಳಿಸಿದ್ರು ಆದ್ರೆ ಇಂದು ವಿಶ್ವಕಪ್​ ಗೆಲುವಿಗೆ ಆತನೇ ಕಾರಣನಾದ!

    ಆತನಿಂದ ನಾನು ಮೋಸ ಹೋದೆ! ನೋವಿನ ಸಂಗತಿ ಬಿಚ್ಚಿಟ್ಟ ನಟಿ ನಿವೇತಾ ಪೇತುರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts