More

    ಅಂದು ರೋಹಿತ್ ಮಾಡಿದ ಪ್ಲಾನ್​ ಯಾರಿಗೂ ಅರ್ಥವಾಗಲಿಲ್ಲ ಇಂದು ಅದೇ ಪ್ಲಾನ್​ ಫೈನಲ್​​ ಎಂಟ್ರಿಗೆ ಕಾರಣವಾಯ್ತು!

    ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ತನ್ನ ಯಶಸ್ಸಿನ ನಾಗಾಲೋಟವನ್ನು ಮುಂದುವರಿಸಿದೆ. ಕಪ್ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿದ ಭಾರತ, ಸೆಮಿಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದು, ಪ್ರಶಸ್ತಿ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ವಿಶ್ವಕಪ್ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಆಡಿದ ಮಾತು ಇದೀಗ ವೈರಲ್ ಆಗಿದೆ.

    ಈ ಮೆಗಾ ಟೂರ್ನಮೆಂಟ್‌ ಆರಂಭಕ್ಕೂ ಮುನ್ನ ರೋಹಿತ್ ಶರ್ಮ ಅವರು ಟೀಮ್​ ಇಂಡಿಯಾದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ಆದರೆ ಅದಕ್ಕೆ ಕಾರಣ ಬಹಿರಂಗವಾಗಿರಲಿಲ್ಲ. ಆದರೆ ಇದೀಗ ರೋಹಿತ್ ನಿರ್ಧಾರ ಸರಿ ಎಂದು ಸ್ಪಿನ್ನರ್​ಗಳು ಸಾಬೀತು ಪಡಿಸುತ್ತಿದ್ದಾರೆ.

    ವಿಶ್ವಕಪ್‌ನಂತಹ ಮೆಗಾಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಮುನ್ನ ಪ್ರತಿಯೊಂದು ತಂಡಗಳು ತಮ್ಮದೇಯಾದ ಕಾರ್ಯತಂತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತವೆ. ಆದಾಗ್ಯೂ, ಪಂದ್ಯಾವಳಿಯನ್ನು ಆಯೋಜಿಸುವ ಆಧಾರದ ಮೇಲೆ, ತಂಡದಲ್ಲಿ ಬದಲಾವಣೆಗಳು ಮತ್ತು ಸಂಯೋಜನೆಗಳನ್ನು ಮಾಡಬೇಕಾಗಿದೆ. ಇದನ್ನು ಮೊದಲೇ ಗ್ರಹಿಸುವ ನಾಯಕನು ಸುಲಭವಾಗಿ ಯಶಸ್ಸನ್ನು ಅನುಭವಿಸುತ್ತಾನೆ. ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಮಾಡಿದ್ದು ಕೂಡ ಇದನ್ನೇ.

    ವಿಶ್ವಕಪ್ ಟೂರ್ನಿ ನಡೆಯಲಿರುವ ಪಿಚ್​ಗಳನ್ನು ಮೊದಲೇ ಊಹಿಸಿ ರೋಹಿತ್ ತಂಡವನ್ನು ಸಿದ್ಧಪಡಿಸಿದರು. ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಹಲವು ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದರು. ಈ ಟೂರ್ನಿಯಲ್ಲಿ ನಾವು ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯಲು ಬಯಸಿದ್ದೇವೆ ಎಂದು ಬಹಿರಂಗಪಡಿಸಿದರು. ಆದರೆ ಇದಕ್ಕೆ ಕಾರಣವನ್ನು ಈಗ ಹೇಳುವುದಿಲ್ಲ ಎಂದು ಹೇಳಿದ್ದರು.

    ಅಮೆರಿಕದಂತಹ ಹೊಸ ಪಿಚ್​ಗಳಲ್ಲಿ ವೇಗಿಗಳ ಪ್ರಭಾವ ಬೀರಲಿದ್ದು, ನಾಲ್ವರು ಸ್ಪಿನ್ನರ್​ಗಳೊಂದಿಗೆ ಕಣಕ್ಕೆ ಇಳಿದಿದರೆ ತಂಡಕ್ಕೆ ನಷ್ಟ ಎಂದು ರೋಹಿತ್ ವಿರುದ್ಧ ಕೆಲವರು ವಾಗ್ದಾಳಿ ನಡೆಸಿದ್ದರು. ಆದರೆ ಆಗ ರೋಹಿತ್ ಪ್ಲಾನ್ ಯಾರಿಗೂ ಅರ್ಥವಾಗಲಿಲ್ಲ. ಈಗ ಆ ಪ್ಲಾನ್ ಭಾರತವನ್ನು ಗೆಲ್ಲಿಸಿದೆ. ಅಲ್ಲದೆ, ಫೈನಲ್​ಗೆ ಹೋಗಲು ಕೂಡ ಅದೇ ಪ್ಲಾನ್​ ವರವಾಗಿದೆ. ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿರಬೇಕು ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದರು. ಅದರ ಭಾಗವಾಗಿ ಅವರು ಯಜ್ವೇಂದ್ರ ಚಹಾಲ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನು ಹೆಸರಿಸಿದ್ದರು. ಈಗ ಅದೇ ಸ್ಪಿನ್ನರ್​ಗಳು ಟೀಮ್​ ಇಂಡಿಯಾಗೆ ಗೆಲುವು ತಂದುಕೊಡುತ್ತಿದ್ದಾರೆ.

    ಜಡೇಜಾ ಮಿಂಚದಿದ್ದರೂ ಅಕ್ಷರ್ ಮತ್ತು ಕುಲದೀಪ್ ಯಾದವ್ ಪರಿಸ್ಥಿತಿಗೆ ಅನುಗುಣವಾಗಿ ವಿಕೆಟ್ ಪಡೆಯುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕುಲದೀಪ್ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಹಿಟ್​ಮ್ಯಾನ್ ಪಿಚ್ ಪರಿಸ್ಥಿತಿ ಮತ್ತು ಎದುರಾಳಿಯನ್ನು ಅವಲಂಬಿಸಿ ತಂಡವನ್ನು ಸಿದ್ಧಪಡಿಸಿದ್ದರು. ಕುಲದೀಪ್ ಈ ಟೂರ್ನಿಯಲ್ಲಿ ಇದುವರೆಗೆ 10 ವಿಕೆಟ್ ಪಡೆದಿದ್ದರೆ, ಅಕ್ಷರ್ ಪಟೇಲ್ ಕೂಡ ತಮ್ಮ ಅದ್ಭುತ ಬೌಲಿಂಗ್ ಮೂಲಕ ಗೆಲುವಿನಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವೆಸ್ಟ್​ಇಂಡೀಸ್ ಪಿಚ್‌ಗಳು ಸ್ಪಿನ್‌ಗೆ ಸೂಕ್ತವಾಗಿರುತ್ತದೆ ಎಂಬುದು ರೋಹಿತ್​ಗೆ ಮೊದಲೇ ಗೊತ್ತಿತ್ತು. ಹೀಗಾಗಿ ಅವರು ಸ್ಪಿನ್ನರ್​ಗಳಿಗೆ ಆದ್ಯತೆ ನೀಡಿದರು. (ಏಜೆನ್ಸೀಸ್​)

    ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಯನ್ನು ಬೆಂಬಲಿಸುತ್ತೀರಾ? ರೋಹಿತ್​ ಶರ್ಮ ಕೊಟ್ಟ ಉತ್ತರ ವೈರಲ್​

    ವಿರಾಟ್​ ಕೊಹ್ಲಿ ಹತ್ತಿರ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಾಕಿದ ರೋಹಿತ್​ ಶರ್ಮ! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts